ಶಾಂತಿನಗರ ಪಿಜಿಗೆ ನುಗ್ಗಿ ಕಿರುಕುಳ ನೀಡಿದ ಕಿರಾತಕ

0
23

ಬೆಂಗಳೂರು

      ಶಾಂತಿನಗರದ ಬಿಟಿಎಸ್ ರಸ್ತೆಯಲ್ಲಿನ ಮಹಿಳಾ ಪಿಜಿ ವಸತಿನಿಲಯಕ್ಕೆ ನುಗ್ಗಿರುವ ದುಷ್ಕರ್ಮಿಯೊಬ್ಬ ಯುವತಿಯೊಬ್ಬರ ಮೈ-ಕೈ ಸವರಿ ಅಪ್ಪಿಕೊಂಡು ಕಿರುಕುಳ ನೀಡಿ ಪರಾರಿಯಾಗಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ..

      ಕಳೆದ ಅ.2ರಂದು ಪಿಜಿಯಲ್ಲಿ ಒಬ್ಬ ವ್ಯಕ್ತಿ ಬರುತ್ತಾನೆ. ಅವನು ಹೇಗೆ ಬರುತ್ತಾನೆ, ಹೇಗೆ ಹೋಗುತ್ತಾನೆ ಸ್ವಲ್ಪವೂ ಗೊತ್ತಾಗಲ್ಲ. ನಮ್ಮ ಸ್ನೇಹಿತೆ ಮಲಗಿರುತ್ತಾಳೆ. ಮೊದಲು ಆಕೆಯ ಮೈ-ಕೈ ಮುಟ್ಟುತ್ತಾನೆ. ಬಳಿಕ ನನ್ನ ಪಕ್ಕ ಬಂದು ಮೈ ಸವರುತ್ತಾನೆ.ನಾವು ಕಿರುಚಾಡಿದ್ರೂ ಭಯಗೊಂಡು ಓಡಿ ಹೋಗುವುದಿಲ್ಲ. ರಾಜಾರೋಷವಾಗಿ ನಿಧಾನವಾಗಿ ಹೋಗುತ್ತಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

      ಮೊದಲು ನಮಗೆ ಭಯವಾಗಿತ್ತು. ಅದಕ್ಕೆ ಪೊಲೀಸರಿಗೆ ದೂರು ನೀಡಿಲ್ಲ. ಬಳಿಕ ದೂರು ಕೊಟ್ಟಿದ್ದೇವೆ.ಈ ಪಿಜಿಯಲ್ಲಿ ಬಾಗಿಲಿಗೆ ಚಿಲಕ ಹಾಕುವುದಿಲ್ಲ,ಸೆಕ್ಯೂರಿಟಿ, ಸಿಸಿಟಿವಿ ಇಲ್ಲ.ಮಾಲೀಕನಿಗೆ ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ.ಪೊಲೀಸರಿಗೆ ದೂರು ಕೊಟ್ಟ ಮೇಲೆ ಸಮಸ್ಯೆಗಳನ್ನು ಸರಿ ಮಾಡುತ್ತಿದ್ದಾರೆ. ಪೊಲೀಸರು ಕೂಡ ಎಲ್ಲವನ್ನೂ ಸರಿ ಮಾಡುತ್ತೀವಿ ಎಂದು ಹೇಳಿದ್ದಾರೆ ಎಂದು ಪಿಜಿಯಲ್ಲಿರುವ ಯುವತಿ ಹೇಳಿದ್ದಾರೆ.

        ಹೆಸರೇ ಇಲ್ಲದ ಈ ಪಿಜಿಯಲ್ಲಿ 200ಕ್ಕೂ ಹೆಚ್ಚು ಮಂದಿ ಯುವತಿಯರು ಇದ್ದಾರೆ.ಈ ಪಿಜಿಯನ್ನು ನಡೆಸಬೇಕಾದರೆ ಪಾಲಿಸಬೇಕಾದ ನಿಯಮಗಳನ್ನು ಕೂಡ ಮಾಲೀಕ ಗಾಳಿಗೆ ತೂರಿದ್ದಾನೆ ಎಂದು ತಿಳಿದುಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here