ಹೊಸಪೇಟೆ:
ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗೀಯ ಅಪರ ಆಯುಕ್ತ ಡಾ. ಷಣ್ಮುಖ, ತಾಲ್ಲೂಕಿನ ಪಿ.ವಿ.ಎಸ್.ಬಿ.ಸಿ. ಪ್ರೌಢಶಾಲೆಗೆ ಭಾನುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ಧತೆಗಾಗಿ ಶಾಲೆಯಲ್ಲಿ ಆರಂಭಿಸಿರುವ ರಾತ್ರಿ ಶಾಲೆಗೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಲಿಕಾ ತೀವ್ರ ನಿಗಾ ತರಗತಿಗಳ ಕುರಿತು ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕಾರ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದರು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ತೆಗೆದುಕೊಂಡ ಕ್ರಮ ಹಾಗೂ ದಾಖಲೆಗಳ ಮಾಹಿತಿ ಪಡೆದರು.
ಕಲಬುರಗಿ ವಿಭಾಗ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಿಗೂ ಇದೇ ಮಾದರಿಯನ್ನು ಅನುಸರಿಸಿ ಉತ್ತಮ ಫಲಿತಾಂಶ ಪಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಶೈಕ್ಷಣಿಕ ಪ್ರಗತಿ ಸಾಧಿಸುವ ಬಳ್ಳಾರಿ ಮಿಷನ್ ರ್ಫಾ ಎಜುಕೇಷನ್ ರೂಪಿಸಿದ್ದ ಜಿಲ್ಲಾಡಳಿತ ಯೋಜನೆಗೆ ಭಾರತ ಸರ್ಕಾರದ ಗಣಿ ಮಂತ್ರಾಲಯದ ವತಿಯಿಂದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಅತ್ಯುತ್ತಮ ಯೋಜನೆ ಪ್ರಶಸ್ತಿ ಸಂದಿರುವುದಕ್ಕೆ ಅಭಿನಂದಿಸಿದರು.
ಹೊಸಪೇಟೆ ಕ್ಷೇತ್ರಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ, ಹಗರಿಬೊಮ್ಮನಹಳ್ಳಿ ಕ್ಷೇತ್ರಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುರಾಜ ಪಾಟೀಲ, ಮುಖ್ಯಗುರುಗಳಾದ ಬಸವರಾಜ ಬಿ.ಎಸ್., ಆಡಳಿತ ಮಂಡಳಿ ಸದಸ್ಯರಾದ ಭಾನುಕಿರಣ್, ರಾಘವೇಂದ್ರಗುಪ್ತ, ಸುಬ್ರಮಣ್ಯ ಪತ್ತಿಕೊಂಡ ಹಾಗು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಯತ್ನಳ್ಳಿ ಮಲ್ಲಯ್ಯಿಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ