“ಶೌಚಾಲಯ ಅರಿವು ಕಾರ್ಯಕ್ರಮ”

ಹರಿಹರ :

          ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಎಷಿಯನ್ ಅಭಿವೃದ್ದಿ ಬ್ಯಾಂಕ್ ನೆರವಿನ ಸಹಯೋಗದೊಂದಿಗೆ ಕರ್ನಾಟಕ ನೀರು ಸರಬರಾಜು ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ -ಜಲಸಿರಿ, ಫಲಿತಾಂಶ ಆಧಾರಿತ ನೇರವು (ಔಃಂ)ಶೌಚಾಲಯ ಕಾರ್ಯಕ್ರಮ, ಹಾಗೂ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್) ರಾಣೇಬೆನ್ನೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ “ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಅರಿವು ಮತ್ತು ಒಳಚರಂಡಿ ಸಂಪರ್ಕ 24×7 ನೀರು ಸರಬರಾಜು ಯೋಜನೆಯ ಅರಿವು ಕಾರ್ಯಕ್ರಮ”ವನ್ನು ದಿನಾಂಕ 13-12-2018 ರಂದು ಹರಿಹರ ನಗರದ ಸರಕಾರಿ ಪ್ರೌಡಶಾಲೆ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.

          ಪ್ರಾಸ್ಥಾವಿಕವಾಗಿ ಮಾತನಾಡಿದ ಸಾರ್ವಜನಿಕ ಸಂವಹನ ತಜ್ಷರಾದ ಶ್ರೀ ಎಚ್ ಉಮೇಶ ಇವರು ಯೋಜನೆಯ ಕುರಿತಾಗಿ ಮಾತನಾಡಿದರು.

           ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರೇವಣಸಿದ್ದಪ್ಪ ಇವರು ಯೋಜನೆಯ ನಗರದ ಜನತೆಗೆ ಅತ್ಯಂತ ಆಶಾದಾಯಕವಾಗಿದೆ ಇದರಿಂದ ನಗರದ ಪ್ರತಿಯೊಂದು ಕುಟುಂಬ ಸಹ ದಿನದ 24 ತಾಸು ಶುದ್ದ ಕುಡಿಯುವ ನೀರನ್ನು ಪಡೆಯಬಹುದು ಹಾಗೂ ನೀವುಗಳು ಒಳಸಿದ ನೀರಿಗೆ ತಕ್ಕಂತೆ ಧರವನ್ನು ಕಟ್ಟಬೇಕಾಗುತ್ತದೆ ಅಂದರೆ ನಿಮ್ಮ ಮನೆಗಳ ನಳಗಳಿಗೆ ಮೀಟರನ್ನು ಅಳವಡಿಸಲಾಗುತ್ತದೆ ಎಂದರು. ಅದರಂತೆ ಸ್ವಚ್ಚತೆಯ ಕಡೆಗೂ ಸಹ ಮಕ್ಕಳು ಗಮನವನ್ನು ಹರಿಸಬೇಕು ಮನೆಯಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ನಗರಸಭೆ ವಾಹನಗಳಲ್ಲಿ ಹಾಕಿ ನಗರದ ಸ್ವಚ್ಚತೆಗೆ ಸಹಕರಿಸಿ, ಅಲ್ಲದೇ ಎಲ್ಲರೂ ಸಹ ಒಳಚರಂಡಿ ಸಂಪರ್ಕವನ್ನು ಪಡೆಯಬೇಕೆಂದು ತಿಳಿಸಿದರು.

           ಕಾರ್ಯಕ್ರಮದಲ್ಲಿ ಮುಖ್ಯ ಅತಿಥೀಗಳಾಗಿ ಆಗಮಿಸಿದ ಶ್ರೀ ತಮ್ಮಯ್ಯಗೌಡ್ರ ಜಿ ಎಸ್ ಸಹಾಯಕ ಕಾರ್ಯನಿವಾಹಕ ಅಭಿಯಂತರರು  ನಗರಸಭೆ ಹರಿಹರ ಇವರು ಮಾತನಾಡುತ್ತಾ ಈಗಾಗಲೇ ನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಪ್ರಗತಿಯ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಮುಕ್ತಾಯ ಹಂತವನ್ನು ತಲುಪಲಿದೆ ಕುಡಿಯುವ ನೀರು ಪ್ರತಿಯೊಂದು ಕುಟುಂಬಕ್ಕೂ ದೊರಕಬೇಕೆನ್ನುವುದು ಯೋಜನೆಯ ಉದ್ದೇಶವಾಗಿದೆ ಅದರಂತೆ ಶೇ 100% ರಷ್ಟು ಶೌಚಾಲಯಗಳನ್ನು ಹೊಂದಿರಬೇಕು ಹಾಗೂ ಒಳಚರಂಡಿ ಸಂಪರ್ಕವನ್ನು ಪಡೆಯಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಇದರ ಬಗ್ಗೆ ನಿಮ್ಮ ಮನೆಯ ಪಾಲಕರಿಗೆ ತಿಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

           ಕಾರ್ಯಕ್ರಮದ ಉಪನ್ಯಾಸಕರಾದ ಶ್ರೀ ಮಹೇಶ ದೊಡ್ಮನಿ ಡಯಟ್ ಕಾಲೇಜ್ ದಾವಣಗೇರಿ ಇವರು ಮಾತನಾಡಿ ಪರಿಸರ ನಾಶ ಮುಕುಲದ ವಿನಾಶ ಅದರಂತೆ ನಾವುಗಳು ಭೂಮೀಯ ಮೇಲೆ ಹುಟ್ಟಿದಾಗ ಏನಾದರೊಂದು ಉಪಕಾರವನ್ನು ಮಾಡಬೇಕು ನಮ್ಮ ಮನೆಯ ಕಸವನ್ನು ತೆಗೆದು ಹಾಕುವುದರ ಜೊತೆಗೆ ಬೇರೆಯವರಿಗೂ ಸಹ ಚರಂಡಿಯಲ್ಲಿ ಕಸ ಹಾಕದಂತೆ ಹೇಳಬೇಕು ಬಯಲಿನಲ್ಲಿ ಮಲ ವಿಸರ್ಜನೆ ಮಾಡಬಾರದು, ಇದರಿಂದ ಪರಿಸರ ಕಲುಷಿತವಾಗಿ ಮಳೆಗಾಲದಲ್ಲಿ ನೀರಿನ ಜೊತೆಗೆ ಸೇರಿಕೊಂಡು ಜಲ ಮೂಲಗಳಲ್ಲಿ ಸೇರಿಕೊಂಡು ನಮಗೆ ಜಾಂಡಿಸ, ಕಾಲಾರಾ. ಮಲೇರಿಯಾ ರೋಗಗಳು ಹರಡುತ್ತವೆ ಇದನ್ನು ಹೋಗಲಾಡಿಸಲು ಎಲ್ಲರೂ ಶೌಚಾಲಯವನ್ನು ಕಟ್ಟಿಸಿಕೊಳ್ಳಬೇಕು ಅದರಂತೆ ಬಳಕೆಯ ವಿಭಾಗದ ಬಗ್ಗೆಯೂ ಸಹ ತಿಳಿದು ಕೊಂಡಿರಬೇಕು ಎಂದರು. ಪ್ಲಾಸ್ಟಿಕ್ ಕರಗದೆ ಇರುವ ವಸ್ತುವಾಗಿರುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಬಿಡಬೇಕೆಂದು ತಿಳಿಸಿದರು.

         ಕಾರ್ಯಕ್ರಮದ ಅದ್ಯಕ್ಷತೆಯನ್ನು ಸರಕಾರಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀನಿವಾಸ ಕೆ ಇವರು ಸ್ವಚ್ಚತೆಯ ಬಗ್ಗೆ ಹಾಗೂ ಸುಚಿತ್ವದ ಬಗ್ಗೆ ಮಕ್ಕಳಿಗೆ ಸ-ವಿಸ್ತಾರವಾಗಿ ಹೇಳಿದರು.

            ಈ ಕಾರ್ಯಕ್ರಮದಲ್ಲಿ ಸಮುದಾಯ ಅನುವುಗಾರರಾದ ಶ್ರೀಮತಿ ಸುಶೀಲಮ್ಮ ಕಿತ್ತೂರ, ಶ್ರೀ ಬಸವರಾಜ ಸಣ್ಣಿಂಗಮ್ಮನವರ, ಶ್ರೀಮತಿ ಉಮಾ ಎಸ್ ಭಾವಿಮಠ ಇವರು ಹಾಜರಿದ್ದರು.ಕಾರ್ಯಕ್ರಮದ ಪ್ರಾರ್ಥನೆಯನ್ನು ಕುಮಾರಿ ಚಲುವೆ ಇವರು ಮಾಡಿದರು.
ಸ್ವಾಗತ ಶ್ರೀಮತಿ ಮಾಲುಂ ಮೇಡಮ್ ಸಹಶಿಕ್ಷಕರು ಇವರು ಸಭೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ 78 ವಿದ್ಯಾರ್ಥಿನಿಯರು ಭಾಗವಹಿಸದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link