ರಟ್ಟೀಹಳ್ಳಿ :
ಪಟ್ಟಣದ ಮಹಾಲಕ್ಷ್ಮಿ ವೃತ್ತದಲ್ಲಿ ಅನಾ ವಶ್ಯಕವಾಗಿ ಓಡಾಡುತ್ತಿದಾಗ ಪ್ರಶ್ನಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ , ಹಲ್ಲೆ ಮಾಡಲು ಯತ್ನಿಸಿ , ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಪಿ.ಎಸ್. ಐ. ಗೆ ಅವಾಜ್ ಹಾಕಿ ಪೊಲೀಸರ ಅತಿಥಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಜಬಿವುಲ್ಲಾ ಖಾಜಿ 31 ವರ್ಷ ಅಲಿಯಾಸ್ ( ಕೊಕ್ ಜಬಿ ) ಎಂಬಾತನೇ ಹಲ್ಲೆಗೆ ಎತ್ನಿಸಿದ ಅವಾಜ್ ಹಾಕಿದ ವ್ಯಕ್ತಿ. ಈ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪಿ. ಎಸ್. ಐ ಯು. ಜೆ. ಶಶಿಧರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
