ತಿಪಟೂರು
ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರಿ ಕರಿಯಮ್ಮ ದೇವಿ ಜಾತ್ರೆಯು ಸಂಪ್ರದಾಯದಂತೆ ನಡೆದು ಮದುವಣಗಿತ್ತಿ ಶಾಸ್ತ್ರ, ಕಂಕಣ ಧಾರಣೆ, ಧ್ವಜಾರೋಹಣ ನಂತರ ಹಾಲ್ಕುರಿಕೆ ಗ್ರಾಮ ದೇವತೆ ಕೆಂಪಮ್ಮದೇವಿ ಶ್ರೀ ಪ್ಲೇಗಿನಮ್ಮ ದೇವಿ ಚೌಳಕಟ್ಟೆ ಚಿತ್ರಲಿಂಗೇಶ್ವರ ಸ್ವಾಮಿ, ತಮ್ಮಡಿಹಳ್ಳಿ ಶ್ರೀ ದುರ್ಗಮ್ಮದೇವಿ ದೇವರುಗಳ ನೇತೃತ್ವದಲ್ಲಿ ಅಮಾನಿಕೆರೆಗೆ ತೆರಳಿ ಕಳಶ ಸ್ಥಾಪನೆಯೊಂದಿಗೆ ನಡೆಮುಡಿಯೊಂದಿಗೆ ಕರೆತರಲಾಯಿತು.
ನಂತರ ಹೊಳೆಮರಿ ಅರ್ಪಿಸಿ ಅಮ್ಮನವರಿಗೆ ಮಣೇವು, ಸೇವೆ ಮಾಡಲಾಯಿತು. ಮರುದಿನ ಅಮ್ಮನವರಿಗೆ ಆರತಿ ಭಾನ, ಗ್ರಾಮದ ಮುತ್ತೈದೆಯರು ತಂಬಿಟ್ಟಿನಿಂದ ಮಾಡಿದ ಆರತಿಯನ್ನು ಮಡೆಯೊಂದಿಗೆ ತಂದು ದೇವರಿಗೆ ಅರ್ಪಿಸಿದರು. ಊರಿನ ಪ್ರಮುಖ ಬೀದಿಗಳಲ್ಲಿ ಸಾಂಸ್ಕತಿಕ, ಕಲಾತಂಡಗಳೊಂದಿಗೆ ಉತ್ಸವ ಏರ್ಪಡಿಸಲಾಗಿತ್ತು.