ಜಾತ್ರೆಗಳಲ್ಲಿ ಕಳ್ಲತನ ಮಾಡುತ್ತಿದ್ದ ಗ್ಯಾಂಗ್ ಬಂಧನ : 410 ಗ್ರಾಂ ಚಿನ್ನ ವಶ

0
64

ಬೆಂಗಳೂರು

           ಜಾತ್ರೆ, ಸಭೆ ಸಮಾರಂಭಗಳಿಗೆ ಟೀಪ್ ಟಾಪಾಗಿ ಹೋಗಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಹೆಂಡಿರ ಮುದ್ದಿನ ಗಂಡ ಸೇರಿ ಐವರನ್ನು ಗ್ಯಾಂಗ್‍ನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

       ಹೆಗ್ಗಡದೆವನಕೋಟೆಯ ಹಂಪಾಪುರದ ಶ್ರೀಕಾಂತ್ ಆತನ ಪತ್ನಿಯರಾದ ಲಕ್ಷ್ಮೀ, ಗಾಯತ್ರಿ, ಆತನ ಸಹೋದರಿ ಶಿವಮ್ಮ ಸ್ನೇಹಿತ ಭೋಜ ಬಂಧಿತ ಆರೋಪಿಯಾಗಿದ್ದಾರೆ, ಬಂಧಿತರಿಂದ 50 ಸಾವಿರ ನಗದು,410 ಗ್ರಾಂ ಚಿನ್ನಾಭರಣ ಸೇರಿ 12 ಲಕ್ಷ ರೂ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.

        ಕಳೆದ ಡಿ.23 ರಂದು ನಂದಿಗಿರಿಧಾಮದ ಸೂಲಾಲಪ್ಪನದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇವರ ಕಡಲೆಕಾಯಿ ಪರಿಷೆ ನಡೆಯುತ್ತಿತ್ತು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್ ಪರಿಷೆಯಲ್ಲಿದ್ದವರ ಗಮನ ಬೇರೆಡೆ ಸೆಳೆದು 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದು ಈ ಸಂಬಂಧ ದೂರು ದಾಖಲಿಸಿ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿತ್ತು.

     ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಚಿಕ್ಕಬಳ್ಳಾಪುರದ ನಂದಿ ಮತ್ತು ಚಿತ್ರಾವತಿ ಜಾತ್ರೆಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ನಡುವೆ ಸಮ್ಯಾತೆ ಕಾಣಿಸಿತ್ತು. ಅಲ್ಲದೇ ಈ ಬಗ್ಗೆ ಅನುಮಾನ ಹೆಚ್ಚಾಗಿ ವಿಚಾರಣೆಯನ್ನು ತೀವ್ರಗೊಳಿಸಿದ ವೇಳೆ ಕಾರಿನಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಬಂದು ಕಳ್ಳತನ ಮಾಡುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಎಳೆ ಆಧರಿಸಿ ತನಿಖೆ ಮುಂದುವರಿಸಿದ ಸಮಯದಲ್ಲಿ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

       ಕಳ್ಳತನವೇ ವೃತ್ತಿ ಮಾಡಿಕೊಂಡಿದ್ರು: ಈ ಹಿಂದೆ ಬಡತನದಿಂದ ಸಮಸ್ಯೆಗಳನ್ನು ಎದುರಿಸಿದ್ದ ಈ ಕುಟುಂಬ ಸದಸದ್ಯರು ಇತ್ತೀಚೆಗೆ ಏಕಾಏಕಿ ಐಷಾರಾಮಿ ಜೀವನ ನಡೆಸಲು ಮುಂದಾಗಿದ್ದರು. ತಮ್ಮ ಈ ಐಷಾರಾಮಿ ಜೀವನಕ್ಕೆ ಕುಟುಂಬದ ಎಲ್ಲಾ ಸದಸ್ಯರು ಕೂಡ ಸರಗಳ್ಳತನ ಮಾಡುವುದನ್ನು ವೃತ್ತಿಯಾಗಿ ತೆಗೆದುಕೊಂಡಿದ್ದರು ಗ್ಯಾಂಗ್‍ನ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ 410 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here