ಹಾನಗಲ್ಲ
ದ್ವಿಚಕ್ರವಾಹನ ಆಯತಪ್ಪಿ ಬಿದ್ದು ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಹತ್ತಿರ ಸಂಭವಿಸಿದೆ.
ಕೊಪ್ಪರಸಿಕೊಪ್ಪ ಗ್ರಾಮದ ಸಾಗರ ಹುಡೇದ (17). ಮೃತಪಟ್ಟ ದುರ್ದೈವಿಯಾಗಿದ್ದು, ಕೊಪ್ಪರಸಿಕೊಪ್ಪದಿಂದ ಪಾಳಾದಲ್ಲಿರುವ ತಮ್ಮ ತಂದೆಯವರಿಗೆ ಮೋಬೈಲ್‍ನ್ನು ಕೊಟ್ಟು ವಾಪಾಸಾಗುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸಾಗರ ಹುಡೇದ ಹಾನಗಲ್ಲ ಡಿಪ್ಲೋಮಾ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿದ್ದ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾನಗಲ್ಲ ಪಿಎಸ್‍ಐ ಗುರುರಾಜ ಮೈಲಾರ ತನಿಖೆ ಕೈಗೊಂಡಿದ್ದಾರೆ.
