ಹಾವೇರಿ :
ನಗರದ ಗುರುಭವನದಲ್ಲಿ ಶೈಕ್ಷಣಿಕ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ ಹಾವೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಶೈಕ್ಷಣಿಕ ಭಾರತ ಸೇವಾದಳ ತಾಲೂಕಾ ಸಮಿತಿ ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಭಾರತೀಯ ಸೇವಾದಳ ಮಿಲಾಫ್/ಪುನಃಶ್ಚೇತನ ಕಾರ್ಯಾಗಾರವನ್ನು ಶಾಸಕರಾದ ನೆಹರೂ ಓಲೇಕಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಾರತ ಸೇವಾದಳ ಜಿಲ್ಲೆಯಾದ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಾಲೇಜುಗಳಲ್ಲಿ ಘಟಕಗಳನ್ನು ಸ್ಥಾಪಿಸಬೇಕು.ಜಿಲ್ಲೆಯಲ್ಲಿ ಪ್ರಾಧಿಕಾರದಿಂದ ಮಂಜೂರಾದ ನಿವೇಶನದ ಕೆಲಸಕ್ಕೆ ಮುಂದಾಗೋಣ.ಭಾರತ ಸೇವಾದಳ ಸಂಸ್ಥಾಪಕ ಡಾ|| ನಾ. ಸು. ಹರ್ಡೀಕರ್ ಸ್ಮಾರಕ ಭವನ ನಿರ್ಮಿಸಲು ನನ್ನ ಅನುದಾನದಲ್ಲಿ 5 ಲಕ್ಷ ರೂ.ಗಳನ್ನು ಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಅಧ್ಯಕ್ಷತೆತೆವಹಿಸಿದ ಸೇವಾದಳ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಶಿವಕುಮಾರ ಸಂಗೂರ ಭಾರತ ಸೇವಾದಳ ನಿವೇಶನ ಮತ್ತು ಕಟ್ಟಡದ ಕಾರ್ಯಗಳಿಗೆ ಮತ್ತು ಸೇವಾದಳದ ಚಟುವಟಿಕೆಗಳಿಗೆ ನಿಮ್ಮೊಂದಿಗೆ ಸದಾ ಇದ್ದು ಉತ್ತಮ ಕೆಲಸಗಳಿಗೆ ಮುಂದಾಗಬೇಕಾಗಿದೆ ಎಂದರು. ಪ್ರಾಸ್ತಾವಿಕವಾಗಿ ಜಿಲ್ಲಾ ಸಂಘಟಿಕರಾದ ಪ್ರಕಾಶ ಗೋಣಿಯವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶಿವಣ್ಣ ಸಿ., ಜಿಲ್ಲಾ ಕಾರ್ಯದರ್ಶಿ ವಿಣಾಯಕ ಗಡ್ಡದ, ತಾಲ್ಲೂಕಾ ಉಪಾಧ್ಯಕ್ಷ ಬಾಬಣ್ಣ ಮೋಮಿನಗಾರ, ಸೇವಾದಳದ ಚಂದ್ರಣ್ಣ ದೊಡ್ಡತಳವಾರ,ಎಂ. ಬಿ. ಹಿರೇಮಠ, ದೈ.ಶಿ.ಶಿ. ಹಾವೇರಿ ಸಂಘದ ಅಧ್ಯಕ್ಷ ಎಸ್. ವಿ. ಹಿರೇಮಠ, ಎನ್.ಜಿ.ಓ ಸದಸ್ಯರಾದ ಸಿ.ಹೆಚ್. ಹೊಟ್ಟಿಗೌಡ್ರ, ಶಂಭು ಶೆಟ್ಟರ್,ಆರ್. ಎ. ಹೊಸಮನಿ ಶ್ರೀಮತಿ. ಎಸ್.ಎಂ.ಕಾಮತ್, ಎಂ.ಸಿ.ಕುದರಿ,ವಿ.ಪಿ.ಗೋಣಿ, ಎನ್.ಆಯ್. ಇಚ್ಚಂಗಿ ,ಎಂ.ವಾಯ್.ಮಣ್ಣೂರ,ಸಿ.ಎಸ್.ಅರಳಿಹಳ್ಳಿ,ಮಹೇಶ ಪಾಟೀಲ, ಜಿ.ಎಂ.ದೊಡ್ಡಮನಿ .ಎಂ.ಎನ್.ಅಜ್ಜವಾಡಿಮಠ .ಎಸ್.ಬಿ. ಮಠದ ವಿ. ಎಸ್. ಕಮತರ ಅನೇಕರು ಪಾಲ್ಗೊಂಡಿದ್ದರು.