ಚೇಳೂರಿನ ಕೊರಚರ ಕಾಲೋನಿಯಲಿ ಅರ್ಧಕ್ಕೆ ನಿಂತಿರುವ ಕೆಆರ್‍ಐಡಿಎಲ್ ನಿಗಮದ ಕಾಮಗಾರಿ

ಚೇಳೂರು

      ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತಂದು ಅದರ ಮುಖಾಂತರ ಗ್ರಾಮಗಳಲಿ ರಸ್ತೆ,ಚಾರಂಡಿಯತಂಹ ಅನೇಕ ರೀತಿಯ ಕಾಮಗಾರಿಗಳನ್ನು ಮಾಡಲು ಸಂಬಂದ ಇಲಾಖೆಯ ಮುಖಾಂತರ ಅದೇಶವನ್ನು ನೀಡುತ್ತಿದೆ. ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿಂದು ಅದರೆ ಚೇಳೂರಿನ ಕೊರಚರ ಕಾಲೋನಿಯಲಿ ಅಮೆ ವೇಗದ ರಸ್ತೆ ಮತ್ತು ಚರಂಡಿಯ ಅರ್ಧ ಬರ್ಧ ಕಾಮಗಾರಿಯಿಂದ ಸುಮಾರು ದಿನಗಳಿಂದ ಇಲ್ಲಿ ವಾಸಮಾಡುತ್ತಿರುವಸಾರ್ವಜನಿಕರಿಗೆ ತುಂಭ ತೊಂದರೆಯಾಗುತ್ತಿದೆ.

       ಕೆಆರ್‍ಐಡಿಎಲ್ ನಿಗಮದವತಿಯಿಂದ ಸುಮಾರು 25 ಲಕ್ಷ ರೂಗಳಲಿ ಚೇಳೂರಿನ ಈ ಭಾಗದಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಪ್ರಾರಂಭ ಮಾಡಿದ್ದು. ನಂತರ ಸುಮಾರು ದಿನಗಳಿಂದ ಗುತ್ತಿಗೆದಾರ ಕೆಲಸಗಳನ್ನು ಮಾಡಿಸದೆ ನೆನೆಗುದಿಗೆ ಬಿದ್ದ ಪರಿಣಾಮ.ಇಲಿರುವ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸಲು ಪೋಷಕರು ಸಹ ಭಯ ಪಡುತ್ತಿದ್ದರೆ ಎಲ್ಲಿ ಮಕ್ಕಳು ಬೀಳುತ್ತಾರೆ ಎಂದು.ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯಗೂ ತೊಂದರೆಯಾಗಿದೆ.

        ಸರಗವಾಗಿ ನೀರು ಚರಂಡಿಯಲಿ ಹೋಗದೆ ಕೊಳೆತ ನೀರಿನಲ್ಲಿ ಸೊಳ್ಳೆಗಳ ವಾಸಸ್ಥಳವಾಗಿ ಸಾರ್ವಜನಿಕರು ಖಾಯಿಲೆಗಳಿಗೆ ತುತ್ತಗುವ ಪ್ರಸಂಗವು ಸಹ ಹೆದುರಗಿದೆ.ವಾಸ ಮಾಡುವ ಮನೆಯ ಮುಂದೆಯೇ ನಿರ್ಮಾಣ ಮಾಡಿರುವ ಚರಂಡಿಯ ಅಕ್ಕ ಪಕ್ಕ ಮಣ್ಣನ್ನು ಸಹ ಹಾಕದಿರುವುದರಿಂದ ಮಹಿಳೆಯರು, ಮಕ್ಕಳು,ವೃದರುತಿರುಗಾಡಲು ಸಹ ತೊಂದರೆಯಾಗಿದೆ. ಹೀಗೆ ಅನೇಕ ರೀತಿಯ ತೊಂದರೆಗಳು ಈ ಅರ್ಧಕ್ಕೆ ನಿಂತಿರುವ ಈ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿದೆ. ಇದರ ಬಗ್ಗೆ ಜನಪ್ರತಿನಿಧಿಗಳಗಲಿ ಹಾಗೂ ಸಂಬಂಧ ಪಟ್ಟವರು ಗಮನ ಹಾರಿಸದ ಪರಿಣಾಮವಾಗಿ.

         ಈ ರೀತಿ ಕಾಮಗಾರಿಗಳನ್ನು ಮಾಡಿಸುವರು ಮುಂದೆ ಉತ್ತಮ ಮಟ್ಟದ ಕಾಮಗಾರಿಯನ್ನು ಮಾಡಿಸುವರೇ ಎಂದು ಸಾರ್ವಜನಿಕರು ಸಹ ದೂರುತ್ತಿದ್ದರೆ. ಇನ್ನದರೂ ಇದಕ್ಕೆ ಸಂಬಂಧ ಪಟ್ಟ ಇಲಾಖೆಯವರು ಗಮನ ಹಾರಸಿ ಸಾರ್ವಜನಿಕರಿಗೆ ಅದಷ್ಟೂ ಬೇಗ ಅನಕೂಲವನ್ನು ಮಾಡಿ ಕೊಡುತ್ತಾರೆಯೇ ಕಾದು ನೋಡಬೇಕಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap