ಶಿರಾ ನಿವೃತ್ತ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜನ್ಮ ಜಯಂತಿ

ಶಿರಾ:

       ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಠಿಯಲ್ಲಿ ದಲಿತೋದ್ದಾರ ಕಲ್ಪನೆ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾದ ಎಲ್ಲರನ್ನೂ ಮೇಲೆತ್ತಲು ಹೋರಾಡಿದವರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೋ. ಕಟಾವೀರನಹಳ್ಳಿ ಹೆಚ್.ಹನುಮಂತರಾಯಪ್ಪ ತಿಳಿಸಿದರು.

        ಅವರು ನಗರದ ನಿವೃತ್ತ ನೌಕರರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಮೊದಲೇ ಭಾರತದ ಮಹಿಳೆಗೆ ಕಾನೂನು ಬದ್ಧ ಸಮಾನತೆ ಬೇಕು. ಮಹಿಳೆಯರಿಗೆ ಆಡಳಿತದಲ್ಲಿ ಮೀಸಲಾತಿ ಇರಬೇಕು. ಶೈಕ್ಷಣಿಕವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮಹಿಳೆಯರನ್ನು ಅಭಿವೃದ್ದಿಪಡಿಸಬೇಕು. ಹೆಣ್ಣಿಗೂ ಗಂಡಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಹಲವಾರು ಯೋಜನೆಗಳ ಜಾರಿಗೆ ಶ್ರಮಿಸಿದರು. ಇದು ಅವರ ದೂರದೃಷ್ಟಿಯ ಅವಲೋಕನವಾಗಿದೆ ಎಂದರು.

        ನಿವೃತ್ತ ಮುಖ್ಯ ಶಿಕ್ಷಕ ಕೆ.ನರಸಿಂಹಯ್ಯ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಎಲ್ಲಾ ಗ್ರಂಥಗಳಿಗಿಂತ ಶ್ರೇಷ್ಠ ಗ್ರಂಥವಾಗಿದೆ. ಭಾರತಕ್ಕಷ್ಟೆ ಅಲ್ಲ ಇದು ಜಗತ್ತಿಗೆ ಮಾದರಿ ಸಂವಿಧಾನವಾಗಿದೆ. ಇವರ ಪರಿಶ್ರಮ ಮರೆಯಲಾರದಂತಹುವುದು ಎಂದು ತಿಳಿಸಿ ಸಂವಿಧಾನದ

      ಮೂಲಭೂತ ಹಕ್ಕುಗಳಲ್ಲಿ ಜಾತಿ, ಧರ್ಮ, ಸ್ತೀ-ಪುರುಷ ಎಂಬ ಯಾವುದೇ ಬೇದಭಾವವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಇಂದು ನಾವೆಲ್ಲರೂ ಸಮಾನತೆಯಿಂದ ಇರಬೇಕಾದರೆ ಅವರ ಸಂವಿಧಾನವೇ ಕಾರಣವಾಗಿದೆ ಎಂದ ಅವರು ಗಾಂಧಿಜಿಯವರು ಅಹಿಂಸಾ ಮಾರ್ಗದಿಂದ ಸ್ವತಂತ್ರಕ್ಕಾಗಿ ಹೋರಾಡಿದರೆ, ಅಂಬೇಡ್ಕರ್ ಅವರು ಸ್ವಾತಂತ್ರ್ಯದ ಜೊತೆಗೆ ಸಮಾನತೆಗಾಗಿ ಹೋರಾಟ ಮಾಡಿದರು. ಗಾಂಧಿಜಿಯವರು ದಂಡಿಯಾತ್ರೆ ಮಾಡಿದರೆ, ಅಂಬೇಡ್ಕರ್ ಅವರು ಅಸ್ಪøಶ್ಯತಾ ನಿವಾರಣೆಗಾಗಿ ಜಲಯಾತ್ರೆ ಹೋರಾಡಿ, ದೇವಸ್ಥಾನಗಳ ಪ್ರವೇಶಕ್ಕೆ ಹೋರಾಟ ಮಾಡಿದರು ಎಂದರು.

      ನಿವೃತ್ತ ಪ್ರಾಂಶುಪಾಲ ಡಿ.ಎಸ್.ಕೃಷ್ಣಮೂರ್ತಿ ಅವರು ಮಾತನಾಡಿ ಮಹಾ ಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು ಇಂದಿಗೂ ಪ್ರಸ್ತುತ. ಬಡತನದಲ್ಲಿ ಹುಟ್ಟಿ ಕಷ್ಟ ನಷ್ಟಗಳನ್ನು ಅನುಭವಿಸಿ ಬೆಳೆದ ಅವರಿಗೆ ಈ ದೇಶದ ಜನತೆಯನ್ನು ಬಡತನ ಮುಕ್ತರನ್ನಾಗಿ ಮಾಡಬೇಕೆಂಬುದೇ ಮುಖ್ಯ ಧ್ಯೇಯವಾಗಿತ್ತು. ಅದಕ್ಕಾಗಿ ಶ್ರಮಿಸಿದರು ಎಂದರು.ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬರಗೂರು ವಿರೂಪಾಕ್ಷ, ದೇವರಾಜು, ನಿವೃತ್ತ ನೌಕರರಾದ ಹೆಚ್.ವಿಧಿಯಪ್ಪ, ಕೆ.ಲಿಂಗಪ್ಪ, ಎಲ್.ರಂಗಯ್ಯ ಇವರನ್ನು ಸನ್ಮಾನಿಸಲಾಯಿತು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ ವಹಿಸಿದ್ದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಕರೇಜವನಹಳ್ಳಿ ಲಿಂಗಪ್ಪ, ನಿವೃತ್ತ ಶಿಕ್ಷಕ ಹೆಚ್.ಜಯರಾಮಯ್ಯ, ಹೆಚ್.ಎನ್.ಮಹದೇವಪ್ಪ, ನಿವೃತ್ತ ನೌಕರರುಗಳಾದ ನಾನ್ಯಾನಾಯಕ್, ಕೆಂಚಪ್ಪ ಸ್ವಾಮಿ, ಸಿದ್ದಗಂಗಮ್ಮ, ನಾಗರಾಜಪ್ಪ, ಮರುಡಪ್ಪ, ಲಕ್ಷ್ಮೀನರಸಿಂಹಯ್ಯ, ಎನ್.ಕೃಷ್ಣಪ್ಪ, ಸಣ್ಣಲಿಂಗಪ್ಪ, ಸತ್ತಾರ್ ಸಾಬ್, ಪಾತಲಿಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link