ಹಾವೇರಿ :
ನಗರದ ಎಂ.ಜಿ ರೋಡಿನಲ್ಲಿರುವ ಜೈ ಹನುಮಾನ ಪ್ಲಾಸ್ಟಿಕ್ಸ್ ಅಂಗಡಿ ಸೇರಿದಂತೆ 2 ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿ ವರ್ಗದವರು ದಾಳಿ ಮಾಡಿ ಅಂಗಡಿಯಲ್ಲಿದ್ದ ಸುಮಾರು 150 ಕೆಜಿ ರಷ್ಟು ಪ್ಲಾಸ್ಟಿಕ್ ವಶ ಪಡಿಸಿಕೊಂಡಿಸಿಕೊಂಡು ಎರಡು ಅಂಗಡಿಗಳ ಮಾಲಕರಿಂದ ತಲಾ 2 ಸಾವಿರ ರೂ ಗಳಷ್ಟು ದಂಡ ವಸೂಲಿ ಮಾಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಪರಿಸರ ಅಭಿಯಂತಕರಾದ ಸಿ,ವ್ಹಿ ಗುಡ್ನವರ,ಆರೋಗ್ಯ ನಿರೀಕ್ಷಕರಾದ ಎಂ ಸೋಮಶೇಖರ,ರಮೇಶ ಆರ್ ಮುಂಜೋಜಿ ನಗರಸಭೆಯ ಚಂದ್ರು ಬಿದರಿ,ಶ್ರೀನಿವಾಸ್ ಶೇಲಂ ,ರಾಜು ಮಾಳಗಿ ಸೇರಿದಂತೆ ಸಿಬ್ಬಂದಿ ವರ್ಗವದರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
