ಭದ್ರಾಮೇಲ್ದಂಡೆ ಯೋಜನೆ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಸಂಸದ

ಚಳ್ಳಕೆರೆ

    ಜಿಲ್ಲೆಯ ರೈತ ಸಮುದಾಯಕ್ಕೆ ಅವಶ್ಯ ಬೇಕಾಗಿರುವ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರೈಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸುರ್ಧೀಘ ಚರ್ಚೆ ನಡೆಸಿದ್ದು, ಇನ್ನು 10 ದಿನಗಳೊಳಗೆ ಯೋಜನೆ ಜಾರಿ ಕುರಿತಂತೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡಿ ಈ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನೂತನ ಸಂಸದ ಎ.ನಾರಾಯಣಸ್ವಾಮಿ ಭರವಸೆ ನೀಡಿದರು.

     ಅವರು, ಸೋಮವಾರ ಇಲ್ಲಿನ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ಬಿಜೆಪಿ ಮಂಡಲವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಪಂಡಿತ್ ದೀನ ದಯಾಳ್, ಶ್ಯಾಮ್‍ಪ್ರಕಾಶ್ ಮುರ್ಖಜಿ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೋದಿಯವರ ಕಾಲದಲ್ಲಿ ಬಿಜೆಪಿ ನೆಲಕಚ್ಚಿ ಮತ್ತೊಮ್ಮೆ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಈ ರಾಷ್ಟ್ರವನ್ನು ಆಳುತ್ತವೆ ಎಂದಿದ್ದರು.

      ಆದರೆ, ಮೊದಲ ಹಂತದಲ್ಲೇ ಜನ ಮನ್ನಣೆಗಳಿಸಿದ ಪ್ರಧಾನ ಮಂತ್ರಿ ನರೇಂದ್ರಮೋದಿ ಐದು ವರ್ಷಗಳ ಕಾಲ ದೇಶದ ಆಡಳಿತವನ್ನು ನಡೆಸಿ ಎಲ್ಲಾ ಹಂತದಲ್ಲೂ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದರು. ಪ್ರತಿನಿತ್ಯ 20 ಗಂಟೆಗಳ ಕಾಲ ರಾಷ್ಟ್ರ, ಬಡ ಜನರ ಹಾಗೂ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಿದರಲ್ಲದೆ ವಿಶ್ವಮಟ್ಟದಲ್ಲಿ ಭಾರತವನ್ನು ಗುರುತಿಸುವಲ್ಲಿ ಕಾರಣ ಕರ್ತರಾದರು.

      ಕಳೆದ 5 ವರ್ಷಗಳ ಅವರ ಆಡಳಿತ ಜನರ ಮನಮುಟ್ಟುವಲ್ಲಿ ಯಶಸ್ಸಿಯಾಯಿತು. ರಾಷ್ಟ್ರದ ಜನತೆ ನರೇಂದ್ರಮೋದಿಯವರು ತೆಗೆದುಕೊಂಡ ದೃಢ ಸಂಕಲ್ಪ ಹಾಗೂ ದೂರದೃಷ್ಠಿ ಯೋಚನೆಗಳನ್ನು ಕೊಂಡಾದಿದರಲ್ಲದೆ ಈ ರಾಷ್ಟ್ರ ಸುಭದ್ರವಾಗಿರಬೇಕಾದರೆ ರಾಷ್ಟ್ರವೂ ಅಭಿವೃದ್ಧಿ ಪದಥತ್ತ ಸಾಗಬೇಕಾದರೆ ಅದು ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಂದ ಮಾತ್ರ ಸಾಧ್ಯವೆಂಬ ಸತ್ಯವನ್ನು ಅರಿತು 2019ರ ಲೋಕಸಭಾ ಚುನಾವಣೆಯಲ್ಲಿ 303 ಸಂಸದರನ್ನು ಆಯ್ಕೆ ಮಾಡಿದರು. ಮೋದಿಯವರ ಶಕ್ತಿ ಹೆಚ್ಚಿಸಲು ಎನ್‍ಡಿಎ ವತಿಯಿಂದ ಹೆಚ್ಚುವರಿಯಾಗಿ 50 ಸಂಸದರು ಆಯ್ಕೆಯಾಗಿ 353 ಸದಸ್ಯರ ಸದೃಢ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದೆ ಎಂದರು.

     ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದನಾಗಿ ಕೇವಲ ಅಧಿಕಾರ ನಡೆಸಲು ಬಂದಿಲ್ಲ. ನಾನು ಜನರ ಸೇವಕನಾಗಿ ಮತದಾರರ ವಿಶ್ವಾಸಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಹಂತದಲ್ಲೂ ಅಧಿಕಾರ ಮತ್ತು ಅಧಿಕಾರಿಗಳಿಗೆ ಮಣಿಯದೆ ಜನ ಹಿತವನ್ನು ಪರಿಗಣಿಸಿ ಕಾರ್ಯನಿರ್ವಹಿಸುವೆ. ಭದ್ರಾ ಮೇಲ್ದಂಡೆ ಯೋಜನೆಯ 35 ಕಿ.ಮೀ ಚಾನಲ್ ಕಾಮಗಾರಿ 6 ತಿಂಗಳ ಕಾಲ ಹಿಡಿದಿದ್ದು, ಈ ಯೋಜನೆ ಕ್ರಿಯಾಶೀಲವಾಗಿ ಮುಂದುವರೆಯಲು ಅಧಿಕಾರಿ ವರ್ಗವನ್ನು ಚುರುಕುಗೊಳಿಸ ಬೇಕಿದೆ ಎಂದರು.

      ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ ಆಯ್ಕೆ ಮಾಡಲು ಮತ ನೀಡಿದ ಮೋದಿಯವರ ಶಕ್ತಿಯನ್ನು ಹೆಚ್ಚಿಸಿದ ಜಿಲ್ಲೆಯ ಪ್ರತಿಯೊಬ್ಬ ಮತದಾರನಿಗೂ ನಾನು ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯಗಳಿದ್ದಲ್ಲಿ ಪಕ್ಷ ಬೇದ, ಜಾತಿಬೇದ ಮರೆತು ಕಾರ್ಯನಿರ್ವಹಿಸುವೆ. ನಿಮ್ಮ ಸಮಸ್ಯೆಯ ಬಗ್ಗೆ ಒಂದು ಮನವಿ ನೀಡಿದರೆ 7 ದಿನಗಳೊಳಗೆ ಅದಕ್ಕೆ ಉತ್ತರ ದೊರಕಲಿದೆ. ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಶ್ರಮದ ಮೇಲೆ ಕಟ್ಟಿದ ಪಕ್ಷವಾಗಿದ್ದು, ಬಿಜೆಪಿ ಗೆಲುವಿನಲ್ಲಿ ಆರ್‍ಎಸ್‍ಎಸ್, ಭಜರಂಗದಳ, ಟೀಂ ಮೋದಿ ಕಾರ್ಯಕರ್ತರ ಶ್ರಮವೂ ಅಡಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link