ಹುಳಿಯಾರು:
ಬೆಂಕಿ ಆಕಸ್ಮಿಕದಿಂದ 20 ತೆಂಗಿನ ಗಿಡಗಳನ್ನು ಸುಟ್ಟು ಭಸ್ಮವಾದ ಘಟನೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯ ಬಿಳೆಕಲ್ ಗೊಲ್ಲರಹಟ್ಟಿಯಲ್ಲಿ ಜರುಗಿದೆ.ಇಲ್ಲಿನ ಬಸವರಾಜ್ ಬಿನ್ ಕಾಟಯ್ಯ ಎಂಬುವರಿಗೆ ಸೇರಿದ ತೋಟದಲ್ಲಿ ಈ ಅಗ್ನಿ ಅವಘಡ ನಡೆದಿದ್ದು ದಾರಿಹೋಕರು ಗಮನಿಸಿ ಊರಿನವರಿಗೆ ವಿಚಾರ ಮುಟ್ಟುಸಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಸುಮಾರು 20 ತೆಂಗಿನ ಮರ ಬೆಂಕಿಗೆ ಆಹುತಿಯಾಗಿವೆ.
ಬಸವರಾಜು ಅವರು ಬಡವರಾಗಿದ್ದು ಅವರಿಗಿದ್ದ ಕೇಲವ 50 ತೆಂಗಿನ ಗಿಡಗಳಲ್ಲಿ 20 ಗಿಡ ಬೆಂಕಿಗೆ ಭಸ್ಮವಾಗಿದ್ದು ತಾಲೂಕು ಆಡಳಿತ ಕೂಡಲೇ ಸ್ಪಂದಿಸಿ ಈ ಬಡಕುಟುಂಬಕ್ಕೆ ಸಹಾಯ ಮಾಡುವಂತೆ ಮನವಿ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ