“ ಶಹೀದ್ ಭಗತ್ ಸಿಂಗ್ “ ರವರ 89ನೇ ಹುತಾತ್ಮ ದಿನ

ಬಳ್ಳಾರಿ:

        “ ಭಗತ್‍ಸಿಂಗ್‍ರವರ ವಿಚಾರಗಳು ಇಂದಿನ ಹೋರಾಟಗಳಿಗೆ ಸ್ಪೂರ್ತಿ“ ಎಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಸುರೇಶ್.ಜಿ ಹೇಳಿದರು. ಬಳ್ಳಾರಿ ನಗರದ ವೀರಶೈವ ಪದವಿ ಕಾಲೇಜುನಲ್ಲಿ ಶಹೀದ್ ಭಗತ್‍ಸಿಂಗ್‍ರವರ 89ನೇ ಹುತಾತ್ಮ ದಿನವನ್ನು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯಿಂದ ಆಚರಿಸಲಾಯಿತು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಸುರೇಶ್ ಸರ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಭಗತ್‍ಸಿಂಗ್‍ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

          ಪ್ರಾಸ್ತಾವಿಕವಾಗಿ ಮಾತನಾಡಿದ ಎಐಡಿಎಸ್‍ಓ ಜಿಲ್ಲಾಸಮಿತಿ ಸದಸ್ಯರಾದ ಕೆ.ಈರಣ್ಣರವರು ಭಗತ್‍ಸಿಂಗ್‍ರ ಕ್ರಾಂತಿಕಾರಿ ಹೋರಾಟವು ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿತು, ಹೆಚ್‍ಅರ್‍ಎ ಕ್ರಾಂತಿಕಾರಿ ಸಂಘಟನೆಯಲ್ಲಿ ಸೇರಿ ವಿಚಾರವನ್ನು ಗಟ್ಟಿಗೊಳಿಸಿ ಹೋರಾಟಗಳನ್ನು ಬೆಳೆಸಿ ಹೆಚ್‍ಎಸ್‍ಅರ್‍ಎ ನ್ನು ಕಟ್ಟಿ ಸಮಾಜವಾದ ವಿಚಾರದ ಮೇಲೆ ಕ್ರಾಂತಿಕಾರಿ ಹೋರಾಟಗಳನ್ನು ಕಟ್ಟಿದರು.

          ಭಾರತ ದೇಶಕ್ಕೆ ಬರೀ ಸ್ವಾತಂತ್ಯ್ರ ಬಂದರೆ ಸಾಕಾಗುವುದಿಲ್ಲ, ಸಮಾಜವಾದಿ ಭಾರತ ಆಗಬೇಕೆಂದು ಬಯಸಿದ್ದರು ಹಾಗೂ ಮಹಾನ್ ರಷ್ಯನ್ ಸಮಾಜವಾದಿ ಕ್ರಾಂತಿಯ ಶಿಲ್ಪಿಯಾದ ಕಾಮ್ರೇಡ್ ಲೆನಿನ್‍ರವರನ್ನು ತಮ್ಮ ಆದರ್ಶವೆಂದು ಪರಿಗಣಿಸಿದ್ದರು. ಕೇವಲ 23ನೇ ವಯಸ್ಸಿಗೆ ಗಲ್ಲುಗಂಬವೇರಿ ಇಡೀ ವಿದ್ಯಾರ್ಥಿ-ಯುವಜನರ ಸ್ಪೂರ್ತಿದಾಯಕರಾದರು ಎಂದರು.

          ಎಐಡಿಎಸ್‍ಓನ ಜಿಲ್ಲಾ ಕಾರ್ಯದರ್ಶಿ ಸುರೇಶ್.ಜಿ ರವರು ಮಾತಾನಾಡುತ್ತಾ ಭಗತ್‍ಸಿಂಗ್‍ರವರು ವೈಚಾರಿಕವಾಗಿ ಕ್ರಾಂತಿಕಾರಿ ದಾರಿಯಲ್ಲಿ ಪಕ್ವತೆಯಿಂದ ಹೋರಾಟದ ಸ್ಪಷ್ಪದಾರಿಯನ್ನು ಕಂಡುಕೊಂಡಿದ್ದರು ಹಾಗಾಗಿ ಭಗತ್‍ಸಿಂಗ್‍ರವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಜ್ವಲಿಸುವ ಧ್ರುವತಾರೆಯಾಗಿದ್ದರೆ, ಇವರ ವಿಚಾರ ಹಾಗೂ ಜೀವನವು ಇಂದಿನ ನಮ್ಮ ಹೋರಾಟದ್ದುಕ್ಕೂ ಪ್ರಸ್ತುತವಾಗಿದೆ. ಅವರ ಸಮಾಜವಾದಿ ಭಾರತದ ಕನಸನ್ನು ನನಸಾಗಿಸಲು ಅವರ ಉತ್ತರಾಧಿಕಾರಿ ಸಂಘಟನೆಯಾಗಿ ಎಐಡಿಎಸ್‍ಓ ದೇಶವ್ಯಾಪಿ ರಾಜಿರಹಿತ ಹೋರಾಟಗಳನ್ನು ಹಾಗೂ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದರು.ಈ ಕಾರ್ಯಕ್ರಮದ ನಿರೂಪಣೆ ವಿಶ್ವನಾಥ್ ನಡೆಸಿದರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link