ಹಾವೇರಿ
ಬೋಲಗಾರ್ಡ ಕಂಪನಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹತ್ತಿ ಗಿರಣಿ ಮಾಲೀಕರಿಗೆ ಗುಲಾಬಿ ಕಾಯಿ ಕೊರಕ ಕೀಟದ ಬಗ್ಗೆ ತರಬೇತಿ ಕಾರ್ಯಕ್ರಮ ಬುಧವಾರ ನಗರದ ಎ.ಪಿ.ಎಂ.ಸಿ ಆವರಣದಲ್ಲಿರುವ ವರ್ತಕರ ಭವನದಲ್ಲಿ ಜರುಗಿತು.
ಸಹಾಯಕ ಕೃಷಿ ನಿರ್ದೇಶ ಕರಿಯಲ್ಲಪ್ಪ ಡಿ ಕೊರಚರ ಅವರು ಗುಲಾಬಿ ಕೀಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಬೋಲಗಾರ್ಡ ಕಂಪನಿಯ ಅಧಿಕಾರಿ ಶಂಬಣ್ಣ ಹಾದಿಮನಿ ಮಾತನಾಡಿ, ಕೀಟದ ಜೀವನ ಚರಿತ್ರೆ, ಜಮೀನಿನ ನಿರ್ಮಲಿಕರಣ, ಜಿನ್ನಿಂಗಗಳ ನಿರ್ಮಲಿಕರಣ ಹತ್ತಿ ಬಿತ್ತುವಾಗ ನಾನ ಬಿ.ಟಿ (ರೇಡಿಂಗ್) ಆಳವಡಿಸುವುದು. ಹೊಲಗಳಲ್ಲಿ ಮೊಹಕ ಬಲೆ ಹಾಕುವುದು, ಜಿನ್ನಿಂಗಗಳಲ್ಲಿ ಮೊಹಕ ಬಲೆ ಹಾಕುವುದು, ಅದರಲ್ಲಿ ಬಿದ್ದ ಗಂಡು ಪಂತಗಳಿಂದ ಹುಳದ ಅಭಿವೃದ್ಧಿ ಕಡಿಮೆ ಆಗುತ್ತದೆ ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಆಯ್ ಹೆಚ್ ಲಂಬಿ ಮಾತನಾಡಿ, ತಪ್ಪದೇ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು. ನಿಂಗಪ್ಪ ಜಾಡರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಎಲ್ಲಾ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಮಾಲೀಕರು, ಹಾಗೂ ಅಂಗಡಿ ಮಾಲೀಕರು ಉಪಸ್ಥಿತರಿದ್ದರು.