400 ಎಚ್1ಎನ್1 ಪ್ರಕರಣಗಳು

0
17

ಬೆಂಗಳೂರು

      ರಾಜ್ಯದಲ್ಲಿ ಕಳೆದ ಜನವರಿಯಿಂದ ಇದುವರೆಗೆ ಹಂದಿ ಜ್ವರ ಅಥವಾ ಎಚ್1ಎನ್1 ಸೋಂಕಿನ 400 ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಅಭಿಯಾನ ಆರಂಭಿಸಿದೆ.

      ಅತಿ ಹೆಚ್ಚು 89 ಖಚಿತ ಪ್ರಕರಣಗಳು ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಶಿವಮೊಗ್ಗದಲ್ಲಿ 43 ಪ್ರಕರಣಗಳು ವರದಿಯಾಗಿದೆ. ಆದರೆ ಸೋಂಕಿನಿಂದ ಈ ವರ್ಷ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಂಕಿಅಂಶ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ 15 ರಾಜ್ಯದಲ್ಲಿ ಎಚ್1ಎನ್1 ಸೋಂಕಿನಿಂದ 15 ಮಂದಿ ಮೃತಪಟ್ಟಿದ್ದರು. 3 ಸಾವಿರದ 60 ಪ್ರಕರಣಗಳು ಕಳೆದ ವರ್ಷ ಸೋಂಕು ಖಚಿತವಾದ ಪ್ರಕರಣಗಳು ವರದಿಯಾಗಿದ್ದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here