ಹಿರಿಯೂರು :
ಸುಮಾರು 12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತೀಯತೆ ಹಾಗೂ ಮೂಢನಂಬಿಕೆಗಳಂತಹ ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಟ ಮಾಡಿದವರು ಎಂಬುದಾಗಿ ತಾಲ್ಲೂಕು ತಹಶೀಲ್ದಾರ್‍ರಾದ ನಫೀಜಾಬೇಗಂ ಹೇಳಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಶಶಿಕಲಾರವಿಶಂಕರ್ ಮಾತನಾಡಿ, ವಿಶ್ವಮಾನ್ಯ ಬಸವಣ್ಣನವರು ಸಾಮಾಜಿಕ ಸಮನ್ವಯತೆಯ ಹರಿಕಾರ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಸಾರಿದ್ದ ಮಹಾನ್ ಮಾನವತಾವಾದಿ, ಅವರ ಅವಧಿಯಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಅಂತರ್ಜಾತೀಯ ವಿವಾಹಗಳಂತಹ, ಕ್ರಾಂತಿಕಾರಕ ದಿಟ್ಟನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಮಾಡಿದರು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್, ವಾಣಿಕಾಲೇಜಿನ ಪ್ರಾಂಶುಪಾಲ ಧರಣೇಂದ್ರಯ್ಯ, ತಾ.ಪಂ.ಸದಸ್ಯ ಓಕಾಂರಪ್ಪ, ತಾ.ಪಂ.ಅಧಿಕಾರಿ ಅಶ್ವತ್ಥಾಮ, ಶಿಕ್ಷಣ ಸಂಯೋಜಕ ಹರೀಶ್, ಯಶವಂತ್‍ರಾಜ್ ಬಬ್ಬೂರು, ಸರ್ವಮಂಗಳರಮೇಶ್, ಪ್ರಸನ್ನಕುಮಾರ್, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ