ರೇಷನ್ ಕಾರ್ಡ್ :ಶೇ 40ರಷ್ಟು ಆಧಾರ್ ನೊಂದಣಿ ಪೂರ್ಣ..!

ಬೆಂಗಳೂರು

      ಆಹಾರ ಇಲಾಖೆಯ ರೇಷನ್ ಕಾರ್ಡ್‌ಗೆ ಇ-ಕೆವೈಸಿ ದೃಢೀಕರಣ ಜಾರಿಗೊಳಿಸಿ ರಾಜ್ಯದಲ್ಲಿನ ಬೋಗಸ್ ಪೆಡಿತರ ಕಾರ್ಡ್ ಪತ್ತೆಹಚ್ಚಿ ರಾಜಸ್ವಕ್ಕೆ ಪ್ರತಿ ವರ್ಷ ಆಂದಾಜು 252 ಕೋಟಿ ರೂ. ಉಳಿತಾಯ ಮಾಡಿದೆ.

      ಬೋಗಸ್ ಪಡಿತರ ಕಾರ್ಡ್ ಪತ್ತೆಯಿಂದ ಪ್ರತಿ ತಿಂಗಳು ಇಲಾಖೆಗೆ ಬರೋಬ್ಬರಿ ಆಂದಾಜು 7 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯ ಉಳಿಯಲಿದೆ.ಪ್ರಸ್ತುತ ರಾಜ್ಯದಲ್ಲಿ 7,69,585 ಅಂತ್ಯೋದಯ, 1,16,84,911 ಬಿಪಿಎಲ್ ಮತ್ತು 19,41,692 ಎಪಿಎಲ್ ಸೇರಿ ಒಟ್ಟು 1,43,96,188 ಕಾರ್ಡ್‌ಗಳಿದ್ದು, 4,87,33,221 ಸದಸ್ಯರಿದ್ದಾರೆ.

     ಕಳೆದ 4 ವರ್ಷಗಳಲ್ಲಿ ಏನಿಲ್ಲವಾದರೂ ಆಂದಾಜು 10 ಲಕ್ಷ ಲಾನುಭವಿಗಳು ಮೃತಪಟ್ಟಿದ್ದಾರೆ. ಆದರೆ, ಅವರ ಕುಟುಂಬದವರು ಸತ್ತಿರುವ ಲಾನುಭವಿಗಳ ಹೆಸರಿನಲ್ಲಿ ರೇಷನ್ ಪಡೆಯುತ್ತಿದ್ದಾರೆ.ಈ ಬಗ್ಗೆ ಇಲಾಖೆಯೇ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ-2013(ಎನ್‌ಎ?ಎಸ್‌ಎ) ಪ್ರಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಪಡಿತರ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರು ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂಬ ನಿಯಮ ತಂದಿದೆ.

      ಇದರ ಪರಿಣಾಮ, ರಾಜ್ಯಾದ್ಯಂತ ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದ್ದು. ಶೇ.40 ಆಧಾರ್ ದೃಢೀಕರಣ ವಾಗಿದೆ.ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ಕಳೆದ 4 ವರ್ಷಗಳ ಹಿಂದೆ ರಾಜ್ಯಾದ್ಯಂತ ರೇಷನ್ ಕಾರ್ಡ್‌ಗಳನ್ನು ಪರಿಶೀಲನೆ ಕಾರ್ಯ ನಡೆದಿತ್ತು. ಆನಂತರ, ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆ ಮಾಡಬೇಕೆಂಬ ನಿಯಮ ತರಲಾಗಿತ್ತು. ಶೇ.100 ಆಧಾರ್ ಜೋಡಣೆಯಾಗಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಯಾಗಿತ್ತು. ಆದರೆ, 4 ವರ್ಷದಿಂದ ಕಾರ್ಡ್ ಪರಿಶೀಲನೆ ಕಾರ್ಯವಾಗಿರಲಿಲ್ಲ. ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇ-ಕೆವೈಸಿ ವಿವರ

      ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಬೇಕು. ಸರ್ಕಾರವು ಪ್ರತಿ ಲಾನುಭವಿಯು ದೃಢೀಕರಣಕ್ಕೆ 5 ರೂ.ನಂತೆ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಲಾನುಭವಿ ಇದ್ದರೂ ನೋಂದಾಣಿಗೆ ಗರಿಷ್ಟ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ.

       ಪ್ರತಿ ನ್ಯಾಯಬೆಲೆ ಅಂಗಡಿಯ ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇ-ಕೆವೈಸಿ ಮಾಡಿಸತಕ್ಕದು. ಕಾರ್ಡ್ ಸಂಖ್ಯೆಯನ್ನು ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕು.

      ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ. ನೈಜ ಲಾನುಭವಿಗಳನ್ನು ಗುರುತಿಸುವ ಸಲುವಾಗಿ ದೃಢೀಕರಣ ವೇಳೆ ಎಸ್ಸಿ ಮತ್ತು ಎಸ್ಟಿ ಪಂಗಡದ ಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡತಕ್ಕದ್ದು, ಎಲ್ಲ ಲಾನುಭವಿಗಳು ಗ್ಯಾಸ್ ಸಂಪರ್ಕದ ಮಾಹಿತಿಯನ್ನು ನೀಡಬೇಕು. ಇದರಿಂದಾಗಿ, ಯಾವ ಲಾನುಭವಿಯೂ ಉಜ್ವಲ, ಅನಿಲ ಭಾಗ್ಯ ಮತ್ತು ಖಾಸಗಿ ಗ್ಯಾಸ್ ಏಜೆನ್ಸಿಗಳಿಂದ ಅನಿಲ ಸಂಪರ್ಕ ಪಡೆದಿರುವ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಿಗಲಿದೆ.

     ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ ಪ್ರಕಾರ ಪ್ರತಿ ವರ್ಷ ರೇಷನ್ ಕಾರ್ಡ್ ದೃಢೀಕರಣ ಮಾಡಿಸಬೇಕೆಂಬ ನಿಯಮ ಇದೆ. ಆದರೆ, ಕಳೆದ 4 ವರ್ಷದಿಂದ ರೇಷನ್ ಕಾರ್ಡ್ ದೃಢೀಕರಣವಾಗಿಲ್ಲ. ಪ್ರತಿ ತಿಂಗಳು ಆಂದಾಜು 7ಸಾವಿರ ಮೆಟ್ರಿಕ್ ಟನ್ ಪಡಿತರ ಧಾನ್ಯವನ್ನು ಸತ್ತವರ ಹೆಸರಿನಲ್ಲಿ ಫಲಾನುಭವಿಗಳು ಪಡೆಯುತ್ತಿದ್ದು, ಇಲಾಖೆಗೆ ನೂರಾರು ಕೋಟಿ ನಷ್ಟವಾಗುತ್ತಿದೆ. ಹೀಗಾಗಿ, ಬೋಗಸ್ ಫಲಾನುಭವಿ ಪತ್ತೆ ಹಚ್ಚಲು ಮತ್ತು ಸೋರಿಕೆ ತಡೆಗಟ್ಟಲು ಇ-ಕೆವೈಸಿವನ್ನು ಜಾರಿಗೆ ತರಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

     ಪ್ರತಿ ಲಾನುಭವಿಗೆ ನೀಡುವ 7 ಕೆಜೆ ಅಕ್ಕಿಯನ್ನು 10 ಲಕ್ಷ ಲಾನುಭವಿಗಳಿಗೆ ಗುಣಕಾರ ಮಾಡಿದರೆ 7 ಸಾವಿರ ಮೆಟ್ರಿಕ್ ಟನ್‌ವಾಗುತ್ತದೆ. 7ಸಾವಿರ ಮೆಟ್ರಿಕ್ ಅನ್ನು ಪ್ರತಿ ಕೆಜಿಗೆ 30 ರೂ.ನಂತೆ ಲೆಕ್ಕ ಹಾಕಿದರೆ 21 ಕೋಟಿ ರೂ.ಆಗಲಿದೆ. ಈ ಮೊತ್ತವನ್ನು ಪ್ರತಿ ತಿಂಗಳಂತೆ ಒಂದು ವರ್ಷಕ್ಕೆ ಲೆಕ್ಕ ಹಾಕಿದರೆ ಬರೋಬ್ಬರಿ 252 ಕೋಟಿ ರೂ.ಆಗಲಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link