ರಾಣೇಬೆನ್ನೂರು
ತಾಲೂಕಿನ ಮುದೇನೂರ ಗ್ರಾಮದ ಕುರಿ ದಡ್ಡಿಗೆ ಚಿರತೆ ದಾಳಿಯಿಂದಾಗಿ 10 ಕುರಿಗಳು ಬಲಿಯಾದ ಘಟನೆ ಗುರುವಾರ ಮದ್ಯರಾತ್ರಿ ನಡೆದಿದೆ.ಮುದೇನೂರ ಗ್ರಾಮದ ಭರಮಪ್ಪ ಮಾಳನಾಯಕನಹಳ್ಳಿ ಎಂಬ ಕುರಿಗಾಹಿ ಅನಾರೋಗ್ಯದ ನಿಮಿತ್ಯ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿಯೇ ಚಿರತೆ ದಾಳಿಯಿಂದಾಗಿ 10 ಕುರಿ ಸ್ಥಳದಲ್ಲಿಯೇ ಮೃತಪಟ್ಟಿವೆ, 8 ಕುರಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದು 10 ಕುರಿಗಳು ಭೀತಿಯಿಂದ ತಪ್ಪಿಸಿಕೊಂಡಿವೆ ಎಂದು ಸಿಕ್ಕಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಮುದೇನೂರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಜೀವ ಭಯ ಉಂಟಾಗಿದ್ದು ಅರಣ್ಯ ಇಲಾಖೆಯವರು ಗ್ರಾಮದ ಜನತೆಯ ಹಾಗೂ ರೈತರ ಹಿತ ರಕ್ಷಣೆಗಾಗಿ ಚಿರತೆ ಸೆರೆ ಹಿಡಿಯಲು ಬಲೆಯನ್ನು ಸ್ಥಾಪಿಸಿ ಮನುಕುಲಕ್ಕೆ ಅಪಾಯ ತಟ್ಟುವ ಮೊದಲು ಚಿರತೆಯನ್ನು ಹಿಡಿದು ಕಾಡಿಗೆ ಅಟ್ಟಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಚಿರತೆ ದಾಳಿ ಮಾಡಿ 10 ಕುರಿಗಳು ಮೃತ ಪಟ್ಟ ಘಟನೆ ವಿಷಾದ ಸಂಗತಿಯಾಗಿದ್ದು ಗುರುವಾರ ಸಂಜೆಯಾದರೂ ಅರಣ್ಯ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಗ್ರಾಮಕ್ಕೆ ಬಂದು ಭೇಟಿ ನೀಡಿಲ್ಲಾ ಈ ಬಗ್ಗೆ ಗ್ರಾಮಸ್ಥರು ಹಾಗೂ ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.
ತಹಶೀಲ್ದಾರ ಭೇಟಿ- ರಾಣೇಬೆನ್ನೂರ ತಾಲೂಕ ದಂಡಾಧಿಕಾರಿ ಮತ್ತು ತಹಶೀಲ್ದಾರ ಸ್ಥಳಕ್ಕೆ ಬೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಚಿರತೆ ಸೆರೆ ಹಿಡಿಯಲು ಬಲೆ ಅಳವಡಿಸಿ ಜನತೆಗೆ ಸೂಕ್ತ ರಕ್ಷಣೆ ನೀಡಿ ಎಂದು ಸೂಚಿಸಿದರು.
ಸ್ಥಳಕ್ಕೆ ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಚಲವಾದಿ, ಹಾವೇರಿಯ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ದಿವಾಕರ್ ನಾಡಗೇರ, ತಾಲೂಕ ಕುರಿ ಉಣ್ಣೆ ಮಂಡಳಿ ಅದ್ಯಕ್ಷ ನೀಲಪ್ಪ ದೇವರಗುಡ್ಡ, ಪಂಚಾಯತಿ ಕಾರ್ಯದರ್ಶಿ ಜಿ ಏ ಬಾನಿ, ಮಂಜುನಾಥ ಪುಟ್ಟಕ್ಕನವರ, ರುದ್ರಮುನಿ ರಾಮಕ್ಕನವರ, ಎಸ್.ಬಿ. ಗಂಗನಗೌಡ್ರ, ಬಿದ್ದಾಡೆಪ್ಪ ಬಿ ಎಂ, ಮಲ್ಲಪ್ಪ ಅರಳಿ, ಪ್ರಕಾಶ ಲಮಾಣಿ ಹರಿಹರಗೌಡ್ರ ಪಾಟೀಲ ಇದ್ದರು.ಕುರಿಗಳ ದಡ್ಡಿಗೆ ಕುರಿ ಉಣ್ಣೆ ನಿಗಮದ ನಿರ್ದೇಶಕ ನೀಲಪ್ಪ ಕಲ್ಲಹಳ್ಳಿ ಭೇಟಿ ನೀಡಿದ್ದರು.