ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆಗೆ ಬಿಜೆಪಿ ತೆರಬೇಕಾಯಿತಲ್ಲ ದುಬಾರಿ ಕಾಣಿಕೆ..!

ಮಧುಗಿರಿ

       ದೇಶದಿಂದಲೇ ಕಾಂಗ್ರೆಸ್ ಹಠಾವೊ, ಕಾಂಗ್ರೆಸ್ ಹಠವೊ ಎಂದು ಹೋದ ಕಡೆಯಲ್ಲೆಲ್ಲಾ ಭಾಷಣ ಬಿಗಿಯುತ್ತಿದ್ದ ಮೋದಿ ಮತ್ತು ಅಮಿತ್ ಶಾ ಎಲ್ಲಿ ಹೋದರು? ಮತ್ತೆ ದೇಶದ ಜನರೆ ಕಾಂಗ್ರೆಸ್ ಪಕ್ಷ ಬೇಕೆನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಸ್.ಕೆ. ಸೈಯದ್ ಕರೀಂ ತಿಳಿಸಿದರು.

        ಪಟ್ಟಣದ ಡೂಂ ಲೈಟ್ ವೃತ್ತದಲ್ಲಿ ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‍ಗಡ, ಮಿಜೋರಾಂ, ತೆಲಂಗಾಣ ರಾಜ್ಯಗಳಲ್ಲಿ ಮಂಗಳವಾರ ವಿಧಾನ ಸಭಾ ಚುನಾವಣಾ ತೀರ್ಪು ಪ್ರಕಟ ಗೊಂಡಿದೆ. 5 ರಾಜ್ಯಗಳಲ್ಲಿ 3 ಕಡೆ ಕಾಂಗ್ರೆಸ್ ಪಕ್ಷ ಬಹುಮತ ಪಡೆದಿದೆ.

       ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಪಕ್ಷ ಸೋಲುತ್ತದೆ ಎಂದು ಬಿಜೆಪಿಯ ಮುಖಂಡರು ಭಾಷಣ ಹೊಡೆಯುತ್ತಿದ್ದರು. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದು, ಈಗ ಉತ್ತರ ಭಾರತದಲ್ಲಿಯೇ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವಲ್ಲಿ ಅವರು ವಿಫಲವಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದರು.

         ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ, ರಾಹುಲ್ ಗಾಂಧಿರವರ ನೇತೃತ್ವದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‍ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಕಂಡಿದೆ. ಈ ಚುನಾವಣೆಗಳ ಫಲಿತಾಂಶದಿಂದಾಗಿ ಮೋದಿಯವರ ವೇಗಕ್ಕೆ ಬ್ರೇಕ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.

        ಸಂಭ್ರಮಾಚರಣೆಯಲ್ಲಿ ಪುರಸಭಾ ಸದಸ್ಯರಾದ ಅಲೀಂ, ನಟರಾಜು, ಮಾಜಿ ಸದಸ್ಯರಾದ ಉಮೇಶ್, ಶಂಕರನಾರಾಯಣ್, ಮಂಜುನಾಥ್, ಮುಖಂಡರಾದ ಆನಂದ್, ಚಂದನ್, ವಿ.ಆರ್. ಭಾಸ್ಕರ್, ಗಂಗರಾಜು, ಅಲೀಂ ಪಾಷ, ಅಬೂಬಕರ್, ಇಮ್ರಾನ್, ಪರ್ವಿಜ್, ಇರ್ಫಾನ್, ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap