ಬ್ಯಾಂಕ್‍ಗೆ ಹಣ ಕಟ್ಟಲು ಹರಸಾಹಸ

ಹೊಸದುರ್ಗ:

       ಯಾವುದೇ ಬ್ಯಾಂಕಾಗಲಿ, ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕಿನ ಬಂಡವಾಳ, ಜನರಲ್ಲಿ ನಿಕಟ ಭಾಂದವ್ಯ ಹೊಂದಿ ನಿರಂತರವಾಗಿ ವ್ಯವಹರಿಸುವ ಸಂಸ್ಥೆಯೆಂದರೆ ಬ್ಯಾಂಕ್.

       ಆದರೆ ಪಟ್ಟಣದ ಎಸ್.ಬಿ.ಐ ಮತ್ತು ಎಸ್.ಬಿ.ಎಂ ಬ್ಯಾಂಕ್ ವಹಿವಾಟು ಮಾಡುವ ಗ್ರಾಹಕರು ರೋಸಿಹೋಗಿದ್ದರೆ. ಬ್ಯಾಂಕ್ ಮತ್ತು ಗ್ರಾಹಕರ ಸಂಬಂಧ ಕೇವಲ ಪತ್ರ ವ್ಯವಹಾರದ ಭಾಂದವ್ಯವಾಗಿರದೇ ಪರಸ್ಪರ ಪರಿಚಯದ ಆತ್ಮೀಯ ಭಾಂದವ್ಯವಾಗಿರಬೇಕು ಆದರೆ ಗ್ರಾಹಕರ ಕುಂದು ಕೊರತೆಗಳನ್ನು ಕೇಳಲು ಬ್ಯಾಂಕ್ ಒಳಗಡೆ ಕಾಲಿಟ್ಟರೆ ಸಾಕು ಸಿಬ್ಬಂದಿಗಳ ಬಾಯಲ್ಲಿ ಇಂಗ್ಲೀಷ್. ಇದು ಕನ್ನಡಿಗರು ನಾಚಿಕೆ ಪಟ್ಟುಕೊಳ್ಳುವಂತಹ ವಿಷಯ. ಗ್ರಾಹಕರ ಮಧ್ಯೆ ಮಾತೃಭಾಷೆಯಲ್ಲಿ ವ್ಯವಹಾರ ನಡೆಸುವುದು ನ್ಯಾಯ ಸಮ್ಮತ ಆದರೆ ಇಲ್ಲಿ ಕನ್ನಡ ಭಾಷೆ ಬಾರದವರನ್ನು ಕೂರಿಸಿ ಗ್ರಾಹಕರಿಗೆ ತಲೆ ಬಿಸಿ ಬರುವಂತೆ ಮಾಡಿದ್ದಾರೆ.

        ಎಸ್.ಬಿ.ಐ ಮತ್ತು ಎಸ್.ಬಿ.ಎಂ ಬ್ಯಾಂಕ್ ಎರಡು ಒಂದೇ ಆಗಿರುವುದರಿಂದ ಗ್ರಾಹಕರು ಬ್ಯಾಂಕಿನಲ್ಲಿ ವ್ಯವಹರಿಸಲು ಹರಸಾಹಸ ಮಾಡುವಂತಾಗಿದೆ. 2 ಸಾವಿರ ಹಣ ಕಟ್ಟಲು ಹೋದ ಗ್ರಾಹಕ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಂಟೆಗಟ್ಟಲೇ ನಿಲ್ಲುವ ಪರಿಸ್ಥಿತಿ ಪರಿಣಾಮಿಸುತ್ತಿದೆ.

         ನಿವೃತ್ತ ಸರ್ಕಾರಿ ಉದ್ಯೋಗಿಗಳು ಹೆಚ್ಚಾಗಿ ಈ ಬ್ಯಾಂಕ್‍ಗಳಲ್ಲಿ ವಹಿವಾಟು ಇಟ್ಟುಕೊಂಡಿರುವುದರಿಂದ ವೃದ್ದರು ತಮ್ಮ ಪೇಂಕ್ಷೇನ್ ಹಣ ಬಿಡಿಸಲು ಹರಸಾಹಸ ಮಾಡುವುದನ್ನು ಕಾಣಬಹುದು.  

        ಪೊಲೀಸರು ಶಿಸ್ತು ಕ್ರಮ ವಹಿಸಿ : ಶಾಲಾ ರಸ್ತೆಯಾಗಿರುವುದರಿಂದ ಬ್ಯಾಂಕಿನ ಮುಂದೆ ಸಾರ್ವಜನಿಕರು ಧ್ವಿಚಕ್ರ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸಿ ಒಳಗೆ ಹೋಗುತ್ತಾರೆ. ವಾಹನಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಬದಲು ರಸ್ತೆಯಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಹೇಳುತ್ತಾರೆ ಪಾದಚಾರಿ ಪ್ರವೀಣ್ ಜಿ ಸ್ವಾತ್ವಿಕ್. ಆದ್ದರಿಂದ ನಮ್ಮ ಪೊಲೀಸರು ಇದರ ಬಗ್ಗೆ ಆದಷ್ಟು ಬೇಗ ಶಿಸ್ತು ಕ್ರಮ ತೆಗೆದುಕೊಳ್ಳಲು ಪ್ರಜಾಪ್ರಗತಿ ಕಳಕಳಿಯಿಂದ ಮನವಿ ಮಾಡುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap