ಹಗರಿಬೊಮ್ಮನಹಳ್ಳಿ:
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಒಬ್ಬ ಆದರ್ಶ ಮಹಿಳೆಯಾಗಿದ್ದಾರೆ ಎಂದು ಜೆಸ್ಕಾಂನ ವಿಭಾಗದ ಇಇ ತೇಜಾನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯಲ್ಲಿ, ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸದ್ಗುಣೆ ಸಂಪನ್ನೆಯಾದ ಮಹಿಳೆ ಎಂದರೆ ಹೇಮರೆಡ್ಡಿ ಮಲ್ಲಮ್ಮ, ಅವರು ಭಕ್ತಿ ಪರಕಾಷ್ಠೆಯಲ್ಲಿ ಅಗ್ರರು, ಅವರ ಆದರ್ಶಗುಣಗಳನ್ನು ಅಳವಡಿಕಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿ ಅಪರ್ಣ, ಹಿರಿಯ ಸಹಾಯಕ ಬಾಲಪ್ಪ, ಮತ್ತೊಬ್ಬ ಹಿರಿಯ ಸಹಾಯಕ ರಾಮು, ಸಹಾಯಕ ಸೋಮಶೇಖರ್ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.