ಸಿರುಗುಪ್ಪ 63ನೇ ರಾಜ್ಯೊತ್ಸವ ಪುರ್ವಭಾವಿ ಸಭೆ.

ಸಿರುಗುಪ್ಪ :-

        ಬಳ್ಳಾರಿ ಲೋಕ ಸಭಾ ಉಪ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾದ ಹೀಗಾಗಿ ತಾಲೂಕು ಆಡಳಿತದಿಂದ ಪ್ರತಿ ವರ್ಷದಂತೆ 63ನೇ ಕನ್ನಡ ರಾಜ್ಯೋತ್ಸವ ನವೆಂಬರ್ 1ರಂದು ಬೆಳಗ್ಗೆ ಸರಿಯಾಗಿ 9ಗಂಟೆಗೆ ತಾಲೂಕು ಕಚೇರಿ ಮೈದಾನದಲ್ಲಿ ರಾಷ್ಟ್ರ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಯಿ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ಹೂಮಾಲೆಯಿಂದ ನಮನ ಸಲ್ಲಿಸಿ ಉಪನ್ಯಾಸಕರಿಂದ ವಿಶೇಷವಾಗಿ ಉಪನ್ಯಾಸ ನೀಡಲಾಗುವುದು ಎಂದು ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ದಯಾನಂದ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನಸೌಧ ತಹಸೀಲ್ದಾರ್ ಚೇಂಬರ್ ನಲ್ಲಿ ರಾಜ್ಯೊತ್ಸವದ ಪೂರ್ವಭಾವಿ ಸಭೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು.

        ರಾಷ್ಟ್ರೀಯ ಧ್ವಜ ಸಂಹಿತೆ ನಿಯಮದಂತೆ ನವೆಂಬರ್ ಒಂದು ರಂದು ಎಲ್ಲಾ ಶಾಲಾ ಕಾಲೇಜು ಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 8ಗಂಟೆಗೆ ರಾಷ್ಟ್ರೀಯ ತ್ರಿವರ್ಣ ಧ್ವಜಾರೋಹಣ ನೆರವೆರಿಸಬೆಕು.ಪ್ಲಾಸ್ಟಿಕ್ ಬ್ಯಾನರ್ ಗಳನ್ನು ಬಳಸದೇ ಹತ್ತಿ ಬಟ್ಟೆ ಬ್ಯಾನರ್ ಬಳಸಿ ಕಲಾವಿದರಿಗೆ ಕನ್ನಡ ನಾಡು ನುಡಿಗೆ ಶ್ರಮಿಸಿದ ಮಹನೀಯರಿಗೆ ಹಾಗೂ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ನೀಡಿದ ಸಿಬ್ಬಂದಿ ಗುರುತಿಸಿ ತಾಲ್ಲೂಕು ಮಟ್ಟದ ನಾಗರಿಕ ಸೇವಾ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮಯ ಪಾಲನೆ ಶಿಸ್ತು ಅಳವಡಿಸಿಕೊಳ್ಳಬೇಕು.

       ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ನಾಗರಾಜಸ್ವಾಮಿ, ಲೋಕ ಶಿಕ್ಷಣ ಸಾಕ್ಷರತಾ ಸದಸ್ಯ ಹಾಗೂ ಸಮಾಜ ಸುಧಾರಕರು ಎ.ಅಬ್ದುಲ್ ನಬಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಎಸ್.ಉಷಾ,ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ ಭಜಂತ್ರಿ,ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಶಾಷು ಮೊದ್ದೀನ್ ಸಾಬ್, ಬಿಸಿಎಂ.ಅಧಿಕಾರಿ ಶಾಮಪ್ಪ,ಪರಿಶಿಷ್ಟ ಪಂಗಡ ಅಧಿಕಾರಿ ಹುಲಿಗೆಮ್ಮ,ಅಬಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಂಕರ್ ಜಿ, ಮತ್ತಿತರ ಅಧಿಕಾರಿಗಳಿದ್ದರು. ನವೆಂಬರ್ 1ರಿಂದ 7ರವರೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಹಾಗೂ ಅಕ್ಟೋಬರ್ 31ಹಾಗು? ನವೆಂಬರ್ 1ರಂದು ವಿಧ್ಯುತ್ ದಿಪಾಲಂಕಾರ ಮಾಡುವುದು ಕಡ್ಡಾಯ ಎಂದು ಸುಚಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link