ಕೊಟ್ಟೂರು
ಈ ದೇಶಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಪ್ರತ್ರಿಯೊಬ್ಬರು ಅವರ ಹಾದಿಯಲ್ಲಿ ಸಾಗಬೇಕೆಂದು ಜಿಲ್ಲಾ ಸಂಘಟನಾ ಸಂಚಾಲಕ ಟಿ.ಕೊಟ್ರೇಶ್ ಹೇಳಿದರು.
ಭಾನುವಾರ ಪಟ್ಟಣದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಲಯದಲ್ಲಿ ತಾಲೂಕು ಘಟಕÀ ಹಮ್ಮಿಕೊಂಡಿದ್ದ ಡಾ. ಬಿ,ಆರ್. ಅಂಬೇಡ್ಕರ್ 128 ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್‍ರವರ 111 ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದ ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾವಂತರಾಗುವ ಮೂಲಕ ಡಾ. ಅಂಬೇಡ್ಕರರವರ ಆದರ್ಶ, ತತ್ವಗಳನ್ನು ತಮ್ಮ ಬದುಕಿನಲ್ಲಿ ಪಾಲಿಸಿಕೊಂಡಾಗ ಮಾತ್ರ ಅಂಬೇಡ್ಕರರ ದೂರದೃಷ್ಟಿ ಯಶಸ್ವಿಯಾಗುತ್ತದೆ ಎಂದರು.
ಪ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಗ್ಗಳ್ಳಿ ಕೊಟ್ರೇಶ, ಬಣಕಾರ್ ಹುಲಿಗಪ್ಪ, ಹೆಚ್.ಗಾಳೆಪ್ಪ, ತಾಲೂಕು ಸಂಚಾಲಕ ಹನುಮಂತಪ್ಪ, ಬಿ.ಕೊಮಾರಪ್ಪ, ಪ.ಪಂ. ಸದಸ್ಯ ಜಗದೀಶ, ಬೇವೂರ್ ಕೊಟ್ರೇಶ, ಎಂ. ಪರಶುರಾಮ್, ಕೆ ಭರಮಪ್ಪ, ಜಿ. ಕೊಟ್ರೇಶ, ಬಿ.ಪರಶುರಾಮ್. ಮರಿಸ್ವಾಮಿ, ನಿದ್ದಿ ಪರುಸಪ್ಪ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
