ಬೆಂಗಳೂರು
ವೇಗವಾಗಿ ಬಂದ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಸೈಕಲ್‍ನಲ್ಲಿ ಹೋಗುತ್ತಿದ್ದ 5 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ಆಟೋ ಚಾಲಕ ಲೋಕೇಶ್ ಹಾಗೂ ಕಾವೇರಿ ದಂಪತಿಯ ಪುತ್ರ ಗಗನ್(5)ಎಂದು ಮೃತ ಬಾಲಕನನ್ನು ಗುರುತಿಸಲಾಗಿದೆ ಹೆಗ್ಗನಹಳ್ಳಿಯ ಅತ್ತೆಯ ಮನೆಗೆ ಬಂದಿದ್ದ ಗಗನ್ ಶನಿವಾರ ಮಧ್ಯಾಹ್ನ ಹೆಗ್ಗನಹಳ್ಳಿಯ ಮಾರಮ್ಮ ದೇವಾಲಯದ ಬಳಿ 3.30ರ ವೇಳೆ ಮನೆಯ ಬಳಿ ಸೈಕಲ್ ಚಲಾಯಿಸುತ್ತಿದ್ದಾಗ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಗಗನ್‍ನ್ನು ಸಹೆಗ್ಗನಹಳ್ಳಿಯ ಮಾರಮ್ಮನ ದೇವಸ್ಥಾನ ಬಳಿಯ ಗಗನ್ ಎಂದು ಮೃತ ಬಾಲಕನನ್ನು ಗುರುತಿಸಲಾಗಿದೆ.ಕಾಮಾಕ್ಷಿಪಾಳ್ಯದ ರವಿನಂದನ್ ಶಾಲೆಯಲ್ಲಿ ಎಲ್‍ಕೆಜಿ ಓದುತ್ತಿದ್ದ ಗಗನ್ ಶಾಲೆಗೆ ರಜೆ ಇದುದ್ದರಿಂದ ಶನಿವಾರ ಮಧ್ಯ್ಥಾಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಟೆಂಪೋ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
