ಬಳ್ಳಾರಿ
ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರದ ಹೊರವಲಯದ ಹೊಲವೊಂದರಲ್ಲಿ ಬೆಳೆಯಲಾಗಿದ್ದ ಗಾಂಜಾ ಬೆಳೆಯ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು 3ಲಕ್ಷ ರೂ.ಮೌಲ್ಯದ 32ಕೆಜಿ (142 ಗಾಂಜಾ ಗೀಡಗಳು) ಗಾಂಜಾ ವಶಪಡಿಸಿಕೊಂಡಿದೆ.ಹೊಲದ ಮಾಲೀಕನಾದ ಆರೋಪಿ ನಾಪತ್ತೆಯಾಗಿದ್ದು, ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಅಬಕಾರಿ ಜಿಲ್ಲಾಧಿಕಾರಿ ಸಯೀದಾ ಅಫ್ರೀನ್, ಡಿವೈಎಸ್ಪಿ ಬಸಪ್ಪ ಪೂಜಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಗಳಾದ ಶಂಕರ್ ದೊಡ್ಡಮನಿ, ವಿಜಯಕುಮಾರ್ ಸೆಲವಡೆ, ಜ್ಯೋತಿಬಾಯಿ, ತುಕಾರಾಂ, ಆಂಜನೇಯ ಸೇರಿದಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಮಂಗಳವಾರ ದಿಢೀರ್ ದಾಳಿ ನಡೆಸಿ 8ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ 142 ಗಾಂಜಾ ಗೀಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಡೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
