50 ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭ

ಹಾವೇರಿ :

       ಹಳ್ಳಿಗಳಲ್ಲಿ ಸಹಕಾರಿ ಸಂಘಗಳ ಹಾಗೂ ಪಂಚಾಯತಿಯ ಕೆಲಸಗಳ ಫಲಿತಾಂಶಗಳ ಮೇಲೆ ಅಭಿವೃದ್ಧಿ ಅವಲಂಬಿತವಾಗಿದೆ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷರಾದ ಆಯ್‍ಎಸ್ ಪಾಟೀಲ ಹೇಳಿದರು. ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.ನಿ ಇದರ 50 ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ದೇಶ ಹಳ್ಳಿಗಳಿಂದ ಕೊಡಿದೆ. ರೈತರು ದೇಶದ ಬೆನ್ನೆಲಬು ಇವರನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸವನ್ನು ಪಂಚಾಯತಿಗಳು ಹಾಗೂ ಸಹಕಾರಿ ಪತ್ತಿನ ಸಂಘುಗಳು ಮಾಡಬೇಕು. ಊರಿನ ಶ್ರೀ ದುರ್ಗಾಂಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸುತ್ತಮುತ್ತಲಿನ ರೈತ ಬಾಂದವರಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡುತ್ತಾ ಬಂದು 50 ವರ್ಷ ಪೊರೈಸಿದೆ. ಅನುಕೂಲಕರ ಹಾಗೂ ಸಹಕಾರಯುತ ಕೆಲಸಗಳಿಗೆ ಅಭಿನಂದನೆ ಹೇಳಿದರು.

      ಕೆಸಿಸಿ ಬ್ಯಾಂಕನಿಂದ ರೈತರಿಗೆ ಸಾಲ ನೀಡಲಾಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯನವರ ಘೋಷಣೆಯಂತೆ 44 ಕೋಟಿ ಜಮಾವಾಗಿ ಸಂಪೂರ್ಣವಾಗಿ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹಣ ಬಂದಿದೆ.ಕ್ರಷಿಯೇತರ ಚಟುವಟಿಕೆಗಳಿಗೂ ಸಹಕಾರಿ ಸಂಘಗಳು ಸಾಲ ನೀಡಲು ಮುಂದಾಗುತ್ತಿದ್ದು, ಹೆಚ್ಚಿನ ಆದಾಯ ಉಳ್ಳವರು ಸಹಕಾರಿ ಸಂಘಗಳಲ್ಲಿ ಮುಂಗಡವಾಗಿ ಹಣ ತೊಡಗಿಸಿ ರೈತರಿಗೆ ಅನುಕೂಲವಾಗುವಂತೆ ಸಹಕಾರ ನೀಡವಂತಾಗಬೇಕು.

        ರೈತರು ಸಹಕಾರ ಸಂಘಗಳಲ್ಲಿ ವ್ಯಾವಹಾರ ಮಾಡಿದರೆ ಕಡಿಮೆ ಬಡ್ಡಿದರದಲ್ಲಿ ಎಲ್ಲ ಬಗೆಯ ಸಾಲ ಪಡೆದು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಆಯ್‍ಎಸ್ ಪಾಟೀಲ ಕರೆ ನೀಡಿದರು. ಮುಖ್ಯ ಅತಿಥಿ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್‍ವಾಯ್ ಪಾಟೀಲ ಠೇವು ಸರ್ಟಿಫಕೇಟ್ ವಿತರಿಸಿ ನಂತರ ಮಾತನಾಡಿದ ಅವರು ರೈತರ ಬೇಡಿಕೆಗಳನ್ನು ಇಡೇರಿಸಲು ನಾವು ಬದ್ದರಾಗಿದ್ದೇವೆ. ಹೆಚ್ಚಿನ ವ್ಯಾವಹಾರ ಸಹಕಾರಿ ಸಂಘಗಳಲ್ಲಿ ಮಾಡಿದರೆ ಅದು ರೈತರಿಗೆ ಲಾಭದಾಯಕವಾಗಲಿದೆ ಎಂದರು.

         ಸಂಘದ ಮಾಜಿ ಅಧ್ಯಕ್ಷರಾದ ಬಸಪ್ಪ ಕಡ್ಲೆಪ್ಪನವರ ಪಿಗ್ಮಿ ಚೆಕ್ ವಿತರಿಸಿ ರೈತರಿಗೆ ವಿವಿಧ ಯೋಜನೆಗಳು ಬರಲಿದ್ದು ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಲು ರೈತರು ಮುಂದಾಗಬೇಕು ಎಂದರು. ಶಾಸಕರಾದ ನೆಹರೂ ಓಲೇಕಾರ ಟ್ಯಾಕ್ಟರ್ ಸಾಲ ವಿತರಣೆ ಮಾಡಿ ನಂತರ ಮಾತನಾಡಿದ ಅವರು ರೈತರು ಆಧುನಿಕ ಕೃಷಿ ಪದ್ದತಿಯಿಂದ ಹಾಗೂ ಸರ್ಕಾರದ ಸಾಲ ಸೌಲಭ್ಯ ಪಡೆದು ಆರ್ಥಿಕ ಬಲವರ್ಧನೆ ಮಾಡಿಕೊಳ್ಳಬೇಕು.ರೈತರು ಕೃಷಿಯಲ್ಲಿ ಅಭಿವೃದ್ಧಿ ಕಂಡರೆ ದೇಶ ಅಭಿವೃದ್ಧಿಯಾದಂತೆ ಕೃಷಿ ಶಿಕ್ಷಣ ಪಡೆದು ಬೇಸಾಯ ಮಾಡುವಂತಾಗಬೇಕು ಎಂದರು.

       ಸಂಘದ ಕ್ಲಾರ್ಕ ಅಶೋಕ ಅಳ್ಳಳ್ಳಿ ಸಂಘದ ಪ್ರಗತಿ ವರದಿಯನ್ನು ಮಂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷರಾದ ಗಂಗಾಧರ ಕನವಳ್ಳಿ ಮಾತನಾಡಿ ಸಹಕಾರಿ ಸಂಘವಿರುವುದೇ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘದ ಸದುಪಯೋಗವನ್ನು ನಮ್ಮ ವ್ಯಾಪ್ತಿಯ ಎಲ್ಲ ರೈತರು ಪಡೆಯಲು ಶ್ರಮವಹಿಸಿ ಕೆಲಸ ಮಾಡುತ್ತೇವೆ ಎಂದರು. ಹತ್ತಿಮತ್ತೂರಿನ ವಿರಕ್ತಮಠದ ಶ್ರೀನಿಜಗುಣ ಶಿವಯೋಗಿ ಮಹಾಸ್ವಾಮಿಗಳ ಸಾನಿಧ್ಯವಹಿಸಿ ಆರ್ಶಿವಚನ ನೀಡಿದರು. ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ ನಿರ್ದೇಶಕರಾದ ಜಿಸಿ ಸಾತಣ್ಣವರ.

         ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ.ಹಾಲು ಉತ್ಪಾದಕ ಸಹಕಾರಿ ಸಂಘ ಅಧ್ಯಕ್ಷರಾದ ಬಸವಣ್ಣೇಪ್ಪ ಕಡ್ಲೆಪ್ಪನವರ.ಸಾವಯವ ಕೃಷಿಕರಾದ ಹಿರಿಯರಾದ ಚಂದ್ರಶೇಖರಪ್ಪ ಕನವಳ್ಳಿ. ಅಧಿಕಾರಿಗಳಾದ ಎಂಸಿ ಉಪ್ಪಿನ.ಎನ್‍ಎಸ್ ಪೂಜಾರ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್‍ಡಿ ಪಾಟೀಲ.ಬಿಡಿ ಕೋಳೂರ ನಿರೂಪಿಸಿದರು.ಗ್ರಾಪಂ ಗೌರವಾನ್ವಿತ ಸದಸ್ಯರು.ಸಹಕಾರಿ ಇಲಾಖೆಯ ಅಧಿಕಾರಿಗಳು. ಮಾಜಿ ಪದಾಧಿಕಾರಿಗಳು.ಹಾಲಿ ಸಂಘ ಪದಾಧಿಕಾರಿಗಳು.ಊರಿನ ಗಣ್ಯರು ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

                         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link