ನಾಳೆ ಛಲವಾದಿ ಜಾಗೃತಿ ಸಮಾವೇಶ

ಹೊಸಪೇಟೆ :

         ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಇದೇ ಜ.20ರ ಭಾನುವಾರದಂದು ಛಲವಾದಿ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಚಾಲಕ ಸಿ.ಸೋಮಶೇಖರ ಹೇಳಿದರು.

         ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕು ಸುಮಾರು ವರ್ಷಗಳ ನಂತರ ಉಪ ಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವರಾಗಿ ಯುವಕರ ಕಣ್ಮಣಿ ಪ್ರಿಯಾಂಕ ಖರ್ಗೆಯವರು ಆಯ್ಕೆಯಾಗಿದ್ದಾರೆ. ಈ ಇಬ್ಬರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು.

           ಸಮಾಜದ ವತಿಯಿಂದ 2018ರ ಚುನಾವಣೆಯಲ್ಲಿ 14 ಜನ ಶಾಸಕರಾಗಿದ್ದಾರೆ. ಎಲ್ಲರನ್ನೂ ಸತ್ಕರಿಸಲಾಗುವುದು. ಡಿಸಿಎಂ ಡಾ.ಜಿ.ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸಿದ್ದಿಪ್ರಿಯ ಕಲ್ಯಾಣ ಮಂಟಪದ ವರೆಗೆ ಅಲಂಕರಿಸಿ ಬೆಳ್ಳಿರಥದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವೈಧ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ, ಮುಜರಾಯಿ ಹಾಗು ಕೌಶಲ್ಯಾಭಿವೃದ್ದಿ ಸಚಿವ ಪಿ.ಟಿ.ಪರಮೇಶನಾಯ್ಕ್ ಭಾಗವಹಿಸುವರು.

          ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅದಕ್ಕೆ ಎಲ್ಲಾ ರೀತಿಯ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಮಾಜದ ಸಂಘಟನೆ, ಬೌದ್ದ ವಿಹಾರ ನಿರ್ಮಾಣ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.ಸಂಚಾಲಕ ಸಿ.ಡಿ.ಈರಣ್ಣ, ಮುಖಂಡರಾದ ಮಾರುತಿ ಕಾಂಬ್ಳೆ, ಸಿ.ಶಿವಮೂರ್ತಿ, ಎಚ್.ಸಿ.ರವಿ, ರಾಮಚಂದ್ರ, ಈಶ್ವರ್ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link