ಚಿತ್ರದುರ್ಗ
ಡೆಂಗ್ಯೂ, ಚಿಕುನ್ಗುನ್ಯಾ, ಮಲೇರಿಯಾ ನಂತಹ ಮಾರಕ ರೋಗಗಳನ್ನು ಹರಡುವ ಸೊಳ್ಳೆಗಳನ್ನು ಜೈವಿಕ ವಿಧಾನದಲ್ಲಿ ನಿಯಂತ್ರಣಗೊಳಿಸಲು, ಅಗತ್ಯ ಕ್ರಮಗಳನ್ನು ಕೂಡಲೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪಿ.ಎನ್. ರವೀಂದ್ರಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಚ್ಛ ಭಾರತಅಭಿಯಾನದಡಿಡೆಂಗ್ಯೂ ಹಾಗೂ ಕೀಟಜನ್ಯ ರೋಗಗಳ ನಿಯಂತ್ರಣಕುರಿತುಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದೆರಡು ವರ್ಷಗಳಿಗೆ ಹೋಲಿಸಿದಾಗ, ಈ ವರ್ಷಜಿಲ್ಲೆಯಲ್ಲಿಡೆಂಗ್ಯೂ ಮತ್ತುಚಿಕುನ್ಗುನ್ಯಾರೋಗ ಪ್ರಕರಣಗಳು ಕಡಿಮೆ ವರದಿಯಾಗಿವೆ .ಆರೋಗ್ಯಇಲಾಖೆಯು ನಗರ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಗಳ ಜೊತೆಗೂಡಿಕೈಗೊಂಡಜಾಗೃತಿ ಕಾರ್ಯಗಳು ಹಾಗೂ ಮುಂಜಾಗ್ರತಾ ಕ್ರಮಗಳಿಂದಾಗಿ ಈ ವರ್ಷ ಸೊಳ್ಳೆಗಳಿಂದ ಹರಡುವ ರೋಗಗಳ ಪ್ರಕರಣಗಳು ಕಡಿಮೆಯಾಗಿರುವುದು ಸಮಾಧಾನಕರ ವಿಷಯವಾಗಿದೆ.ಆದಾಗ್ಯೂ ಈ ವರ್ಷ ವರದಿಯಾದ 90 ಡೆಂಗ್ಯೂ ಹಾಗೂ 129 ಚಿಕುನ್ಗುನ್ಯಾ ಪ್ರಕರಣಗಳ ಪೈಕಿ ಚಿತ್ರದುರ್ಗತಾಲೂಕುಒಂದರಲ್ಲೇಅತಿ ಹೆಚ್ಚು ಅಂದರೆ 56 ಡೆಂಗ್ಯೂ ಪ್ರಕರಣಗಳು ಕಂಡುಬಂದಿರುವುದು ಒಳ್ಳೆಯ ಲಕ್ಷಣವಲ್ಲಎಂದು ಮುಖ್ಯಕಾರ್ಯನಿರ್ವಾಹಕಅಧಿಕಾರಿ ಪಿ.ಎನ್. ರವೀಂದ್ರಅವರು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಡಾ.ಜಯಮ್ಮಅವರು, ಈ ವರ್ಷ ಚಳ್ಳಕೆರೆ ತಾಲ್ಲೂಕು- 08 ಡೆಂಗ್ಯೂ, 10 ಚಿಕುನ್ಗುನ್ಯಾ, ಚಿತ್ರದುರ್ಗ-56 ಡೆಂಗ್ಯೂ, 88 ಚಿಕುನ್ಗುನ್ಯಾ, ಹಿರಿಯೂರು-05 ಡೆಂಗ್ಯೂ, 10 ಚಿಕುನ್ಗುನ್ಯಾ, ಹೊಳಲ್ಕೆರೆ-13 ಡೆಂಗ್ಯೂ, 14 ಚಿಕುನ್ಗುನ್ಯಾ, ಹೊಸದುರ್ಗ-06 ಡೆಂಗ್ಯೂ, 06 ಚಿಕುನ್ಗುನ್ಯಾ, ಮೊಳಕಾಲ್ಮೂರು-02 ಡೆಂಗ್ಯೂ, 01 ಚಿಕುನ್ಗುನ್ಯಾ ಸೇರಿದಂತೆಒಟ್ಟು 90 ಡೆಂಗ್ಯೂ ಹಾಗೂ 129 ಚಿಕುನ್ಗುನ್ಯಾ ಪ್ರಕರಣಗಳು ವರದಿಯಾಗಿವೆ.
2.9 ಲಕ್ಷಜನರರಕ್ತ ಮಾದರಿತಪಾಸಣೆ ಮಾಡಿದ್ದು, ಕೇವಲ 09 ಮಲೇರಿಯಾ ಪ್ರಕರಣಖಚಿತಪಟ್ಟಿದೆ. ಇಲಾಖೆಯಿಂದ ಸೊಳ್ಳೆ ಲಾರ್ವ ಸಮೀಕ್ಷೆಕೈಗೊಂಡ ಸಂದರ್ಭದಲ್ಲಿ, ಚಿತ್ರದುರ್ಗ ನಗರದ ವೆಂಕಟೇಶ್ವರ ಬಡಾವಣೆ, ವೆಂಕಟರಮಣದೇವಸ್ಥಾನ ಸುತ್ತಮುತ್ತಲ ಪ್ರದೇಶ, ಬ್ಯಾಂಕ್ ಕಾಲೋನಿ, ಜೆ.ಸಿ.ಆರ್.ಬಡಾವಣೆ, ಕಾಮನಬಾವಿ ಬಡಾವಣೆ, ಚೋಳುಗುಡ್ಡ, ಹೊಳಲ್ಕೆರೆ ರಸ್ತೆ ಪ್ರದೇಶದಲ್ಲಿ ಸ್ವಚ್ಛತೆಯಕೊರತೆ ಹಾಗೂ ಅಲ್ಲಲ್ಲಿ ನೀರು ನಿಲ್ಲುವುದುಕಂಡುಬಂದಿದ್ದು, ಇಲ್ಲಿಡೆಂಗ್ಯೂಕಾರಣವಾಗುವ ಸೊಳ್ಳೆಗಳ ಲಾರ್ವ ಪತ್ತೆಯಾಗುತ್ತಿದೆ. ನಗರಸಭೆ ವತಿಯಿಂದ ಈ ಪ್ರದೇಶಗಳಲ್ಲಿ ಸ್ವಚ್ಛತೆಕಾರ್ಯ ಕೈಗೊಳ್ಳಬೇಕಿದೆ.ನೀರು ಸಂಗ್ರಹಣಾ ತೊಟ್ಟಿಗಳನ್ನು ವಾರಕ್ಕೊಮ್ಮೆಯಾದರೂ ಸಂಪೂರ್ಣ ಖಾಲಿ ಮಾಡಿ, ಒಣಗಿಸಿ, ಪುನಃ ಬಳಸಬೇಕು.ಇದರಿಂದಾಗಿ ಸೊಳ್ಳೆಗಳಉತ್ಪತ್ತಿಯನ್ನುತಡೆಗಟ್ಟಬಹುದುಎಂದು ಸಭೆಯಲ್ಲಿ ತಿಳಿಸಿದರು.
ಜೈವಿಕ ನಿಯಂತ್ರಣ :ಸೊಳ್ಳೆ ಲಾರ್ವಗಳನ್ನು ತಿನ್ನುವ ಗಾಂಬೂಸಿಯಾ ಮತ್ತುಗಪ್ಪಿ ಮೀನುಗಳನ್ನು, ನೀರಿನ ಸಂಗ್ರಹಣಾ ಪ್ರದೇಶಗಳಲ್ಲಿ ಬಿಡುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದ್ದು, ಇದೊಂದುಉತ್ತಮಜೈವಿಕ ವಿಧಾನವಾಗಿದೆ. ಜಿಲ್ಲೆಯಎಲ್ಲತಾಲೂಕು ಗಳಲ್ಲಿ ಮೀನುಗಾರಿಕೆಇಲಾಖೆಯ ಮೀನು ಸಾಕಾಣಿಕೆ ತೊಟ್ಟಿಗಳಿದ್ದು, ಇವುಗಳಲ್ಲಿ ಕನಿಷ್ಟ ಒಂದೆರಡು ತೊಟ್ಟಿಗಳನ್ನು ಗಾಂಬೂಸಿಯಾ ಮತ್ತುಗಪ್ಪಿ ಮೀನುಗಳ ಉತ್ಪಾದನೆಗೆ ಬಳಸಿಕೊಳ್ಳಬೇಕು. ಬಳಿಕ ಈ ಮೀನುಗಳನ್ನು ಸೊಳ್ಳೆಗಳ ಲಾರ್ವ ಹೆಚ್ಚಿರುವ ಪ್ರದೇಶಗಳಲ್ಲಿನ ನೀರು ಸಂಗ್ರಹಣಾಗಾರಗಳಿಗೆ ಬಿಟ್ಟಲ್ಲಿ, ಪರಿಣಾಮಕಾರಿಯಾಗಿ ಸೊಳ್ಳೆಗಳ ಉತ್ಪತ್ತಿಯನ್ನುತಡೆಗಟ್ಟಬಹುದು.
ನಗರ ಮತ್ತು ಪಟ್ಟಣಗಳಲ್ಲಿನ ಎಲ್ಲ ಹೋಟೆಲ್ಗಳು ತಮ್ಮಲ್ಲಿನ ನೀರು ಶೇಖರಿಸುವತೊಟ್ಟಿ, ಟ್ಯಾಂಕ್ಗಳನ್ನು ವಾರಕ್ಕೊಮ್ಮೆಕಡ್ಡಾಯವಾಗಿ ಖಾಲಿ ಮಾಡಿ, ಒಣಗಿಸಿ, ನಂತರವೇಒಣಗಿಸಲು ಸೂಚನೆ ನೀಡಬೇಕು.ಶಾಲೆಯಲ್ಲಿ ಮಕ್ಕಳಿಗೆ ಬೆಳಗಿನ ಪ್ರಾರ್ಥನೆ ವೇಳೆ 2 ನಿಮಿಷವಾದರೂ, ಸ್ವಚ್ಛತೆಯಕುರಿತುಅರಿವು ಮೂಡಿಸಬೇಕು.
ಎಲ್ಲತಾಲೂಕು ಮಟ್ಟದಲ್ಲಿ ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ, ಪ.ಪಂಚಾಯತ್ ಮುಖ್ಯಾಧಿಕಾರಿ, ವೈದ್ಯಾಧಿಕಾರಿಗಗಳನ್ನೊಳಗೊಂಡಂತೆ ಸಭೆಕೈಗೊಂಡು, ಅಧಿಕಾರಿಗಳು ಕೂಡಲೆ, ಈ ಕಾರ್ಯಕ್ಕೆ ನಗರ ಸ್ವಚ್ಛಗೊಳಿಸಿ :ಚಿತ್ರದುರ್ಗ ನಗರದಲ್ಲಿ ಹೆಚ್ಚು ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು, ಇದಕ್ಕೆ ಗ್ಯಾರೇಜ್ಗಳ ಬಳಿ ಇಡುವಅನುಪಯುಕ್ತ ಟೈರ್ಗಳು, ಎಳನೀರು ಮಾರಾಟಗಾರರುಅಲ್ಲಲ್ಲಿ ಬಿಡುವ ಚಿಪ್ಪುಗಳು, ಚರಂಡಿ ಸ್ವಚ್ಛಗೊಳಿಸದ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತಿವೆ.
ನಗರದಲ್ಲಿಇತ್ತೀಚೆಗೆ ಹಂದಿಗಳ ಹಾವಳಿ ವಿಪರೀತವಾಗಿದ್ದು, ಮಾರಕ ರೋಗಗಳಿಗೆ ಕಾರಣವಾಗುತ್ತಿದೆ.ನಗರಸಭೆ ಅಧಿಕಾರಿಗಳು ಈ ನಿಟ್ಟಿನಲ್ಲಿಎಚ್ಚರಿಕೆ ವಹಿಸಿ, ನಗರದಎಲ್ಲ ಚರಂಡಿಗಳನ್ನು ಅದರಲ್ಲೂ ಸಮಸ್ಯಾತ್ಮಕ ಪ್ರದೇಶಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕು.ಸ್ವಚ್ಛತಾಕ್ರಮ ಕೈಗೊಳ್ಳದ ಗ್ಯಾರೇಜ್ಗಳ ಪರವಾನಗಿಯನ್ನುರದ್ದುಪಡಿಸಬೇಕುಎಂದು ನಗರಸಭೆ ಅಧಿಕಾರಿಗಳಿಗೆ ಪಿ.ಎನ್. ರವೀಂದ್ರಅವರು ಸೂಚನೆ ನೀಡಿದರು.
ಈ ವೇಳೆ ನಗರಸಭೆ ಪೌರಾಯುಕ್ತಚಂದ್ರಪ್ಪ ಪ್ರತಿಕ್ರಿಯಿಸಿ, ಹಂದಿಗಳನ್ನು ನಗರ ವ್ಯಾಪ್ತಿಯಿಂದ ಹೊರಸಾಗಿಸುವಂತೆ ಮಾಲೀಕರುಗಳಿಗೆ ನೋಟಿಸ್ ನೀಡಲಾಗಿದೆ. ಹಂದಿಗಳನ್ನು ಸಾಗಿಸದಿದ್ದಲ್ಲಿ, ನಗರಸಭೆಯಿಂದಅಗತ್ಯಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿನ ಚರಂಡಿಗಳ ಸ್ವಚ್ಛತೆಗೆಕೂಡಲೆಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿಜಿಲ್ಲಾ ಶಸ್ತ್ರಚಿಕಿತ್ಸಕಡಾ.ಜಯಪ್ರಕಾಶ್, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಾದಿಕಾರಿಗಳಾದ ಡಾ. ಸುಧಾ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
