ಬೆಂಗಳೂರು
ನಗರದ ಸೆಂಟ್ರಲ್ ಚರ್ಚ್ ಬಿಷಪ್ ಪಿ.ಕೆ.ಸಾಮ್ಯುಯಲ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಮಹಿಳೆಯೊಬ್ಬರು ಶಿವಾಜಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಚರ್ಚ್‍ನ ಬಿಷಪ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿ ಅವಮಾನ ತಾಳಲಾರದೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದು ಚಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸೆಂಟ್ರಲ್ ಬಿಷಪ್ ಪಿ.ಕೆ.ಸಾಮ್ಯುಯಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಶಿವಾಜಿ ನಗರ ಪೆÇಲೀಸರಿಗೆ ದೂರು ನೀಡಿರುವ ಮಹಿಳೆಯು ದೂರು ಹಿಂಪಡೆಯುವಂತೆ ಸ್ಯಾಮುಯೆಲ್ ಆಪ್ತ ವಿನೋದ್ ದಾಸ್ ಧಮ್ಕಿ ಹಾಕಿದ್ದಾನೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದು, ಪ್ರಕರಣ ಹಿಂಪಡೆಯಲು ವಿನೋದ್ ದಾಸ್ ರಾಜಿ ಸಂಧಾನಕ್ಕಾಗಿ ಬಿಷಪ್ ಬಳಿ ಕರೆದುಕೊಂಡು ಹೋಗಿದ್ದಾಗ ಬಿಷಪ್ ಅವರು ದೂರು ವಾಪಸ್ ಪಡೆಯಲು ಒತ್ತಾಯಿಸಿದ್ದರು ಒಪ್ಪದಿದ್ದಾಗ ಒಂದು ಕೋಟಿ ನೀಡುವುದಾಗಿ ಹೇಳಿದರು ಅದಕ್ಕೂ ಒಪ್ಪದಿದ್ದಾಗ ನನ್ನ ಮೇಲೆ ಕೈ ಹಾಕಿ ಅಸಭ್ಯ ವರ್ತನೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ತನಗಾದ ಅವಮಾನದಿಂದ ಕ್ರಿಮಿನಾಶಕ ಕುಡಿದು ಮಹಿಳೆ ಆತ್ಮಹತ್ಯೆಗೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಷಪ್ ಸ್ಯಾಮುಯೆಲ್ ಮೇಲೆ ಈ ಹಿಂದೆ ಫೋಕ್ಸೋ, ಲೈಂಗಿಕ ದೌರ್ಜನ್ಯ, ಧಮ್ಕಿ, ಭೂ ಕಬಳಿಕೆ ಸೇರಿದಂತೆ ಹಲವು ಕೇಸ್ ಇದೆ. ಸದ್ಯ ಬಿಷಪ್ ಪಿ.ಕೆ.ಸ್ಯಾಮ್ಯುಯೆಲ್ ಮತ್ತು ವಿನೋದ್ ದಾಸ್ ಮೇಲೆ ಪ್ರಕರಣ ದಾಖಲಾಗಿದ್ದು,
ಶಿವಾಜಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ನೊಂದ ಮಹಿಳೆ ಹೇಳಿಕೆ ನೀಡಿದ್ದು, ನಾನು ಕೊಟ್ಟಿರುವ ಹೇಳಿಕೆಯನ್ನು ಪೊಲೀಸರು ತೆಗೆದುಕೊಳ್ಳುತ್ತಿಲ್ಲ. ಏನೇ ಹೇಳಿದರು ಅದನ್ನು ಸುಳ್ಳೆಂದು ಹೇಳುತ್ತಿದ್ದಾರೆ. ನನಗೆ ತುಂಬಾ ಭಯವಾಗುತ್ತಿದೆ ಎಂದು ವಿಡಿಯೋ ಮಾಡಿ ತಮಿಳಿನಲ್ಲಿ ಹೇಳಿಕೆ ನೀಡಿದ್ದು ಅದು ಬಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
