ಬಳ್ಳಾರಿ ಬಾಲಕೀಯರ ಮೇಲುಗೈ.

0
10

ಹೊಸಪೇಟೆ :

      ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ ವಿಟಿಯು ಕಲಬುರುಗಿ ವಲಯ ಮಟ್ಟದ ಅಂತರ ಕಾಲೇಜುಗಳ ಬಾಲಕೀಯರ ಥ್ರೋಬಾಲ್ ಪಂದ್ಯಾವಳಿಗೆ ಟಿ.ಬಿ.ಡ್ಯಾಂ ಸಿಪಿಐ ವಿ.ನಾರಾಯಣ ಚಾಲನೆ ನೀಡಿದರು.

       ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು (ಪ್ರಥಮ), ಬಾಗಲಕೋಟೆಯ ಬಸವೇಶ್ವರ ತಾಂತ್ರಿಕ ಕಾಲೇಜು (ದ್ವಿತೀಯ) ಸ್ಥಾನ ಗಳಿಸಿದವು.

      ವಿಜೇತರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸೈಯದುದ್ದೀನ್, ಪ್ರಾಚಾರ್ಯ ಡಾ.ಎಸ್.ಎಂ.ಶಶಿಧರ ಬಹುಮಾನ ವಿತರಿಸಿದರು.

    ಆಡಳಿತ ಮಂಡಳಿಯ ಸದಸ್ಯ ಜಿ.ಎನ್.ಸತೀಶ, ಬಳ್ಳಾರಿಯ ಆರ್‍ವೈಎಂಇಸಿ ದೈಹಿಕ ಶಿಕ್ಷಣ ನಿರ್ದೇಶಕ ವಿಜಯ ಮಂಹಾಂತೇಶ್, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಯು.ಎಂ.ರೋಹಿತ್, ಪ್ಲೇಸ್‍ಮೆಂಟ್ ಆಫೀಸರ್ ಪಾರ್ವತಿ ಕಡ್ಲಿ, ದೈಹಿಕ ಶಿಕ್ಷಕಕೆ.ಎಂ.ಮಂಜುನಾಥ, ಪ್ರಾಧ್ಯಾಪಕರಾದ ಎ.ಗಿರೀಶ್, ಪ್ರಮೋದಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here