ಸಮುದಾಯಗಳು ಶಿಕ್ಷಣ, ಆರ್ಥಿಕತೆಗೆ ಒತ್ತು ನೀಡಬೇಕು : ಈಶ್ವರಪ್ಪ

ಹೂವಿನಹಡಗಲಿ

      ಸಮುದಾಯಗಳು ಆರ್ಥಿಕತೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ರಾಜಕೀಯ, ಧಾರ್ಮಿಕ ಗುಲಾಮಗಿರಿ ದಾಸ್ಯತ್ವದಿಂದ ಹೊರಬರಲು ಸಾಧ್ಯವಿಲ್ಲ. ಆದ ಕಾರಣ ಆ ಕ್ಷೇತ್ರಗಳತ್ತ ಒತ್ತು ನೀಡಬೇಕು ಎಂದು ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

      ಹೂವಿನಹಡಗಲಿಯಲ್ಲಿ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಯಾವುದೇ ವ್ಯಕ್ತಿ ಒಂದು ಜಾತಿಗೆ,ಸಮುದಾಯಕ್ಕೆ ಸೀಮಿತವಾಗುವುದಿಲ್ಲ. ಜಾತಿಗೆ ಅಂಟಿಕೊಂಡ ವ್ಯಕ್ತಿ ಎಂದಿಗೂ ರಾಷ್ಟ್ರೀವಾದಿಯಾಗುವುದಿಲ್ಲ ಎಂದು ಹೇಳಿದರು.

       ಸಂಸ್ಕೃತಿ ಮತ್ತು ಆರ್ಥಿಕತೆ ವಿಷಯದಲ್ಲಿ ದೇಶ ಮೊದಲ ಸ್ಥಾನದಲ್ಲಿದೆ. ಕನಕದಾಸರು ಸೇರಿದಂತೆ ನಾಡಿನ ನಾನಾ ದಾರ್ಶನಿಕರು, ಶರಣರ ವಿಚಾರ ಧಾರೆಗಳು ಇಂದು ಪ್ರಸ್ತುತವಾಗುತ್ತಿವೆ ಎಂದು ಅವರು ಹೇಳಿದರು.ಜಾತಿ ವ್ಯವಸ್ಥೆಯ ಮೂಲಕ ಕೆಲ ಸಂಕುಚಿತ ವ್ಯಕ್ತಿಗಳು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಾಯಿ ಮಗನ ಸಂಬಂಧದೊಂದಿಗೆ ಸಮಾಜದ ಬೇರುಗಳನ್ನು ಗಟ್ಟಿಗೊಳಿಸಿದ್ದಾರೆ ಎಂದರು.

      ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಕಲಬುರಗಿ ವಿಭಾಗದ ತಿಂಥಿಣಿ ಬ್ರಿಡ್ಜ್ ಶಾಖಾಮಠದ ಸಿದ್ಧರಮಾನಂದ ಸ್ವಾಮೀಜಿ, ಟ್ರಸ್ಟ್, ಸಂಘ, ಸಂಸ್ಥೆಗಳು ಒಟ್ಟಾಗಿ ಕರ್ತವ್ಯ ನಿರ್ವಹಿಸಿದರೆ ಅಭಿವದ್ದಿ ಸಾಧ್ಯ. ಕೆಲ ರಾಜಕಾರಣಿಗಳು ಸಹಕಾರ ಕ್ಷೇತ್ರವನ್ನೇ ತಮ್ಮ ರಾಜಕೀಯ ಬುನಾದಿಯನ್ನಾಗಿಸಿಕೊಂಡಿದ್ದಾರೆ. ಶಿಕ್ಷಣ ಮತ್ತು ಆರ್ಥಿಕ ಕೊರತೆಯಿಂದ ಹಿಂದುಳಿದ ಸಮುದಾಯ ಗುಲಾಮಗಿರಿಯನ್ನು ಅನುಭವಿಸುತ್ತವೆ ಎಂದರು.

      ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಸಹಕಾರ ಸಂಘ ೩ಕೋಟಿ ರೂ. ವಹಿವಾಟು ನಡೆಸಿ ೧.೫ಕೋಟಿ ರೂ. ಲಾಭ ಗಳಿಸಿರುವುದು ಬ್ಯಾಂಕ್‌ನ ಆಡಳಿತ ಮಂಡಳಿ ಮತ್ತು ಸಮಾಜದ ಶ್ಲಾಘನೆ ಎಂದರು.

      ಸಂಸದ ದೇವೇಂದ್ರಪ್ಪ ಮಾತನಾಡಿದರು. ಸಹಕಾರ ಸಂಘದ ಅಧ್ಯಕ್ಷ ಗಾಣದ ಶಿವಮೂರ್ತೆಪ್ಪ ಅಧ್ಯಕ್ಷತೆ ವಹಿಸಿದ್ದರು. ಗುರುವಿನ ಕೊಟ್ರಯ್ಯ, ಕೆ.ಎಂ.ಹಾಲಪ್ಪ, ಎಂ.ಪರಮೇಶ್ವರಪ್ಪ, ಮಾಜಿ ಶಾಸಕ ನೇಮಿರಾಜ ನಾಯ್ಕ, ಜಿ.ಪಂ. ಸದಸ್ಯೆ ವೀಣಾಪರಮೇಶ್ವರಪ್ಪ, ತಾ.ಪಂ. ಸದಸ್ಯ ಈಟಿ ಲಿಂಗರಾಜ, ಬಿ.ಹನುಮಂತಪ್ಪ, ಹೊಸ್ಕೇರಿ ಬೀರಪ್ಪ, ತಾ.ಪಂ. ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ, ಜಿ.ಕಷ್ಣ, ಎಂ.ಬಿ.ಬಸವರಾಜ, ಎಚ್.ಪೂಜಪ್ಪ ಹಾಗೂ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link