ಬದಕು ಕಟ್ಟಿಕೊಳ್ಳುವ ಕಡೆ ಚಿಂತನೆ ಮಾಡಿ

ಚಿತ್ರದುರ್ಗ:

      ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತನೆ ಕಾಡುತ್ತಿರುತ್ತದೆ. ಆದ್ದರಿಂದ ಅತ್ಯುತ್ತಮ ಅಂಕಗಳನ್ನು ಪಡೆದು ಜೀವನ ರೂಪಿಸಿಕೊಳ್ಳುವ ಕಡೆ ಗಂಭೀರ ಚಿಂತನೆ ಮಾಡಬೇಕು ಎಂದು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ .ಆರ್.ಕೆ.ರಂಗಸ್ವಾಮಿ ಹೇಳಿದರು.

     ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಸ್ಯಶಾಸ್ತ್ರ ವಿಭಾಗದಲ್ಲಿ ಜರುಗಿದ ಪೋಷಕರ ಅಧ್ಯಾಪಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಗತ್ಯ ಮೂಲ ಸೌಲಭ್ಯಗಳಿಗೆ ಕೊರತೆ ಇಲ್ಲ. ಅನುಭವಿ, ನುರಿತ ಅಧ್ಯಾಪಕರ ತಂಡವೇ ಇದೆ. ಭೋದನೆ ವಿಭಾಗ, ಪ್ರಾಯೋಗಾಲಯದ ಸೌಲಭ್ಯಗಳು ಸೇರಿದಂತೆ ಇತರೆ ಮೂಲ ಸೌಲಭ್ಯಗಳಿಂದಾಗಿ ಕಾಲೇಜಿಗೆ ನ್ಯಾಕ್ ಸಮಿತಿ ಮಾನ್ಯತೆ ನೀಡಿರುವುದಲ್ಲದೆ ಏ ಶ್ರೇಣಿ ನೀಡಿದೆ ಎಂದು ಹೇಳಿದರು.

      ಮಕ್ಕಳನ್ನು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಕಳುಹಿಸುವುದೇ ದೊಡ್ಡದಲ್ಲ, ಮಕ್ಕಳು ಏನು ಮಾಡುತ್ತಾರೆನ್ನು ಎನ್ನುವುದನ್ನು ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ನೋಡಬೇಕಾಗುತ್ತದೆ. ಮಕ್ಕಳ ಕುಂದುಕೊರತೆಗಳನ್ನು ತಿಳಿಯಬೇಕಾಗುತ್ತದೆ ಎಂದು ಹೇಳಿದರು.

      ಆಂತರಿಕ ಗುಣಮಟ್ಟದ ಸಂಚಾಲಕ ಡಾ|ಕೆ.ಕೆ.ಕಾಮಾನಿ ಮಾತನಾಡಿ ರಾಷ್ಟ್ರಮಟ್ಟದ 35000 ವಿದ್ಯಾ ಸಂಸ್ಥೆಗಳಲ್ಲಿ ನಮ್ಮ ಕಾಲೇಜು ಎ ಶ್ರೇಣಿ ಪಡೆದಿದೆ. ಶಿಕ್ಷಣ ವಿಭಾಗ ಸೇರಿದಂತೆ ಎಲ್ಲಾ ವಿಧಗಳಲ್ಲೂ ಅತ್ಯುತ್ತಮವಾಗಿದೆ. ಇನ್ನೂ ಉತ್ತಮ ಸೇವಾ ಸೌಲಭ್ಯಗಳು ಬೇಕಿದ್ದರೆ ಅಥವಾ ಕಾಲೇಜಿನಲ್ಲಿ ಯಾವುದೇ ಕೊರತೆ ಇದ್ದರೆ ಪೋಷಕರು ಮಾಹಿತಿ ನೀಡಿದರೆ ಸರಿಪಡಿಸಲಾಗುತ್ತದೆ. ವ್ಯವಸ್ಥೆ ಸರಿಪಡಿಸಲು ಸೂಕ್ತ ಸಲಹೆ ಸೂಚನೆಗಳಗನ್ನು ನೀಡುವಂತೆ ಅವರು ಮನವಿ ಮಾಡಿದರು.

       ಕೆಲವು ಪೋಷಕರು ಮಾತನಾಡಿ ಸ್ನಾತಕೋತ್ತರ ವಿಭಾಗಕ್ಕೆ ಪ್ರತ್ಯೇಕ ಮಹಿಳಾ ಹಾಸ್ಟೆಲ್ ವ್ಯವಸ್ಥೆ ಮಾಡಿಸಬೇಕು. ಸ್ನಾತಕೋತ್ತರ ವಿಭಾಗಕ್ಕೆ ಬೋಧಕೇತರ ಸಿಬ್ಬಂದಿ ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಸಲಹೆಗಳನ್ನು ಹಂಚಿಕೊಂಡರು.

      ಕಾಲೇಜಿನ ಪ್ರಾಂಶುಪಾಲ  ಎಂ.ಬಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋಷಕರ ಪ್ರಶ್ನೆಗಳಿಗೆ ಮೃದುವಾಗಿ ಉತ್ತರಿಸಿದರು. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರಮಾಣಿಕವಾಗಿ ಒದಗಿಸುವುದಾಗಿ ಭರವಸೆ ನೀಡಿದರು.
ಸ್ನಾತಕೋತ್ತರ ವಿಭಾಗಕ್ಕೆ ಸರ್ಕಾರದಿಂದ 3.5 ಕೋಟಿ ಮಂಜೂರಾಗಿದ್ದು ಮೂಲ ಭೂತ ಸೌಕರ್ಯಗಳಿಗೆ ಟೆಂಡರ್ ಪ್ರತಿಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು.

       ಡಾ.ರಮೇಶ್ ಹೆಚ್.ರಟಗೇರಿ ಮಾತನಾಡಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ತಮ್ಮ ಕುಂದು ಕೊರತೆಗಳನ್ನು ಕಾಲೇಜಿನ ಪ್ರಾಧಿಕಾರದ ಜೊತೆ ಚರ್ಚಿಸಿ ಪರಿಹಾರ ಪಡೆದುಕೊಳ್ಳಲು ಸೂಚನೆ ನೀಡಿದರು.

        ಡಾ.ಬಿ.ಲಿಂಗಣ್ಣಯ್ಯ ಮಾತನಾಡಿ ವಿದ್ಯಾರ್ಥಿಗಳ ಕಲಿಕೆ ಮತ್ತು ಸಮಯವನ್ನು ಸದುಪಯೋಗಿಸಿಕೊಂಡು ಜೀವನದಲ್ಲಿ ಜಯಶೀಲರಾಗಲು ಕರೆ ನೀಡಿದರು. ಅಧ್ಯಾಪಕರಾದ ಡಾ.ಎ.ಬಿ.ಬಣಕಾರ್, ಶಶಿರಾಜ್, ವಿಕಾಸ್, ಮಣಿಕಂಠ, ಜ್ಯೋತಿ ಇದ್ದರು. ಚಿದಾನಂದ ನಿರೂಪಿಸಿದರು. ದಿವ್ಯಜ್ಯೋತಿ ಪ್ರಾರ್ಥಿಸಿದರು. ನಿವೇದಿತ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link