ಎಂಟು ವರ್ಷಗಳ ಟಿಎಂಸಿ ಆಡಳಿತ ಮಹತ್ವದ್ದು : ಮಮತಾ ಬ್ಯಾನರ್ಜಿ

ಕೊಲ್ಕತ್ತಾ

      ತೃಣ ಮೂಲ ಕಾಂಗ್ರೆಸ್ ಸರ್ಕಾರ ಇಂದಿಗೆ ಎಂಟು ವರ್ಷ ಆಡಳಿತ ಪೂರ್ಣಗೊಳಿಸಿರುವುದು ಪಶ್ಚಿಮಬಂಗಾಳದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ.

      ತೃಣಮೂಲ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ಜನರ ಅಭಿವೃದ್ಧಿಗೆ ಶ್ರಮಿಸಿದೆ ವಿಶ್ವ ಬಂಗಾಳವ ನ್ನಾಗಿಸುವ ದೃಢ ಸಂಕಲ್ಪತೊಟ್ಟಿದೆ ಎಂದು ಹೇಳಿದ್ದಾರೆ. ಮೇ 20, 2011 ರಂದು ಮಾ, ಮಾಟಿ, ಮುನುಷ್ ಘೋಷಣೆಯ ತೃಣಮೂಲ ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತು. ಈ ಎಂಟು ವರ್ಷಗಳು ಅತ್ಯಂತ ಮಹತ್ವದ ವರ್ಷಗಳಾಗಿದ್ದು, ರಾಜ್ಯದ ಜನರ ಅಭಿವೃದ್ದಿಗೆ ಶ್ರಮಿಸಲಾಗಿದೆ. ಬಂಗಾಳವನ್ನು ವಿಶ್ವ ಬಂಗಾಳವನ್ನಾಗಿ ಪರಿವರ್ತಿಸಲು ಪಣ ತೊಟ್ಟಿದೆ ಎಂದು ಟ್ವೀಟï ನಲ್ಲಿ ಹೇಳಿದ್ದಾರೆ.ಇದಕ್ಕೂ ಮುನ್ನ ಭಾನುವಾರ, ಬಿಜೆಪಿ ಹಾಗೂ ಕೇಂದ್ರೀಯ ಪಡೆಗಳು ಬಂಗಾಳದ ಜನರಿಗೆ ಕಿರುಕುಳ ನೀಡುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು

     ಮತದಾನ ನಡೆಸಿದ ನಂತರ ಮಮತಾ ಬ್ಯಾನರ್ಜಿ, ಪಶ್ಚಿಮಬಂಗಾಳದಲ್ಲಿ ಬಿಜೆಪಿ ಹಾಗೂ ಕೇಂದ್ರೀಯ ಭದ್ರತಾ ಪಡೆಗಳು ಕಿರುಕುಳ ನೀಡುತ್ತಿವೆ. ಇಂತಹ ಕೃತ್ಯಗಳನ್ನು ನಾನೆಂದೂ ಕಂಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗೆ ಯಾವುದೇ ಮೌಲ್ಯವಿಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಮತಗಟ್ಟೆಗಳ ಸಮೀಕ್ಷೆ ಎಂಬ ಗಾಸಿಪ್‍ಗಳ ಮೇಲೆ ತಮಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.

      ಈ ಗಾಸಿಪ್ ಮೂಲಕ ಸಾವಿರಾರು ವಿದ್ಯುನ್ಮಾನ ಮತಯಂತ್ರಗಳ ಬದಲಾವಣೆ ಅಥವಾ ಅಕ್ರಮ ನಡೆಸುವ ಯೋಜನೆಯಿರಬಹುದು ಎಂದು ಹೇಳಿರುವ ಮಮತಾ ಬ್ಯಾನರ್ಜಿ,ವಿರೋಧ ಪಕ್ಷಗಳು ಒಗಟ್ಟಾಗಿರಬೇಕು, ಈ ಸಮರವನ್ನು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

       ರಾಷ್ಟ್ರೀಯ ಮಾಧ್ಯಮ ಎಂದು ತಪ್ಪಾಗಿ ಕರೆಸಿಕೊಳ್ಳುವ ದೆಹಲಿ ಮಾಧ್ಯಮಗಳು ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿವೆಯೇ ಎಂದು ಪ್ರಶ್ನಿಸಿ, ಸ್ವಯಂ ಘೋಷಿತ ಮತಗಟ್ಟೆ ಸಮೀಕ್ಷೆಗಳು ಕೇವಲ ಗೊಂದಲ ಸೃಷ್ಟಿಸುತ್ತಿವೆ ಎಂದು ತಿಳಿಸಿದ್ದಾರೆ.

        ಮತದಾರರು ನೀಡಿರುವ ತೀರ್ಪಿಗಾಗಿ ಕಾಯುತ್ತಿದ್ದೇವೆ. ಏಳನೇ ಹಂತದ ಮತದಾನ ಬಾಕಿ ಇರುವಾಗಲೇ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ನರೇಂದ್ರ ಮೋದಿ ಹೇಳಿದ್ದರು. ಈ ಸಂಖ್ಯೆಗಳು ಮತಗಟ್ಟೆ ಸಮೀಕ್ಷೆಯಲ್ಲಿ ಹೋಲಿಕೆಯಾಗುತ್ತಿದೆಯೇ? ಇವಿಎಂ ಅಕ್ರಮವೇ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link