ಬರಕನಹಾಳ್ ತಾಂಡಾ : ಕರಡಿ ಸೆರೆ

ಹುಳಿಯಾರು:

    ಹೋಬಳಿಯ ಬರಕನಹಾಳ್ ತಾಂಡಾದ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಕರಡಿಯನ್ನು ಸುರಕ್ಷಿತವಾಗಿ ಚಿತ್ರದುರ್ಗದ ಆಡು ಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಯಿತು.ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶವಾಗಿರುವ ಬೋರನಕಣಿನೆ ಜಲಾಶಯದ ಹಿನ್ನೀರಿನ ಅಂಗಳದ ಸುತ್ತ ಮುತ್ತಲ ಗ್ರಾಮಗಳಾದ ಬರಕನಹಾಳ್, ಮಾರುಹೊಳೆ ಭಾಗದಲ್ಲಿ ಕರಡಿಯೊಂದು ಕಾಣಿಸಿಕೊಳ್ಳುತ್ತಿತ್ತು. ಈ ಭಾಗದ ರೈತರು ಕೃಷಿ ಕೆಲಸಗಳಿಗೆ ಹೋಗಲು ಭಯಭೀತರಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕರಡಿಯನ್ನು ಬೇರೆಡೆಗೆ ಸಾಗಿಸುವಂತೆ ಒತ್ತಡ ಏರಿದ್ದರು.

    ಕರಡಿಯನ್ನು ಕಂಡ ಜನರು ಕೆಲ ಬಾರಿ ಓಡಿ ಗ್ರಾಮ ಸೇರಿಕೊಂಡಿದ್ದರು. ನಿತ್ಯ ಒಂದಲ್ಲ ಒಂದು ಕಡೆ ಕಾಣಿಸಿಕೊಳ್ಳುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಆದಿಕಾರಿಗಳು ಹಿಡಿಯುವ ಪ್ರಯತ್ನ ನಡೆಸಿದ್ದರು. ಬರಕನಹಾಳ್ ಬಳಿಯ ಹೊಸ ಲಂಬಾಣಿ ತಾಂಡಾದ ಗೋಪ್ಯಾನಾಯ್ಕ ಎಂಬುವವರ ತೋಟದಲ್ಲಿ ಬೋನನನ್ನು ಇಡಲಾಗಿತ್ತು.

    ರಾತ್ರಿ ಮೇವು ಹರಿಸಿ ಬಂದ ಕರಡಿ ಬೋನಿಗೆ ಬಿದ್ದಿತ್ತು. ನಂತರ ತಿಪಟೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜಿ.ರವಿ ಅವರ ನೇತೃತ್ವದಲ್ಲಿ ಬುಕ್ಕಾಪಟ್ಟಣ ಪಶು ವೈದ್ಯಾಧಿಕಾರಿಗಳಿಂದ ತಪಾಸಣೆ ನಡೆಸಲಾಯಿತು. ಕರಡಿ ಇದುವರೆಗೂ ಯಾರ ಮೇಲೆಯೂ ದಾಳಿ ಮಾಡಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ನಂತರ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲು ನಿರ್ಧರಿಸಿ ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಎಚ್.ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.

    ಈ ಸಂರ್ಭದಲ್ಲಿ ಬುಕ್ಕಾಪಟ್ಟಣ ಉಪ ವಲಯ ಅರಣ್ಯಾಧಿಕಾರಿ ಟಿ.ಕಿರಣ್, ಅರಣ್ಯ ರಕ್ಷಕ ದಿಲೀಪ್‍ಕುಮಾರ್, ಆರ್.ಶೇಖರ್, ಅರಣ್ಯ ವೀಕ್ಷಕ ಎ.ಆರ್,ಸುರೇಶ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link