ಪೊಲೀಸರಿಂದ 3 ಕೆಜಿ ಗಾಂಜಾ ವಶ..!

ಬೆಂಗಳೂರು

    ಚಿಂತಾಮಣಿಯಿಂದ ಗಾಂಜಾ ತಂದು ಸಿಟಿ ಮಾರುಕಟ್ಟೆ ಇನ್ನಿತರ ಕಡೆಗಳಲ್ಲಿ ಚಿಕ್ಕ ಚಿಕ್ಕ ಪ್ಯಾಕೇಟ್‌ಗಳಾಗಿ ಕಟ್ಟಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಎಸ್.ಜೆ.ಪಾರ್ಕ್ ಪೊಲೀಸರು 3 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿ ದ್ದಾರೆ.ಚಿಂತಾಮಣಿಯ ವಜೀರ್ ಖಾನ್ ಆಲಿಯಾಸ್ ವಜೀರ್ (60) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 3 ಕೆ.ಜಿ. ಗಾಂಜಾ, ಮೊಬೈಲ್ ಹಾಗೂ ಒಂದು ಸಾವಿರ ನಗದು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

   ಆರೋಪಿಯು ಎಸ್.ಜೆ.ಪಾರ್ಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಗಿರಾಕಿಯೊಬ್ಬ ನೀಡಿದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ವಿವೇಕ್ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.ವಿಚಾರಣೆ ವೇಳೆ ಆರೋಪಿಯು ಚಿಂತಾಮಣಿ ಕಡೆಯಿಂದ ಗಾಂಜಾ ತಂದು ಚಿಕ್ಕ ಪ್ಯಾಕೇಟ್ ಗಳಾಗಿ ಕಟ್ಟಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.ಗಾಂಜಾ ಮಾರಾಟದಲ್ಲಿ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದರೂ ಆರೋಪಿಯು ಹಣದಾಸೆಗಾಗಿ ಈ ಕೃತ್ಯ ನಡೆಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link