ತುಮಕೂರು : ಹೊಸದಾಗಿ 59 ಮಂದಿಗೆ ಸೋಂಕು

ತುಮಕೂರು

    ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕು ಹಾಗೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಶುಕ್ರವಾರ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಹೊಸದಾಗಿ 59 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪಿದೆ. ಶಕ್ರವಾರಕ್ಕೆ ಜಿಲ್ಲೆಯಲ್ಲಿ 991 ಪಾಸಿಟೀವ್ ಪ್ರಕರಣ ವರದಿಯಾಗಿವೆ.

     ಶುಕ್ರವಾರ 3 ಜನರು ಮೃತಪಟ್ಟಿದ್ದು, ಈವರೆಗೆ ಜಿಲ್ಲೆಯಲ್ಲಿ ಒಟ್ಟು 38 ಜನ ಮೃತಪಟ್ಟಿದ್ದಾರೆ. ಇದರಲ್ಲಿ ತುಮಕೂರು ತಾಲ್ಲೂಕಿನ 25, ಕುಣಿಗಲ್ ತಾಲ್ಲೂಕಿನ 3, ಗುಬ್ಬಿ, ಕೊರಟಗೆರೆ, ಶಿರಾ ತಾಲ್ಲೂಕಿನ ತಲಾ ಇಬ್ಬರು ಹಾಗೂ ಚಿಕ್ಕನಾಯಕನಹಳ್ಳಿ, ಮಧುಗಿರಿ, ಪಾವಗಡ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

      ಶುಕ್ರವಾರ ವರದಿಯಾದ 59 ಪ್ರಕರಣ ಸೇರಿ ಜಿಲ್ಲೆಯಲ್ಲಿ 991 ಜನ ಕೋವಿಡ್ ಸೋಂಕಿತರಿದ್ದಾರೆ. ಇವರಲ್ಲಿ ತುಮಕೂರು ತಾಲ್ಲೂಕಿನ 22 ಜನರಲ್ಲಿ ಕೋವಿಡ್ ವೈರಸ್ ಖಚಿತವಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ 8, ಗುಬ್ಬಿ ತಾಲ್ಲೂಕಿನಲ್ಲಿ 7, ತಿಪಟೂರು ತಾಲ್ಲೂಕಿನಲ್ಲಿ 7, ಪಾವಗಡ ತಾಲ್ಲೂಕಿನಲ್ಲಿ 1, ಕುಣಿಗಲ್ ತಾಲ್ಲೂಕಿನಲ್ಲಿ 5, ಶಿರಾ ತಾಲ್ಲೂಕಿನಲ್ಲಿ 1, ತಾಲ್ಲೂಕಿನ 4, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 2, ತುರುವೇಕೆರೆ ತಾಲ್ಲೂಕಿನಲ್ಲಿ 5 ಜನರಲ್ಲಿ ಸೋಂಕು ಕಾಣಿಸಿದೆ. ಇವರಲ್ಲಿ 17 ಪುರುಷರು, 50 ಮಹಿಳೆಯರು ಸೇರಿದ್ದಾರೆ. 60 ವರ್ಷ ವಯಸ್ಸಿನ ಮೇಲ್ಪಟ್ಟ 12 ಜನ ಇದ್ದಾರೆ.

       ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 931 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 400, ಪಾವಗಡ ತಾ. 87, ಶಿರಾ 77, ಕುಣಿಗಲ್ ತಾ. 78, ಮಧುಗಿರಿ ತಾ. 76, ಚಿಕ್ಕನಾಯಕನಹಳ್ಳಿ ತಾ. 51, ಗುಬ್ಬಿ ತಾ. 49, ಕೊರಟಗೆರೆ ತಾ. 47, ತಿಪಟೂರು ತಾ. 34, ತುರುವೇಕೆರೆ ತಾ. 32 ಪ್ರಕರಣ ವರದಿಯಾಗಿವೆ.

     ಬುಧವಾರ ಗುಣಮುಖರಾಗಿ ಆಸ್ಪತ್ರೆಯಿಂದ 3 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 488 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 408 ಸಕ್ರಿಯ ಪ್ರಕರಣಗಳಿವೆ. ಮಧುಮೇಹ, ಅಧಿಕ ರಕ್ತದ ಒತ್ತಡ, ಜ್ವರ, ಕೆಮ್ಮು, ಶೀತ ಇತರೆ ರೋಗ ಲಕ್ಷಣಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

      ಈಲ್ಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟ 35 ಜನರ ಪೈಕಿ ತುಮಕೂರು ತಾಲ್ಲೂಕಿನಲ್ಲೇ ಹೆಚ್ಚು. ತುಮಕೂರು ತಾಲ್ಲೂಕಿನ 24, ಗುಬ್ಬಿ, ಕುಣಿಗಲ್, ಶಿರಾ ತಾಲ್ಲೂಕಿನ ತಲಾ ಇಬ್ಬರು ಹಾಗೂ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ತಿಪಟೂರು ತಾಲ್ಲೂಕಿನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link