ತುಮಕೂರು
ಸಾರ್ವಜನಿಕರ ಉಪಯೋಗದ ಸಂಚಾರಿ ಶೌಚಾಲಯ ವಾಹನ ಖರೀದಿ ಒಳಗೊಂಡು ನಗರದ ವಿವಿಧ ವಾರ್ಡ್ಗಳಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಕಾಮಗಾರಿಗಳನ್ನು ಕೈಬಿಟ್ಟು ಅದಕ್ಕಾಗಿ ಮೀಸಲಿಟ್ಟಿದ್ದ ಒಟ್ಟು 39.50 ಲಕ್ಷ ರೂ. ಮೊತ್ತವನ್ನು ಸಾರಾಸಗಟಾಗಿ ನಗರದ ಆಯ್ದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ತುಮಕೂರು ಮಹಾನಗರ ಪಾಲಿಕೆಯು ಕ್ರಮ ಕೈಗೊಂಡಿದೆ.
2018-19 ನೇ ಸಾಲಿನ 14 ನೇ ಹಣಕಾಸಿನ ಸಾಮಾನ್ಯ ಮೂಲ ಅನುದಾನ (ಜನರಲ್ ಬೀಸಿಕ್ ಗ್ರಾಂಟ್)ದಲ್ಲಿ ಬದಲಿ ಕಾಮಗಾರಿಯಾಗಿ ‘‘ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಗುಂಡಿ ಬಿದ್ದಿರುವ ಆಯ್ದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ’’ ಕೈಗೊಳ್ಳಲು ಹಾಗೂ ಇದಕ್ಕಾಗಿ 39.50 ಲಕ್ಷ ರೂ.ಗಳನ್ನು ವಿನಿಯೋಗಿಸಲು ತೀರ್ಮಾನಿಸಲಾಗಿದೆ.
ಈ ಮೊದಲು 13 ಲಕ್ಷ ರೂ. ವೆಚ್ಚದಲ್ಲಿ ಸಂಚಾರಿ ಶೌಚಾಲಯ ವಾಹನ ಖರೀದಿಸಲು, 5 ಲಕ್ಷ ರೂ. ವೆಚ್ಚದಲ್ಲಿ 8 ನೇ ವಾರ್ಡ್ನ ಬಿ.ಜಿ. ಪಾಳ್ಯ ವೃತ್ತದಿಂದ ಮಂಡಿಪೇಟೆ ರಸ್ತೆವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು, 4.50 ಲಕ್ಷ ರೂ. ವೆಚ್ಚದಲ್ಲಿ 14 ನೇ ವಾರ್ಡ್ನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಹತ್ತಿರದ ಪಾರ್ಕ್ನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು, 3 ಲಕ್ಷ ರೂ. ವೆಚ್ಚದಲ್ಲಿ 7 ನೇ ವಾರ್ಡ್ನ ದಿವಾನ್ ಪೂರ್ಣಯ್ಯ ಛತ್ರದ ಹತ್ತಿರ ಶೌಚಾಲಯ ನಿರ್ಮಿಸಲು, 5 ಲಕ್ಷ ರೂ. ವೆಚ್ಚದಲ್ಲಿ 5 ನೇ ವಾರ್ಡ್ನ ಕೆ.ಆರ್. ಮಾರುಕಟ್ಟೆ ಆವರಣದಲ್ಲಿ ಶೌಚಾಲಯ ಮತ್ತು ನಿರ್ವಹಣಾ ಕೊಠಡಿ ನಿರ್ಮಿಸಲು, 8 ಲಕ್ಷ ರೂ. ವೆಚ್ಚದಲ್ಲಿ 3 ನೇ ವಾರ್ಡ್ನ ಅನಿಕೇತನ ಶಾಲೆ ಮುಂ‘ಾಗ ಚರಂಡಿ ಕಾಮಗಾರಿ ಕೈಗೊಳ್ಳಲು, 1 ಲಕ್ಷ ರೂ. ವೆಚ್ಚದಲ್ಲಿ ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿರುವ ಗುಂಡೂರಾವ್ ಉದ್ಯಾನವನದಲ್ಲಿ ಎ್.ಎಂ. ರೇಡಿಯೋ ಅಳವಡಿಸಲು (ಒಟ್ಟು 39.50 ಲಕ್ಷ ರೂ.) ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಈ ಕಾಮಗಾರಿಗಳನ್ನು ಕೈಬಿಟ್ಟು ಬದಲಿಯಾಗಿ ಇಷ್ಟೂ ಹಣವನ್ನು ಗುಂಡಿ ಮುಚ್ಚಲು ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.
ಮೇಯರ್ ಲಲಿತಾ ರವೀಶ್ (ಜೆಡಿಎಸ್) ಅವರ ಅ‘್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸ‘ೆಯಲ್ಲಿ ಅ‘್ಯಕ್ಷರ ಅನುಮತಿ ಮೇರೆಗೆ ಮಂಡಿಸಲ್ಪಡುವ ವಿಷಯ (ಸಂಖ್ಯೆ:56/26)ದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಚರ್ಚೆಗೆಡೆಮಾಡಿದ ವಿಷಯ
‘‘ಪಾಲಿಕೆಯೇನೋ ಗುಂಡಿ ಮುಚ್ಚಲು ತೀರ್ಮಾನ ಕೈಗೊಂಡಿದೆ. ಆದರೆ ಈಗಾಗಲೇ ನಗರಾದ್ಯಂತ ಸ್ಮಾರ್ಟ್ಸಿಟಿ ಯೋಜನೆ ಹಾಗೂ ಇತರೆ ಯೋಜನೆಗಳ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಆ ಏಜೆನ್ಸಿಯವರು ನಿಯಮದ ಪ್ರಕಾರ ಅಗೆದ ರಸ್ತೆಯನ್ನು ಮತ್ತೆ ಯಥಾಸ್ಥಿತಿಗೆ (ರೆಸ್ಟೊರೇಷನ್) ತರಬೇಕು. ಪ್ರಸ್ತುತ ಆ ಕೆಲಸ ಸಮರ್ಪಕವಾಗಿ ಆಗದಿರುವುದರಿಂದ ನಗರಾದ್ಯಂತ ಸಮಸ್ಯೆ ಕಾಡುತ್ತಿದೆ. ಇದೀಗ ಪಾಲಿಕೆಯು ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದು, ಸದರಿ ಏಜೆನ್ಸಿಯವರು ಮಾಡಬೇಕಾದ ಕೆಲಸವನ್ನು ಪಾಲಿಕೆ ತನ್ನ ಹಣದಿಂದ ಮಾಡುವುದೇ?’’ ಎಂಬ ಪ್ರಶ್ನೆ ಪಾಲಿಕೆಯಲ್ಲಿ ಅನೇಕರು ಕೇಳುವಂತಾಗಿದೆ.
ವಕೀಲರ ನೇಮಕ
ತುಮಕೂರು ಮಹಾನಗರ ಪಾಲಿಕೆಗೆ ವಕೀಲರುಗಳಾದ ನಾಗರಾಜು, ಗುರುರಾಜ್ ಮತ್ತು ಕಿರಣ್ಕುಮಾರ್ ಅವರನ್ನು ಕಾನೂನು ಸಲಹೆಗಾರರನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪಾಲಿಕೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಿ ಪ್ರತಿನಿಧಿಸಲು ಮೂವರು ವಕೀಲರು/ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ಪಲಿಕೆಯು ಇತ್ತೀಚೆಗೆ ಅರ್ಜಿ ಆಹ್ವಾನಿಸಿತ್ತು. 19 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಇವರಲ್ಲಿ ಒಬ್ಬರು ಅರ್ಹವಾಗಿಲ್ಲದ ಕಾರಣ 18 ಜನರಿಗೆ ದಿನಾಂಕ 04-09-2019 ರಂದು ಸಂದರ್ಶನ ನಡೆಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯ ಕಾನೂನು ಸಲಹೆಗಾರರಾದ ನಿವೃತ್ತ ನ್ಯಾಯಾಧೀಶರು, ಪಾಲಿಕೆ ಆಯುಕ್ತರು, ಪ್ರಭಾರ ಉಪ ಆಯುಕ್ತರು (ಕಂದಾಯ) ಮತ್ತು ನಗರ ಯೋಜನಾ ಶಾಖೆಯ ಜಂಟಿ ನಿರ್ದೇಶಕರು ಈ ಸಂದರ್ಶನ ನಡೆಸಿದ್ದರು. ಅಂತಿಮವಾಗಿ ಆಯ್ಕೆಯಾದ ಅಭ್ಯ ರ್ಥಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕಾನೂನು ಸಲಹೆಗಾರರು ಸಿದ್ಧಪಡಿಸಿ ಸೀಲ್ ಮಾಡಿದ ಲಕೋಟೆಯಲ್ಲಿ ಪಾಲಿಕೆಗೆ ಕಳಿಸಿದ್ದರು. ಸದರಿ ಲಕೋಟೆಯನ್ನು ಪಾಲಿಕೆಯ ಇತ್ತೀಚಿನ ಸಾಮಾನ್ಯ ಸ‘ೆಯಲ್ಲಿ ತೆರೆಯಲಾಗಿದ್ದು, ಅದರಂತೆ ಈ ಮೂವರು ಆಯ್ಕೆಯಾಗಿರುವುದನ್ನು ಸಭೆಯಲ್ಲಿ ಚರ್ಚಿಸಿ (ವಿಷಯ: 56/18) , ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಪೂರ್ಣಯ್ಯ ಛತ್ರ ಬಾಡಿಗೆಗೆ
ತುಮಕೂರು ನಗರದ ಚಿಕ್ಕಪೇಟೆಯಲ್ಲಿರುವ ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತಾದ ‘‘ದಿವಾನ್ ಪೂರ್ಣಯ್ಯ ಛತ್ರ’’ವನ್ನು ಬ್ಯಾಂಕ್ ಅಥವಾ ಇತರೆ ಸಂಘ ಸಂಸ್ಥೆಗಳಿಗೆ ಬಾಡಿಗೆಗೆ ನೀಡಬೇಕೆಂಬ ಬಗ್ಗೆ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಚರ್ಚೆ (ವಿಷಯ: 56/19) ಆಗಿದ್ದು, ಈ ಬಗ್ಗೆ ನಿಯಮಾನುಸಾರವಾಗಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಸ್ತುತ ಈ ಕಟ್ಟಡದಲ್ಲಿ ಮಹಾನಗರ ಪಾಲಿಕೆಯ ವಲಯ ಕಚೇರಿ ಇದ್ದು, ಪಾಲಿಕೆಯಿಂದ ಲಕ್ಷಾಂತರ ರೂ. ವಿನಿಯೋಗಿಸಿ ಇಲ್ಲಿ ಪೀಠೋಪಕರಣಗಳನ್ನು ಅಳವಡಿಸಲಾಗಿದೆ.
ಸ್ಮಾರ್ಟ್ಸಿಟಿಗೆ ನೇಮಕ
ತುಮಕೂರು ಸ್ಮಾರ್ಟ್ಸಿಟಿ ಕಂಪನಿಗೆ ಪಾಲಿಕೆ ವತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಸ‘ೆಯಲ್ಲಿ ಚರ್ಚಿಸಿದ್ದು (ವಿಷಯ: 56/22), ಅಂತಿಮವಾಗಿ ಬಿಜೆಪಿಯ ದೀಪಶ್ರೀ ಮಹೇಶ್ ಬಾಬು (4 ನೇ ವಾರ್ಡ್- ಚಿಕ್ಕಪೇಟೆ) ಮತ್ತು ಕಾಂಗ್ರೆಸ್ನ ಷಕೀಲ್ ಅಹಮದ್ ಶರ್ೀ (12 ನೇ ವಾರ್ಡ್- ನಜರಾಬಾದ್) ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
