ಹಾವೇರಿ
17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಅಂಚೆ ಮತದಾನದ ಪೈಕಿ 1209 ಮತಗಳು ಅಸಿಂಧುಗೊಂಡಿವೆ. ನೋಟಾಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ. ಪಕ್ಷೇತರ ಏಳು ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಹೆಚ್ಚು ಮತದಾನವಾಗಿದೆ.
ಹಾವೇರಿ ಕ್ಷೇತ್ರದಲ್ಲಿ 4592 ಅಂಚೆಮತದಾನ ಚಲಾವಣೆಗೊಂಡಿವೆ. ಈ ಪೈಕಿ 1209 ಮತಗಳು ತಿರಸ್ಕøತಗೊಂಡಿವೆ. 10 ಮತಗಳು ನೋಟಾಕ್ಕೆ ಚಲಾವಣೆಗೊಂಡರೆ 3373 ಮತಗಳು ಸ್ವೀಕೃತ ಮತಗಳಾಗಿವೆ. ಅಭ್ಯರ್ಥಿವಾರು ವಿವರದಂತೆ ಡಿ.ಆರ್.ಪಾಟೀಲ(ಕಾಂಗ್ರೆಸ್) ಅವರು 809, ಅಯೂಬಖಾನ್ ಪಠಾಣ(ಬಹುಜನ ಸಮಾಜ ಪಾರ್ಟಿ) 21 ಮತಗಳು, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ 2513, ಈಶ್ವರ ಪಾಟೀಲ(ಉತ್ತಮ ಪ್ರಜಾಕೀಯ ಪಾರ್ಟಿ) 14 ಮತಗಳು, ಶೈಲೇಶ ನಾಜರೆ ಅಶೋಕ(ಇಂಡಿಯನ್ ಲೇಬರ ಪಾರ್ಟಿ (ಅಂಬೇಡ್ಕರ ಪುಲೆ)) 01 ಮತ, ಬಸವರಾಜ ಎಸ್.ದೇಸಾಯಿ(ಪಕ್ಷೇತರ) 04, ಬೊಮ್ಮಾಜಿ ರಾಮಪ್ಪ ಸಿದ್ದಪ್ಪ 02ಮತಗಳು, ವೀರಭದ್ರಪ್ಪ ವೀರಪ್ಪ ಕಬ್ಬಿಣದ ಉರ್ಫ ಬಂಡಿ 02 ಮತಗಳು, ಸಿದ್ದಪ್ಪ ಕಲ್ಲಪ್ಪ ಪೂಜಾರ 02 ಮತಗಳು, ಹನುಮಂಯಪ್ಪ ಡಿ.ಕಬ್ಬಾರ 05 ಅಂಚೆ ಮತಗಳನ್ನು ಪಡೆದಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
