ತುರುವೇಕೆರೆ :
ತಾಲೂಕಿನ ಹರಿಕಾರನಹಳ್ಳಿ ಗ್ರಾಮದಲ್ಲಿ ಕಳೆದ 8-10 ದಿನಗಳಲ್ಲಿ ಸುಮಾರು 8-10 ಹಸುಗಳು ಸತ್ತಿರುವುದು ಅಲ್ಲಿಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿಡಿದೆ. ಪ್ರತಿದಿನ ಹತ್ತಾರು ಲೀಟರ್ ಹಾಲು ಕೊಡುತ್ತಿದ್ದ ಸೀಮೆ ಹಸುಗಳಿಗೆ ಗೆರಸಲು ಖಾಯಿಲೆ ಬಂದ ಪರಿಣಾಮವಾಗಿ ಹಸುಗಳು ಕೊನೆಯುಸಿರೆಳೆಯುತ್ತಿವೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸಾದ್ ಮತ್ತು ಗ್ರಾಮದ ಮುಖಂಡ ಸಿದ್ದಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಿಂದ ಈಚೇಗೆ ಇದ್ದಕ್ಕಿಂದ್ದಂತೆ ಹಸುಗಳು ಸಾಯುತ್ತಿವೆ. ರೋಗದ ಯಾವುದೇ ಕುರುಹು ನೀಡದೇ ಹಸುಗಳು ಸಾಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪಶುಸಂಗೋಪನಾ ಇಲಾಖಾ ವೈದ್ಯರಿಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿರುವ ಬಹುತೇಕ ಕುಟುಂಬಗಳು ಹೈನುಗಾರಿಕೆಯನ್ನು ನೆಚ್ಚಿಕೊಂಡಿದೆ.
ಪ್ರತಿಯೊಂದು ಮನೆಯಲ್ಲೂ ಹಸುಗಳಿದ್ದು, ಯಾವುದೋ ರೋಗಕ್ಕೆ ಬಲಿಯಾಗುತ್ತಿರುವುದು ಕುಟುಂಬದ ಸದಸ್ಯರಿಗೆ ನೋವು ತಂದಿದೆ. ಕೂಡಲೇ ಪಶುಸಂಗೋಪನಾ ಇಲಾಖೆಯವರು ಗ್ರಾಮದಲ್ಲಿರುವ ಹಸುಗಳಿಗೆ ಸೂಕ್ತ ಚುಚ್ಚುಮದ್ದು ನೀಡುವ ಮೂಲಕ ಹಸುಗಳ ಮಾರಣಹೋಮ ತಪ್ಪಿಸಬೇಕೆಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸಾದ್ ಮತ್ತು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
