ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಸಾತೇನಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತ್ತು. ಮುಂಜಾನೆಯಿಂದಲೇ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.101 ಎಡೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಂತರ ಸುತ್ತಮುತ್ತಲಿನ ಗ್ರಾಮಸ್ಥರು ಶನಿವಾರ ರಾತ್ರಿ ಸ್ವಾಮಿಯ ಉತ್ಸವದೊಂದಿಗೆ ಆರತಿ ಉತ್ಸವ ನಡೆಯಿತ್ತು. ಭಾನುವಾರ ಬೆಳಿಗ್ಗೆ 101 ಎಡೆಯನ್ನು ಪೂಜಿಸಲಾಗಿತ್ತು. ಭಕ್ತಾಧಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು. ಜಿಲ್ಲೆಯ ಸಾವಿರಾರು ಭಕ್ತರು. ಸ್ವಾಮಿಯವರ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್ , ರಾಜಮ್ಮ ರಂಗರಾಜು ಮುಖಂಡರಾದ ರಾಜಣ್ಣ , ಚಿಕ್ಕರಂಗಯ್ಯ , ರಂಗಯ್ಯ , ಪ್ರಧಾನ ಅರ್ಚಕ ರಾಜಣ್ಣ , ಗಂಗಾಧರಯ್ಯ ಭಾಗವಹಿಸಿದ್ದರು.