ಜವಳಿ ಉದ್ಯಮ ಸ್ವಾವಲಂಭಿ ಬದುಕಿಗೆ ಸಹಕಾರಿ : ಗಂಗಯ್ಯ

ಹಾವೇರಿ

       ನಿರುದ್ಯೋಗ ಯುವಕ, ಯುವತಿಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೈಮಗ್ಗ ಮತ್ತು ಜವಳಿ ಉದ್ಯಮ ಅತ್ಯಂತ ಪೂರಕವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ಅವರು ಹೇಳಿದರು.ದೇವರಾಜ ಅರಸು ಭವನದಲ್ಲಿ ಸೋಮವಾರ ನೂತನ ಜವಳಿ ನೀತಿಯಡಿ ಕೈಮಗ್ಗ ಮತ್ತು ಜವಳಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಉದ್ಯಮಶೀಲರಿಗೆ ಎರಡು ದಿನದ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

       ನೂತನ ಜವಳಿ ನೀತಿಯಡಿ ಬ್ಯಾಂಕ್‍ಗಳಿಗೆ ನೇರ ಸಾಲಪಡೆಯಲು ನೂತನ ಉದ್ಯಮಿದಾರರಿಗೆ ಇಲಾಖೆ ನೆರವು ಒದಗಿಸುತ್ತಿದೆ ಹಾಗೂ ಜವಳಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿವದಿರಗೆ ಇಲಾಖೆಯಿಂದ ತರಬೇತಿ ಸಹ ನೀಡಲಾಗುತ್ತಿದೆ. ರಾಜ್ಯದಲ್ಲಿ 144 ತರಬೇತಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ಈ ತರಬೇತಿಯಿಂದ ಹೆಣ್ಣು ಮಕ್ಕಳಿಗೆ ಹೆಚ್ಚು ಉಪಯೋಗವಾಗುತ್ತಿದೆ ಎಂದು ಹೇಳಿದರು.

        ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರವೀಂದ್ರ ಜಿ.ಎಂ. ಅವರು ಮಾತನಾಡಿ, ಜವಳಿ ಮತ್ತು ಕೈಮಗ್ಗ ಉದ್ಯಮ ಕುರಿತಂತೆ ನಿರುದ್ಯೋಗ ಯುವಕ, ಯುವತಿಯರಿಗೆ ಒಂದು ತಿಂಗಳ ತರಬೇತಿ ನೀಡಲಾಗುವುದು. ತರಬೇತಿ ನಂತರ ಬ್ಯಾಂಕಿನಿಂದ ಬಡ್ಡಿರಹಿತ ಸಾಲ ಒದಗಿಸಲಾಗುತ್ತದೆ. ಗ್ರಾಮೀಣ ಭಾಗದ ಯುವಕ, ಯುವತಿಯರು ಇದರ ಸದುಪಯೋಗ ಪಡೆದುಕೊಂಡು ಸ್ವಂತ ಉದ್ಯೋಗ ಆರಂಭಿಸಲು ಕರೆ ನೀಡಿದರು.

        ಸಂಪನ್ಮೂಲ ವ್ಯಕ್ತಿ ಶಶಿಕಲಾ ಅವರು ಕೈಮಗ್ಗ ಮತ್ತು ಜವಳಿ ಉದ್ಯಮದಲ್ಲಿ ತರಬೇತಿ ಪಡೆದ ಮಹಿಳೆಯರು ರಾಜ್ಯದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವಂತ ಬದುಕನ್ನು ರೂಪಿಸಿಕೊಂಡಿದ್ದಾರೆ. ಎಲ್ಲ ಮಹಿಳೆಯರು ತರಬೇತಿಯನ್ನು ಹೊಂದುವುದರ ಮೂಲಕ ಉತ್ತಮ ಬದುಕನ್ನು ನಡೆಸಬಹುದು ಎಂದು ಹೇಳಿದರು.

       ಗ್ರಾಮೀಣ ಉದ್ಯಮದಾರ ರಾಘವೇಂದ್ರ ವಡ್ಡಿಗೇರಿ ಮಾತನಾಡಿ, ಹೊಸ ಉದ್ಯಮವನ್ನು ಆರಂಭಿಸಲು ತರಬೇತಿ, ಸಂಪನ್ಮೂಲ, ಮಾರ್ಗದರ್ಶನ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಜವಳಿ ಕ್ಷೇತ್ರದಲ್ಲಿ ಬೆಳೆಯಲು ತರಬೇತಿಯ ಜೊತೆಗೆ ನೆರವು ಒದಗಿಸುವುದರಿಂದ ಹೊಸ ಹೊಸ ಉದ್ಯಮಿದಾರರು ಬೆಳೆಯಲು ಸಹಾಯಕವಾಗಿದೆ. ಗ್ರಾಮೀಣರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.ವಿಜಯಾ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಕೌನ್ಸಲರ್ ಬಿ.ಎ.ಕಲ್ಪಾದ್ರಿ, ಜವಳಿ ಪ್ರವರ್ಧನ ಅಧಿಕಾರಿ ತಿಪ್ಪೇಸ್ವಾಮಿ, ವಿನಾಯಕ ಜೋಷಿ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link