ತಿಪಟೂರು :
ತಾಲ್ಲೂಕಿನಲ್ಲಿ ಇಂದು ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಿಬ್ಬನಹಳ್ಳಿ 93.37%, ಹೊನ್ನವಳ್ಳಿ 86.52%, ನೊಣವಿನಕೆರೆ 84.36, ತಿಪಟೂರು ನಗರದ 2 ಬೂತ್‍ಗಳಲ್ಲಿ 79.77% ಮತ್ತು 74.13% ಒಟ್ಟು 80.23% ಮತಚಲಾವಣೆಯಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಇಂದಲೇ ತಾಲ್ಲೂಕು ಕಛೇರಿಯ ಹತ್ತಿರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಪೆಂಡಾಲ್ ಹಾಕಿಕೊಂಡು ಮತಹಾಕಲು ಬರುವ ಅಭ್ಯರ್ಥಿಗಳಿಗೆ ಮತದಾರರ ಕ್ರಮ ಸಂಖ್ಯೆಯನ್ನು ಬರೆದುಕೊಟ್ಟು ಕಳುಹಿಸುತ್ತಿದ್ದು ಬೆಳಗ್ಗಿನಿಂದಲೇ ಮತದಾನ ಚರುಕು ಗೊಂಡಿತ್ತು.
ಒಂದು ಕೈಗೆ ಗ್ಲೌಸ್ ಹಾಕಿದರೆ ಸೋಂಕು ಹರಡಲ್ಲವೇ? :
ಇಂದು ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಂದು ಕೈಗೆ ಗ್ಲೌಸ್ ಕೊಟ್ಟಿದ್ದರಿಂದ ಮತಚಲಾಯಿಸಲು ಬಂದ ಪದವೀಧರ ಮತದಾರರು ನಮಗೇನು ಬುದ್ದಿ ಇಲ್ಲವೋ, ಇಲ್ಲ ಚುನಾವಣಾ ಆಯೋಗಕ್ಕೆ ಬುದ್ದಿ ಇಲ್ಲವೇ. ಗ್ಲೌಸ್ ಹಾಕಿದ ಒಂದೇ ಕೈನಲ್ಲೇ ಮತಹಾಕಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುತ್ತಿದ್ದರು. ಒಂದು ಕೈಗೆ ಗ್ಲೌಸ್ ಹಾಕಿಕೊಂಡು ಎರಡು ಕೈನಲ್ಲೂ ಮತಪತ್ರವನ್ನು ಹಿಡಿದು ಮಡಚಬೇಕು ಇದರಿಂದ ಕೊರೊನಾವನ್ನು ತಡೆಗಟ್ಟಲು ಸಾಧ್ಯವಿಲ್ಲ ಹೊರಗಡೆ ಎಷ್ಟೇ ಪರೀಕ್ಷೆ ಮಾಡಿದರು ಕೊರೊನಾ ಹರಡುತ್ತದೆ ಆದ್ದರಿಂದ ಎರಡೂ ಕೈಗೆ ಗ್ಲೌಸ್ ಕೊಡಬಹುದಿತ್ತಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು.
ಪ್ರಜ್ಞಾವಂತ ಪದವೀಧರ ಮತದಾರರು:
ನಮ್ಮನ್ನು ಯಾರು ಮತವನ್ನು ಕೇಳಲು ಬರಲಿಲ್ಲ, ಆದರೆ ನಾನು ಒಬ್ಬ ಪದವೀದರನಾಗಿದ್ದು ನನಗೆ ನನ್ನದೇ ಆದ ಜವಾಬ್ದಾರಿ ಇದ್ದು ಯಾರು ಮತಕೇಳದಿದ್ದರೂ ಪರವಾಗಿಲ್ಲ ಇದು ನನ್ನ ಕರ್ತವ್ಯ ಹೀಗಾದರೂ ದೇಶ ಕಟ್ಟೋಣ ಎಂಬ ಮನೋಭಾವನೆಯಿಂದ ಬಂದು ಮತಹಾಕುತ್ತಿದ್ದೇವೆ, ಇದರ ಬಗ್ಗೆ ನನಗೆ ಗರ್ವವಿದೆ ಎಂದು ಮಹೇಶ್ ತಿಳಿಸಿದರು.
ನಾನು ಒಬ್ಬ ಅತಿಥಿ ಉಪನ್ಯಾಸಕನಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದೇನೆ ಆದರೆ ಎಲ್ಲಾ ಅಭ್ಯರ್ಥಿಗಳು ಶಿಕ್ಷಕರೇ ಮತದಾರರು ಎಂದು ತಿಳಿದು ಮತ ಕೇಳುತ್ತಿದ್ದಾರೆಯೇ ವಿನಃ, ನಾವು ಪದವೀಧರರು, ನಮ್ಮಂತ ಎಷ್ಟೋ ನಿರುದ್ಯೋಗಿ ಪದವೀಧರರಿದ್ದಾರೆ, ಅವರ ಬಗ್ಗೆ ಯೋಚಿಸುವ ಒಬ್ಬ ಅಭ್ಯರ್ಥಿಯನ್ನು ಇದುವರೆಗೂ ನಾನು ನೋಡಿಲ್ಲ, ಈಗಿನ ಅಭ್ಯರ್ಥಿಗಳು ಸಹ ಇದೇ ದಾರಿಯಲ್ಲಿ ಸಾಗಿದ್ದು ಶಿಕ್ಷಕರಿಗೆ-ಉಪನ್ಯಾಸಕರಿಗೆ ಹಲವಾರು ಆಮೀಷಗಳನ್ನು ಒಡ್ಡಿ ಹಲವಾರು ಉಡುಗೊರೆ, ಹಣವನ್ನು ಹಂಚಿದ್ದು ಸಂತೋಷ ಕೂಟಗಳನ್ನು ಏರ್ಪಡಿಸಿದ್ದಾರೆ ಮತ್ತು ನಾನು ಗೆದ್ದಮೇಲೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎನ್ನುತ್ತಿದ್ದಾರೆಯೇ ಹೊರತು ಒಬ್ಬನೇ ಒಬ್ಬ ಪದವೀಧರ ನಿರುದ್ಯೋಗಿಯನ್ನು ನಿಮ್ಮ ಸಮಸ್ಯೆ ಏನು ಎಂದು ಸೌಜನ್ಯಕ್ಕಾದರು ಪ್ರಶ್ನಿಸಿಲ್ಲವೆಂದು ಅತಿಥಿ ಉಪನ್ಯಾಸಕ ನೊಂದು ನುಡಿಯುತ್ತಾನೆ.
ಈ ಬಾರಿಯಾದರು ಪದವೀದರರ ಸಮಸ್ಯೆಗಳು ಬಗೆಹರಿಯುತ್ತವೆಯೇ? :
ಈ ಬಾರಿ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜ್ಞಾವಂತ ಮತದಾರರು ಬಂದು ಮತ ಚಲಾಯಿಸಿ ಅಭ್ಯರ್ಥಿಗಳ ಭವಿಷ್ಯವನ್ನು ಮತ ಪೆಟ್ಟಿಗೆಯಲ್ಲಿ ಭ್ರಪಡಿಸಿದ್ದಾರೆ. ಆದರೆ ಈ ಬಾರಿಗೆಲ್ಲುವಅಭ್ಯರ್ಥಿಯು ಶಿಕ್ಷಕರ ಬಾಲವನ್ನು ಹಿಡಿಯುತ್ತಾರೋ ಇಲ್ಲ ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಇನ್ನು 6 ವರ್ಷ ನಾನು ವಿದಾನಪರಿಷತ್ ಸದಸ್ಯನಾಗಿದ್ದೇನೆ ನನಗೂ ಮತದಾರರಿಗೂ ಸಂಬಂದವಿಲ್ಲ ಮತ್ತೆ ಚುನಾವಣೆ ಬಂದಾಗ ನೋಡೋಣ ಎಂದು ಸುಮ್ಮನಾಗುತ್ತಾರೋ ಇಲ್ಲಾ ನನಗೆ ಮತವನ್ನು ನೀಡಿ ಗೆಲ್ಲಿಸಿದ ಮತದಾರರಿಗೆ ಕಿಂಚಿತ್ತಾದರೂ ಕೆಲಸ ಮಾಡೋಣ ಎಂಬಂತೆ ಬಂದು ಕೆಲಸಮಾಡುತ್ತಾರೋಕಾಯ್ದು ನೋಡಬೇಕಾದ ಪರಿಸ್ಥಿತಿಯಲ್ಲಿ ಮತದಾರ ಪ್ರಭುಗಳು ಕಾಯ್ದುನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ