ಸಾಲವನ್ನು ವ್ಯಾಪಾರಕ್ಕೆ ಬಳಸಿ ಅಭಿವೃದ್ಧಿಹೊಂದಿ : ಕೆ.ಷಡಕ್ಷರಿ

ತಿಪಟೂರು :

       ಕೊರೊನಾ ಮಹಾಮಾರಿಯಿಂದ ಜಗತ್ತೇ ಕಠಿಣ ಪರಿಸ್ಥತಿಯಲ್ಲಿದೆ, ಇದರಿಂದ ಯಾರು ಹೊರತಾಗಿಲ್ಲ. ಮುಖ್ಯವಾಗಿ ಬಿದಿಬದಿ ವಾಪಾರಸ್ಥರು ಅತ್ಯಂತ ಸಂದಿಗ್ದ ಪರಿಸ್ಥಿತಿಯನ್ನು ಮನಗಂಡು ಈ ಸಾಲವನ್ನು ನೀಡಲಾಗುತ್ತಿದೆ ಇದನ್ನು ಸೂಕ್ತ ಉದ್ದೇಶಕ್ಕಾಗಿಯೇ ಬಳಸಿಕೊಂಡು ಅಭಿವೃದ್ಧಿ ಹೊಂದಿ ಎಂದು ರಾಷ್ಟ್ರೀಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಮಾಜಿ ಶಾಸಕ ಕೆ.ಷಡಾಕ್ಷರಿ ಕರೆನೀಡಿದರು.

    ನಗರದ ಡಿ.ಸಿ.ಸಿ ಬ್ಯಾಂಕ್‍ನಲ್ಲಿ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂದು ಸಾಲಯೋಜನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಲಾಕ್‍ಡೌನ್‍ನಿಂದಾಗಿ ಮುಖ್ಯವಾಗಿ ಬೀದಿಬದಿವ್ಯಾಪಾರಿಗಳು, ಶ್ರಮಿಕವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಮತ್ತೆ ವ್ಯಾಪಾರ ಪ್ರಾರಂಭಿಸಲು ಈ ವರ್ಗದ ಜನತೆಗೆ ಡಿಸಿಸಿ ಬ್ಯಾಂಕ್ ತಿಪಟೂರು ಶಾಖೆಯಿಂದ ಶೂನ್ಯ ಬಡ್ಡಿ ದರದಲ್ಲಿ ಹತ್ತು ಸಾವಿರದವರೆಗೂ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತಿದ್ದಾರೆ.

     ಈ ಸಾಲವನ್ನು ಪಡೆದು ತಾವು ಅಭಿವೃದ್ಧಿಹೊಂದುವುದರೊಂದಿಗೆ ತಾವುಗಳೂ ಬೇಗ ಸಾಲವನ್ನು ತೀರಿಸಿದರೆ ಇನ್ನು ಹಲವಾರು ಜನರಿಗೆ ಸಾಲ ದೊರೆತು ಅವರಿಗೂ ಅನುಕೂಲವಾಗುತ್ತದೆ ಆದ್ದರಿಂದ ತಾವು ಸಾಲವನ್ನು ತೀರಿಸಿ ತಾವು ಸಾಲದಿಂದ ಮುಕ್ತರಾಗುವುದರೊಂದಿಗೆ ಇತರರಿಗೆ ಮಾದರಿಯಾಗಬೇಕೆಂದು ವ್ಯಾಪಾರಿಗಳಿಗೆ ತಿಳಿಸಿದರು.

    ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಮತ್ತೆ ಅವರು ವ್ಯಾಪಾರ ಪ್ರಾರಂಭಿಸಲು ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಅವರು ಖಾಸಗಿಯವರ ಮೀಟರ್ ಬಡ್ಡಿ ಕಪಿಮುಷ್ಠಿಗೆ ಸಿಲುಕಿ ಪರದಾಡುವುದನ್ನು ನಿಯಂತ್ರಿಸಲು ಡಿ.ಸಿ.ಸಿ ಬ್ಯಾಂಕ್ ಅದ್ಯಕ್ಷರಾದ ಕೆ.ಎನ್.ರಾಜಣ್ಣ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೆ.ಎನ್.ರಾಜಣ್ಣನವರ ಮನವಿ ಸ್ಪಂದಿಸಿದ ಹಿನ್ನಲೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಜಿಲ್ಲಾದ್ಯಾಂತ ಬಡವರ ಬಂಧು ಯೋಜನೆಯಡಿಯಲ್ಲಿ ಶೂನ್ಯ ಬಡ್ಡಿಯಲ್ಲಿ ಕನಿಷ್ಟ ಹತ್ತುಸಾವಿರ ರೂ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಮುದ್ದಪ್ಪ ತಿಳಿಸಿದರು.

   ಕಾರ್ಯಕ್ರಮದಲ್ಲಿ ಡಿ.ಸಿ.ಸಿ ಬ್ಯಾಂಕ್‍ನ ನೋಡಲ್ ಅಧಿಕಾರಿಗಳಾದ ಗೋವಿಂದಪ್ಪ, ಅರುಣ್‍ಕುಮಾರ್, ಮಂಜೇಶ್ ಬ್ಯಾಂಕಿನ ಮೇಲ್ವಿಚಾರಕ ಟಿ.ಪಿ.ಉಮಾಶಂಕರ್ ಮತ್ತು ಬ್ಯಾಂಕ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap