ಬೆಂಗಳೂರು
ನಾನು ಬೇರೆ ಯೋಚನೆ ಮಾಡಿಲ್ಲ. ಪಕ್ಷದಲ್ಲೇ ಇರುತ್ತೇನೆ ಎಂದು ವಿಧಾನಪರಿಷತ್‍ನ ಹಿರಿಯ ಸದಸ್ಯ, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿದ್ದರೂ ನನ್ನ ಕೆಲಸ ಆಗುತ್ತವೆ ಎಂದ ಮೇಲೆ ನಾನು ಬೇರೆ ಕಡೆ ಏಕೆ ಹೋಗ್ಬೇಕು. ನಾನು ಮೊದಲಿನಿಂದಲೂ ದೇವೇಗೌಡರ ಮನೆಗೆ ಹೆಚ್ಚು ಹೋಗುತ್ತಿರಲಿಲ್ಲ. ನಾವು ಹೋದರೆ ಯಾರ್ಯಾರೋ ಏನೇನೋ ಹೇಳಿಬಿಡ್ತಿದ್ರು. ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನೆಗೆ ನಾನು ಜಾಸ್ತಿ ಹೋಗ್ತಾ ಇದ್ದೀನಿ. ಅಭಿವೃದ್ಧಿ ಕೆಲಸದ ಜತೆಗೆ ರಾಜಕೀಯವನ್ನು ಮಾತನಾಡಿದ್ದೀವಿ. ಅದರಲ್ಲಿ ತಪ್ಪೇನು? ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ನಾನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾಪ ಕುಮಾರಸ್ವಾಮಿ ಅವರು ಬೇಜಾರಾಗಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಹಿಂಗೆಲ್ಲ ಮಾತನಾಡಬಾರದು. ಜೆಡಿಎಸ್ 2 ಸೀಟು ಬಂದ ಪರಿಸ್ಥಿತಿಯೂ ಇದೆ. 58 ಸೀಟು ಬಂದ ಪರಿಸ್ಥಿತಿಯೂ ಇದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಎಲ್ಲರನ್ನು ಕರೆದು ಮಾತನಾಡಬೇಕು. ಜೊತೆಗೆ ಧೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
