ಬಳ್ಳಾರಿ:
ರಸ್ತೆ ಅಪಘಾತಗಳ ನಂತರ ಮಧ್ಯಪಾನ ಮಾಡುವುದನ್ನು ತ್ಯಜಿಸುವದಕ್ಕಿಂತ, ಪ್ರತಿಯೋಬ್ಬರೂ ಇಂದೇ ಮಧ್ಯಪಾನ ತ್ಯಜಿಸಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಲು ಮುಂದಾಗಬೇಕು ಎಂದು ಸಂಚಾರಿ ಪೊಲೀಸ್ ಠಾಣೆ ಪಿ.ಐ. ಎಂ.ಶಿವಪ್ರಸಾದ್ ಅವರು ಹೇಳಿದರು.
ನಗರದ ಮೋತಿ ವೃತ್ತದ ಬಳಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ-2019 ನಿಮಿತ್ತ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಂಚಾರಿ ಪೊಲೀಸ್ ಠಾಣೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೆಲ್ಮೆಟ್ ವಿತರಣೆ ಹಾಗೂ ಮಧ್ಯಪಾನದಿಂದಾಗುವ ದುಷ್ಪರಿಣಾಮಗಳ ಕರಪತ್ರಗಳ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಮಧ್ಯಪಾನ ಮಾಡಿ ಎಂದಿಗೂ ವಾಹನವನ್ನು ಚಲಾಯಿಸಕೂಡದು, ಇದರಿಂದ ಜೀವಕ್ಕೆ ಅಪಾಯ ಎದುರಾಗಲಿದೆ. ಸುರಕ್ಷಿತ ವಾಹನ ಸಂಚಾರಕ್ಕೆ ಪ್ರತಿಯೋಬ್ಬರೂ ಹೆಲ್ಮೆಟ್ ಧರಿಸಲು ಮುಂದಾಗಬೇಕು ಎಂದರು.
ಇಲ್ಲಿನ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್‍ನ ಮುಖ್ಯಸ್ಥ ಎಂ.ಪ್ರಭಂಜನ್ ಕುಮಾರ್ ಅವರು, ವಾಹನ ಸವಾರರಿಗೆ ಜಾಗೃತಿ ಮೂಡಿಸುವದರ ಜೊತೆಗೆ ಉಚಿತ ಹೆಲ್ಮೆಟ್‍ಗಳ ವಿತರಣೆ ಹಾಗೂ ಕರಪತ್ರಗಳ ವಿತರಣೆ ಮಾಡಿರುವುದು ಸಂತಸ ಮೂಡಿಸಿದೆ. ನಿಜಕ್ಕೂ ಅವರ ಕಳಕಳಿ ಮೆಚ್ಚುವಂತಹದ್ದು, ಸುಮಾರು 60ಕ್ಕೂ ಹೆಚ್ಚು ವಾಹನ ಸವಾರರಿಗೆ ಉಚಿತ ಹೆಲ್ಮೆಟ್‍ಗಳನ್ನು ವಿತರಿಸಿ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.
ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಎಂ.ಪ್ರಭಂಜನ್ ಕುಮಾರ್ ಮಾತನಾಡಿ, ಪ್ರತಿಯೋಬ್ಬರೂ ನಿತ್ಯ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವದನ್ನು ರೂಢಿಸಿಕೊಳ್ಳಬೇಕು. ಮಧ್ಯಪಾನ ಮಾಡಿ ಎಂದಿಗೂ ವಾಹನ ಚಲಾಯಿಸಕೂಡದು. ಇದರಿಂದ ಅಪಘಾತಗಳು ಸಂಭವಿಸಿ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೋಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಟ್ರಸ್ಟ್ ಆಶ್ರಯದಲ್ಲಿ ಇಲ್ಲಿವರೆಗೆ ಸಾಮಾಜಿಕ ಕಳಕಳಿಯುಳ್ಳ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವೆ.
ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಿರುವೆ. ಇಂದು ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿದೆ. 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಫೆ.9ರಂದು ಬೆ.9.30ಕ್ಕೆ ನಗರದಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್‍ನ ವಿವಿಧ ಪದಾಧಿಕಾರಿಗಳು, ಪೊಲೀಸ್ ಇಲಾಖೆಯ ವೆಂಕಟೇಶ್, ಕೊಟ್ರೇಶ್ ಸೇರಿದಂತೆ ಇತರರಿದ್ದರು.