ಹಂಪಿ ಉತ್ಸವ ಸಕಲ ಸಿದ್ಧತೆ : ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು : ಡಿಸಿ ನಕುಲ್

ಹೊಸಪೇಟೆ

       ಜ. 11, 12 ರಂದು ನಡೆಯಲಿರುವ ಹಂಪಿ ಉತ್ಸವ ಜನರ ಉತ್ಸವವನ್ನಾಗಿ ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದರು.ಹೊಸಪೇಟೆ ಸಮೀಪದ ಕಮಲಾಪುರದ ಮಯೂರ ಭುವನೇಶ್ವರಿ ಹೋಟಲ್ ಸಭಾಂಗಣದಲ್ಲಿ ಮಂಗಳವಾರ ಹಂಪಿ ಉತ್ಸವದ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧ ರೀತಿಯ ಜವಾಬ್ದಾರಿಗಳನ್ನು ವಹಿಸಲಾದ ಸಮಿತಿಗಳ ಅಧ್ಯಕ್ಷರ ಸಭೆಯನ್ನು ಕರೆದು ಅಗತ್ಯ ಸೂಚನೆ ನೀಡಲಾಗುವುದು.

       ಅವರು ಸಹ 10ದಿನದೊಳಗೆ ತಮ್ಮ ಅಂದಾಜು ವೆಚ್ಚದ ವಿವರ, ಕಾರ್ಯಕ್ರಮಗಳ ವಿವರ, ಹೊಸದಾಗಿ ಪ್ರಸ್ತಾಪಿಸಬೇಕಾದ ಕಾರ್ಯಕ್ರಮ ಸೇರಿದಂತೆ ಸಂಪೂರ್ಣ ವಿವರವಾದ ವರದಿಯನ್ನು ಸಮಿತಿ ಸಭೆ ನಡೆಸಿ ನೀಡಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

        ಈ ಬಾರಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಈ ಬಾರಿಯೂ ವಿಜಯನಗರ ವೈಭವ ಪ್ರತಿಬಿಂಬಿಸುವ ವಸಂತ ವೈಭವ, ತುಂಗಾ ಆರತಿ, ಹಂಪಿ ಬೈ ನೈಟ್, ಹಂಪಿ ಬೈ ಸ್ಕೈ ಆಯೋಜಿಸಲಾಗುತ್ತಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ಅಗತ್ಯ ವಿವರ ಒದಗಿಸುವಂತೆ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.

      ಈ ಉತ್ಸವದಲ್ಲಿ ಶ್ವಾನ ಪ್ರದರ್ಶನ, ಕುಸ್ತಿ ಸ್ಪರ್ಧೆ, ಮೆಹಂದಿ,ರAಗೋಲಿ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ, ದೇಸಿ ಆಹಾರ, ಫಲಪುಷ್ಪ ಪ್ರದರ್ಶನ, ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಫೋಟೊ ಸ್ಪರ್ಧೆ, ಮಹಿಳಾ ಸಂಬAಧಿತ ,ರೈತರ ಸಂಬAಧಿತ ವಿವಿಧ ಕಾರ್ಯಕ್ರಮಗಳಿರಲಿವೆ ಎಂದು ಅವರು ವಿವರಿಸಿದರು.

     ಈ ಬಾರಿ ಉತ್ಸವದ ವಿಶೇಷ ಕಾರ್ ರ್ಯಾಲಿ ಎಂದು ಹೇಳಿದ ಡಿಸಿ ನಕುಲ್ ಅವರು ಹಳೆಯ ಕಾರುಗಳ ಬೃಹತ್ ರ್ಯಾಲಿ ಹೊಸಪೇಟೆಯಿಂದ ಹಂಪಿಯವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಇದನ್ನು ಸಂಘಟಿಸಲಾಗುತ್ತಿದೆ ಎಂದರು. ವೇದಿಕೆ ನಿರ್ಮಾಣ, ಆಮಂತ್ರಣ ಪತ್ರಿಕೆ,ಕರಪತ್ರ,ಪಾಸ್ ಸೇರಿದಂತೆ ಎಲ್ಲವುಗಳಿಗೆ ಕೂಡಲೇ ಟೆಂಡರ್ ಕರೆಯುವಂತೆ ಡಿಸಿ ನಕುಲ್ ಅವರು ನಿರ್ದೇಶನ ನೀಡಿದರು. ಸಿಸಿಟಿವಿಗಳನ್ನು ತಾತ್ಕಾಲಿಕವಾಗಿ ಹಾಕಲಾಗುತ್ತಿದೆ.

     ಪಾರ್ಕಿಂಗ್, ಮಳಿಗೆಗಳು ಕುರಿತು ಚರ್ಚಿಸಿದ ಡಿಸಿ ನಕುಲ್ ಅವರು ಹೊಸದಾಗಿ ಮತ್ತು ಅತ್ಯಂತ ವಿಭಿನ್ನವಾದ ಹಾಗೂ ಜನರು ಆಕರ್ಷಿಸುವಂತ ಕಾರ್ಯಕ್ರಮಗಳಿದ್ದರೇ ಮಾಹಿತಿ ನೀಡಿ; ಅವುಗಳನ್ನು ಉತ್ಸವದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಸಿದ್ದತೆಗಳು ತಾವು ಆರಂಭಿಸಿ; ಡಿಸೆಂಬರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap