ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ

ಕೂಡ್ಲಿಗಿ:

         ಎಲ್ಲ ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಮತಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದು ಬಾಗಲಕೋಟೆಯ ಮುತ್ತಣ್ಣ ಬೆನ್ನೂರು ಆರೋಪಿಸಿದರು. ನ್ಯಾಯಮೂರ್ತಿ ಎ.ಜಿ. ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಡೆದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಸ್ಪಂದಿಸಿದ ತಾಲ್ಲೂಕಿನ ಮಾದಿಗ ಸಮುದಾಯದ ಬಂಧುಗಳಿಗೆ ‘ಮಾದಿಗರ ಮಹಾಯುದ್ಧ’ ಎಂಬ ಘೋಷಣೆಯೊಂದಿಗೆ ರಾಜ್ಯ ಮಾದಿಗ ಸಂಘಟನೆಗಳ ಮಹಾ ಸಭಾದಿಂದ ಪಟ್ಟಣದ ಸಮುದಾಯ ಭವನದಲ್ಲಿ ಏರ್ಪಡಿಸಲಾದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

           ಶತ ಶತಮಾನಗಳಿಂದ ತುಳಿತಕ್ಕೊಳಗಾದ ಮಾದಿಗ ಸಮುದಾಯಕ್ಕೆ ಕೆಲವೇ ಕೆಲವು ಸೌಕರ್ಯಗಳನ್ನು ಹೊರತು ಪಡಿಸಿದರೆ, ಇಡೀ ಸಮುದಾಯ ಅಭಿವೃದ್ಧಿಗೊಳ್ಳುವಂತಹ ಯಾವುದೇ ಶಾಶ್ವತ ಯೋಜನೆಗಳನ್ನು ಸರ್ಕಾರಗಳು ರೂಪಿಸಿಲ್ಲಇದಕ್ಕೆ ಸದಾಶಿವ ಆಯೋಗದ ವರದಿಯನ್ನು ಅನುಷ್ಟಾನಗೊಳಿಸುವುದೊಂದೇ ಪರಿಹಾರ ಎಂದು ಹೇಳಿದರು.

           ರಾಯಚೂರಿನ ಅಂಬಣ್ಣ ಆರೋಲಿಕರ್ ಮಾತನಾಡಿದರು. ಹಂಪಿ ಮಾತಂಗ ಮಹಾಮುನಿ ಪೂಜ್ಯ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ನಾಗರತ್ನಮ್ಮ ಉದ್ಘಾಟಿಸಿದರು. ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

          ಡಾ.ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಪಿ.ಸಂತೋಷ್, ಡಿಎಸ್‍ಎಸ್‍ನ ಸಂಚಾಲಕ ಡಿ.ಎಚ್.ದುರುಗೇಶ್, ಕರ್ನಾಟಕ ಮಾದಿಗ ದಂಡೋರ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಸಾಲುಮನಿ, ಮಾಜಿ ಸೈನಿಕ ಎಚ್.ರಮೇಶ್, ಬೆಂಗಳೂರು ಆದಿಜಾಂಬವ ವೇದಿಕೆಯ ಎಂ. ನಾಗರಾಜ, ಹೊಸಪೇಟೆ ನಗರಸಭೆ ಸದಸ್ಯ ಎ. ಬಸವರಾಜ, ಸಮಾನತೆ ಯೂನಿಯನ್ ಕರ್ನಾಟಕ ರಾಜ್ಯ ಸಂಚಾಲಕ ರಾಮಚಂದ್ರ, ಕುಷ್ಟಗಿಯ ಮುರಳಿ, ಗಂಗಾವತಿ ಹನುಮೇಶ್, ಕೊಪ್ಪಳದ ನಾಗಲಿಂಗ, ಹೊಸಪೇಟೆ ವಿಜಯಕುಮಾರ್ ಇದ್ದರು.

           ಇದೇ ಸಂದರ್ಭದಲ್ಲಿ ತಾಲೂಕಿನ ನಾನಾ ಗ್ರಾಮ ಪಂಚಾಯ್ತಿ ಸದಸ್ಯರು, ನಿವೃತ್ತ ನೌಕರರು ಹಾಗೂ ಸಮಾಜದ ಹಿರಿಯರನ್ನು ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ದೃಢ ನಿರ್ಧಾರ ಕೈಗೊಳ್ಳಲಾಗುವುದು. ಈ ಬಗ್ಗೆ ಕಲಬುರ್ಗಿಯಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಳ್ಳಲು ಮಹಾಸಭಾದಿಂದ ನಿರ್ಣಯಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link