ಬಳ್ಳಾರಿ:
ನಗರದ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಎಐಡಿವೈಓ ಹಾಗೂ ಕಾಲೇಜಿನ ಎನ್ ಎಸ್ ಎಸ್ ಘಟಕದ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ್ದ ಸಮರಶೀಲ ನೇತಾರ ಅಪ್ರತಿಮ ಹೋರಾಟಗಾರ ನೇತಾಜಿ ಸುಭಾಷ್ಚಂದ್ರ ಬೋಸ್ ರವರ 122ನೇ ಜನ್ಮ ದಿನಾಚರಣೆಯನ್ನು ಹಮ್ಮಿ ಕೊಳ್ಳಲಾಗಿತ್ತು ಹಾಗೆಯೇ ಈ ಪ್ರಯುಕ್ತ ರೆಡ್ ರಿಬ್ಬನ್ ಕ್ಲಬ್, ಆರೋಗ್ಯ ಮತ್ತು ಕುಟುಂಬ ಇಲಾಖೆ ಯುಪಿಹೆಚ್‍ಸಿ ಬ್ರೂಸ್ ಪೇಟೆ ಇವರುಗಳ ಸಂಯುಕ್ತಾಶ್ರಯದಲ್ಲಿ ‘ಸ್ವಯಂ ಪ್ರೇರಿತ ರಕ್ತ ದಾನ’ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಎಐಡಿವೈಓ ಜಿಲ್ಲಾ ಕಾರ್ಯದರ್ಶಿಗಳಾದ ಎರ್ರಿಸ್ವಾಮಿ.ಹೆಚ್ ಮಾತನಾಡುತ್ತಾ- “ ನೇತಾಜಿಯವರು ದೇಶಕಂಡ ಅಪ್ರತಿಮ ಹೋರಾಟಗಾರ, ರಾಜಿರಹಿತ ಪಂಥದ ನಾಯಕರಾಗಿದ್ದು, ಇಡೀ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ, ಸ್ವಾತಂತ್ರ್ಯ ಹೋರಾಟದ ವಿವಿಧ ಪಂಥಗಳು, ನೇತಾಜಿಯವರ ಬಾಲ್ಯಜೀವನದ ವಿವರವಾಗಿ ತಿಳಿಸಿದರು. ಭಾರತ ಸೈನ್ಯ ಐಎನ್‍ಎ ಕಟ್ಟಲು ಅವರು ಮಾಡಿದ ಸಾಹಸವಾನು ವಿವರಿಸಿ ಅವರ ಹೋರಾಟವು ಇಡೀ ಯುವಸಮುದಾಯಕ್ಕೆ ಸ್ಪೂರ್ತಿಯಾಗಿದೆ ಎಂದರು. ಬ್ರಿಟಿಷರು ಭಾರತ ಬಿಟ್ಟು ತೊಲಗಲು ರಾಜಿರಹಿತ ಪಂಥದ ನೇತಾಜಿ, ಭಗತ್ಸಿಂಗ್, ಚಂದ್ರಶೇಖರ್ ಆಜಾದ್, ಖುದಿರಾಂ ಬೋಸ್, ರಾಜ್ಗುರು ಸುಖದೇವ್ ಮುಂತಾದ ಕ್ರಾಂತಿಕಾರಿಗಳ ಹೋರಾಟವೇ ಪ್ರಮುಖ ಕಾರಣ ಎಂದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಂತರ ಕಾಲೇಜಿನ ಅಧ್ಯಾಪಕರಾದ ಶ್ರೀ ಮುರುಳಿಕೃಷ್ಣ ಗೌಡರವರು ಅಧ್ಯಕ್ಷತೆ ವಹಿಸಿ ನೇತಾಜಿ ಐಎನ್‍ಎ ಸೈನ್ಯದಲ್ಲಿ ಮಹಿಳೆಯರ ರೆಜಿಮೆಂಟ್ ಕೂಡ ಇತ್ತು. ಇಡೀ ಭಾರತದ ಜನತೆಯ ಮನಸೂರೆಗೊಂಡಿದ್ದ ನೇತಾಜಿಯವರು ತಮ್ಮ ಹೋರಾಟದ ಮೂಲಕ ಇಂದೂ ಕೂಡ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ ಎಂದರು. ಆರಂಭದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾದಲಾಯಿತು.
ನಂತರ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ರಕ್ತದಾನವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಎಐಡಿವೈಓ ಸದಸ್ಯರಾದ ಗಂಗಾಧರ್, ಸತೀಶ್, ಲಕ್ಷ್ಮಣ್, ದೇವರಾಜ್, ಅಖಿಲ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
