ಪೋಲಿಯೋ ಮೇಲಿನ ಗೆಲುವಿಗೆ ಎರಡು ಹನಿ ಲಸಿಕೆ ಹಾಕಿಸಿ : ಸೋಮಶೇಖರರೆಡ್ಡಿ

ಬಳ್ಳಾರಿ

      ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಎರಡು ಲಸಿಕೆಗಳನ್ನು ಹಾಕಿಸುವುದರ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಪೋಲಿಯೋ ಮುಕ್ತ ರಾಷ್ಟ್ರದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪಲ್ಸ್ ಪೊಲೀಯೋ ಅಭಿಯಾನದಲ್ಲಿ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಪೊಲೀಯೋ ಮೇಲಿನ ನಮ್ಮ ಗೆಲುವಿಗೆ ಕೇವಲ ಎರಡು ಹನಿಗಳು ಸಾಕು. ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮಾಡದೇ ತಮ್ಮ ಮಗುವಿಗೆ ಹಾಕಿಸಿ ಮತ್ತು ಸುತ್ತಮುತ್ತಲಿನ ಮನೆಗಳಲ್ಲಿನ ಮಕ್ಕಳಿಗೂ ಹಾಕಿಸಲು ಪ್ರಯತ್ನಿಸಿ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಸಿಇಒ ಕೆ.ನಿತೀಶ್ ಅವರು, ಸರಕಾರ ಹಾಗೂ ಸಾರ್ವಜನಿಕರ ವಿಶೇಷ ಪ್ರಯತ್ನದ ಫಲವಾಗಿ ಇಂದು ಭಾರತ ಪೊಲೀಯೋ ಮುಕ್ತರಾಷ್ಟ್ರವಾಗಿದ್ದು,ಇದರಲ್ಲಿ ಅಧಿಕಾರಿಗಳ ಶ್ರಮ ಅಪಾರವಾಗಿದೆ. ಪೊಲೀಯೋ ಮುಕ್ತವಾದಂತೆ ದೇಶ ಇನ್ನೀತರ ರೋಗಗಳ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರು ಪ್ರಯತ್ನಿಸಬೇಕು ಎಂದರು.

       ಪೋಷಕರೆಲ್ಲರು ತಮ್ಮ ಮಗುವನ್ನು ಪೊಲೀಯೋ ಬೂತ್‍ಗೆ ಕರೆತಂದು ಎರಡು ಹನಿ ಲಸಿಕೆ ಹಾಕಿಸಿ ಎಂದು ಅವರು ಮನವಿ ಮಾಡಿದರು.ಘೋಷಣೆ ಮಾಡಿದೆ. ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಸಾಮಾನ್ಯವಾಗಿ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಪೋಲಿಯೋ ಮೆಲಟೈಸ್ ಎಂಬ ಸೂಕ್ಷ್ಮಾಣುವಿನಿಂದ ಉಂಟಾಗುವ ಪೋಲಿಯೋ ರೋಗದ ನಿಯಂತ್ರಣಕ್ಕಾಗಿ 1995 ರಿಂದ ನಿರಂತರವಾಗಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರದ್ಯಾಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ಈ ವರ್ಷದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಇಂದು ನಡೆಯುತ್ತಿದೆ ಎಂದರು.

        1998ರಲ್ಲಿ 71 ಪ್ರಕರಣಗಳಿದ್ದ ಕರ್ನಾಟಕದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೂಲಕ ಪೋಲಿಯೋ ನಿರ್ಮೂಲನೆಗೆ ಪಣ ತೊಡಲಾಯಿತು. 2007 ರಲ್ಲಿ ಕರ್ನಾಟಕದಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿದೆ. ದೇಶದಲ್ಲಿ 2011ರ ನಂತರ ಇದುವರೆಗೆ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ ಎಂದರು.

        ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ರವೀಂದ್ರನಾಥ್ ಎಮ್.ಹೆಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ 2829591 ಜನಸಂಖ್ಯೆ ಹಾಗೂ 558880 ಮನೆಗಳನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯ 7 ತಾಲ್ಲೂಕುಗಳಲ್ಲಿ 295274 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಒಟ್ಟು 1706 ಬೂತ್‍ಗಳು ಸೇರಿದಂತೆ 1525 ಮನೆ ಬೇಟಿ ತಂಡಗಳು, 95 ಟ್ರಾನ್ಸಿಟ್ ತಂಡಗಳು, 21 ಸಂಚಾರಿ ತಂಡಗಳು ಸೇರಿಂದತೆ ಒಟ್ಟು 1641 ತಂಡಗಳನ್ನು ನಿಯೋಜಿಸಿಲಾಗಿದ್ದು 3282 ಜನ ಲಸಿಕೆ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

         ಒಟ್ಟು 237 ಕ್ಲಿಷ್ಟಕರ ಸ್ಥಳಗಳನ್ನು ಗುರ್ತಿಸಲಾಗಿದ್ದು ಅದಕ್ಕಾಗಿ 170 ಕ್ಲಿಷ್ಟಕರ ಸ್ಥಳಗಳಿಗೆ ಮನೆ ಬೇಟಿ ನೀಡುವ ತಂಡಗಳಿವೆ. ಇದಕ್ಕಾಗಿ 323 ಮೇಲುಸ್ತುವಾರಿ ತಂಡಗಳು ಮತ್ತು 8 ತಾಲ್ಲೂಕು ಉಸ್ತುವಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು. 360241 ಡೋಸ್ ಲಸಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

         ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಅವರು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು.

         ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯರಾದ ಲಕ್ಷ್ಮಣ, ಪಂಪನಗೌಡ, ರೆಹನಾ ಬೇಗಂ, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಬಳ್ಳಾರಿ ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಉಪ ನಿರ್ದೇಶಕ(ವೈದ್ಯಕೀಯ)ರಾದ ಡಾ.ವಿವೇಕ್ ದೋರೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ , ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುನಾಥ ಚವ್ಹಾಣ, ಜಿಲ್ಲಾಸ್ಪತ್ರೆ ಆರ್‍ಎಂಒ ಡಾ.ಸೌಭಾಗ್ಯವತಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಕೆ. ಜಿ. ವಿರೇಂದ್ರಕುಮಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಡಾ ಮಲ್ಲಿಕಾರ್ಜುನ, ಡಾ ಪ್ರಶಾಂತ. ಕೃಷ್ಣನಾಯ್ಕ್ ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗ ತಾಯಂದಿರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link